ಅಧಿಕ ಮಾಸದಲ್ಲಿ ಸನಾತನದ ಗ್ರಂಥ ಹಾಗೂ ಕಿರುಗ್ರಂಥಗಳನ್ನು ಇತರರಿಗೆ ನೀಡಿ ಸರ್ವಶ್ರೇಷ್ಠವಾದ ಜ್ಞಾನದಾನದ ಫಲವನ್ನು ಪಡೆಯಿರಿ !
೧. ಅಧಿಕ ಮಾಸದಲ್ಲಿ ಜ್ಞಾನದಾನಕ್ಕೆ ವಿಶೇಷ ಮಹತ್ವ !
೧೮.೯.೨೦೨೦ ರಿಂದ ೧೬.೧೦.೨೦೨೦ ಈ ಕಾಲಾವಧಿಯಲ್ಲಿ ‘ಅಧಿಕ ಮಾಸ ಇದೆ. ‘ಅಧಿಕ ಮಾಸದಲ್ಲಿ ಮಂಗಲಕಾರ್ಯಗಳನ್ನು ಮಾಡದೇ ವಿಶೇಷ ವ್ರತಗಳು ಹಾಗೂ ಪುಣ್ಯಕರ ಕಾರ್ಯವನ್ನು ಮಾಡಬೇಕು, ಎಂದು ಶಾಸ್ತ್ರಕಾರರು ಹೇಳಿದ್ದಾರೆ. ಈ ತಿಂಗಳಿನಲ್ಲಿ ದಾನ ನೀಡಿದರೆ ಅದರ ಹೆಚ್ಚು ಪಟ್ಟು ಫಲ ಸಿಗುತ್ತದೆ. ಆದ್ದರಿಂದ ಈ ಕಾಲದಲ್ಲಿ ವಸ್ತ್ರದಾನ, ಅನ್ನದಾನ ಹಾಗೂ ಜ್ಞಾನದಾನಗಳನ್ನು ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಭಾರತೀಯ ಸಂಸ್ಕೃತಿಯಲ್ಲಿ ‘ಜ್ಞಾನದಾನ ಮಾಡುವುದು, ಇದು ಸರ್ವಶ್ರೇಷ್ಠ ಎಂದು ಪರಿಗಣಿಸಲ್ಪಟ್ಟಿದ್ದರಿಂದ ಅನೇಕರು ಇದಕ್ಕಾಗಿ ಪ್ರಯತ್ನಿಸುತ್ತಿರುತ್ತಾರೆ.
೨. ಸನಾತನದ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತು ಅಂದರೆ ಜ್ಞಾನದಾನಕ್ಕಾಗಿ ಅತ್ಯುತ್ತಮ ಮಾಧ್ಯಮವಾಗಿದೆ !
ಸನಾತನದ ಬಹುವಿಧ ಹಾಗೂ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತು ಅಂದರೆ ಚಿರಂತನ ಜ್ಞಾನದ ಅಮೂಲ್ಯ ಸಂಗ್ರಹವಾಗಿದೆ ! ಸನಾತನವು ಅಧ್ಯಾತ್ಮ, ಸಾಧನೆ, ದೇವತೆಗಳ ಉಪಾಸನೆ, ಆಚಾರಧರ್ಮ, ಧರ್ಮಾಚರಣೆ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ, ಈಶ್ವರಪ್ರಾಪ್ತಿಗಾಗಿ ಕಲೆ, ಆಪತ್ಕಾಲ ದಲ್ಲಿ ಜೀವಂತವಾಗಿರಲು ಉಪಾಯ ಇತ್ಯಾದಿ ವಿಷಯಗಳ ಬಗ್ಗೆ ೩೨೪ ಗ್ರಂಥ ಹಾಗೂ ಕಿರುಗ್ರಂಥಗಳನ್ನು ಪ್ರಕಾಶಿಸಿದೆ. ಈ ಗ್ರಂಥವು ಸುಲಭವಾದ ಭಾಷೆಯಲ್ಲಿ ವಾಚಕರಿಗೆ ಅಮೂಲ್ಯ ಜ್ಞಾನವನ್ನು ನೀಡುತ್ತದೆ, ಅದೇರೀತಿ ಧರ್ಮದ ಬಗ್ಗೆ ಶ್ರದ್ಧೆಯನ್ನೂ ಹೆಚ್ಚಿಸುತ್ತದೆ. ಆದ್ದರಿಂದ ಅಧಿಕ ಮಾಸದಲ್ಲಿ ಇಂತಹ ಗ್ರಂಥಗಳ ಮೂಲಕ ಜ್ಞಾನದಾನವನ್ನು ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಮಾಡಿಕೊಳ್ಳಿರಿ.
ಇತರರಿಗಾಗಿ ನೀಡಲು ಸನಾತನದ ಗ್ರಂಥ ಹಾಗೂ ಕಿರುಗ್ರಂಥಗಳು ಬೇಕಿದ್ದಲ್ಲಿ ತಮ್ಮ ಬೇಡಿಕೆಯನ್ನು ಶೀಘ್ರವಾಗಿ ಸ್ಥಳೀಯ ವಿತರಕರಿಗೆ ನೀಡಿ ಅಥವಾ https://sanatanshop.com/shop/ ಈ ಲಿಂಕ್‌ಗೆ ಭೇಟಿ ನೀಡಿ.
ಸಾಧಕರು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೆ ವಿವಿಧ ವಿಷಯಗಳ ಬಗೆಗಿನ ಗ್ರಂಥಗಳ ಮಾಹಿತಿಯನ್ನು ‘ವಾಟ್ಸ್‌ಅಪ್ ಮೂಲಕ ಕಳುಹಿಸಿ ಹಾಗೂ ಅವರ ಆಸಕ್ತಿಗನುಸಾರ ಗ್ರಂಥಗಳನ್ನು ಆರಿಸಲು ತಿಳಿಸಿರಿ.

ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !