ಮುಂಬಯಿ – ೧೦೩ ನೇ ವಯಸ್ಸಿನಲ್ಲಿ ಕೊರೋನಾವನ್ನು ಗೆದ್ದ ಡೊಂಬಿವಿಲಿ (ಮಹಾರಾಷ್ಟ್ರದ ಠಾಣೆ ಜಿಲ್ಲೆ)ಯ ಸನಾತನದ ಸಂತ ಪೂ. ಆನಂದಿ ಪಾಟೀಲ ಅಜ್ಜಿಯವರಿಂದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಹಾಗೂ ಸಮಾಜಕ್ಕೆ ಹೋರಾಡಲು ಪ್ರೇರಣೆ ದೊರಕಿದೆ. ಮುಖ್ಯಮಂತ್ರಿ ಕಾರ್ಯಾಲಯದಿಂದ ‘ಫೇಸಬುಕ್ ಖಾತೆಯಲ್ಲಿ ಈ ವಿಷಯದಲ್ಲಿ ಪ್ರಕಟಿಸಲಾಗಿರುವ ಸುದ್ದಿಯಲ್ಲಿ ಅನೇಕ ಜನರು ಪೂ. ಆನಂದಿ ಪಾಟೀಲ ಅಜ್ಜಿಯವರನ್ನು ‘ಕೊರೋನಾ ಯೋಧೆ ಎಂದು ಉಲ್ಲೇಖಿಸಿ ಅವರಿಂದ ಪ್ರೇರಣೆ ದೊರಕಿದೆಯೆಂದು ಹೇಳಿದರು ಮತ್ತು ಅವರಿಗೆ ಅಭಿನಂದನೆಯನ್ನು ಕೂಡ ವ್ಯಕ್ತಪಡಿಸಿದರು. ಪೂ. ಆನಂದಿ ಪಾಟೀಲರು ಸನಾತನದ ೫೭ ನೇ ಸಂತರಾಗಿದ್ದಾರೆ. ಅವರು ಡೊಂಬಿವಿಲಿಯಲ್ಲಿ ತಮ್ಮ ಮನೆಯಲ್ಲಿ ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಅವರಿಗೆ ಕೊರೋನಾದ ವರದಿ ‘ಪಾಸಿಟಿವ್ (ಸಕಾರಾತ್ಮಕ) ಬಂದಬಳಿಕ ಸಪ್ಟೆಂಬರ್ ೧೪ ರಂದು ಅವರನ್ನು ಚಿಕಿತ್ಸೆಗಾಗಿ ಡೊಂಬಿವಿಲಿಯ ಸಾವಳಾರಾಮ ಕ್ರೀಡಾಂಗಣದ ಆಸ್ಪತ್ರೆಗೆ ದಾಖಲಿಸಲಾಯಿತು. ಸಪ್ಟೆಂಬರ್ ೨೦ ರಂದು ಮಾಡಲಾದ ಕೊರೋನಾ ಪರೀಕ್ಷೆಯಲ್ಲಿ ಅವರ ವರದಿ ‘ನೆಗೆಟಿವ್ ಎಂದರೆ ಅವರು ಕೊರೋನಾಮುಕ್ತರಾದ ಬಳಿಕ ಅವರನ್ನು ಮನೆಗೆ ಕಳುಹಿಸಲಾಯಿತು.
ಮಹಾರಾಷ್ಟ್ರದ ಮುಖ್ಯಮಂತ್ರಿ ಕಾರ್ಯಾಲಯದ ‘ಫೇಸಬುಕ್ ಖಾತೆಯಲ್ಲಿ ಇದರ ಮಾಹಿತಿಯನ್ನು ಪ್ರಕಟಿಸಿದ ಬಳಿಕ ಸಮಾಜದಿಂದ ಪೂ. ಪಾಟೀಲ ಅಜ್ಜಿಯವರಿಗೆ ಅಭಿನಂದನೆ !
ಮುಖ್ಯಮಂತ್ರಿ ಕಾರ್ಯಾಲಯದ ‘ಫೇಸಬುಕ್ ಖಾತೆಯ ಮೂಲಕ ಪೂ. ಪಾಟೀಲ ಅಜ್ಜಿಯವರು ಕೊರೋನಾವನ್ನು ಗೆದ್ದಿರುವ ಮಾಹಿತಿಯನ್ನು ನೀಡಲಾಯಿತು. ಇದರಲ್ಲಿ ಪೂ. ಪಾಟೀಲ ಅಜ್ಜಿಯವರ ಮುಗುಳ್ನಗೆ ಬೀರುವ ಛಾಯಾಚಿತ್ರವನ್ನು ಸಹ ಪ್ರಕಟಿಸಲಾಯಿತು. ಈ ಮಾಹಿತಿಯನ್ನು ಓದಿ ಅನೇಕ ಜನರು ಪೂ. ಅಜ್ಜಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು, ಹಾಗೆಯೇ ಭಗವಂತನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಒಬ್ಬ ನೆಟ್ಟಿಗರು ‘ಅಜ್ಜಿಯ ಮುಗುಳ್ನಗು ಸುಂದರವಾಗಿದೆ. ‘ಯುವ ಅಜ್ಜಿಯ ಮತ್ತು ನಿಮ್ಮ ಕಾಳಜಿಯನ್ನು ತೆಗೆದುಕೊಂಡ ಆಧುನಿಕ ವ್ಶೆದ್ಯರಿಗೆ ಅಭಿನಂದನೆ ಎಂದು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಅನೇಕರು ಆಧುನಿಕ ವೈದ್ಯರು ಮತ್ತು ವೈದ್ಯಕೀಯ ನೌಕರರನ್ನು ಕೂಡ ಅಭಿನಂದಿಸಿದ್ದಾರೆ.
ಪೂ. ಆನಂದಿ ಪಾಟೀಲ್ ಇವರು ಆಸ್ಪತ್ರೆಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಸೂಕ್ಷ್ಮ ಅಸ್ತಿತ್ವವನ್ನು ನಿರಂತರ ಅನುಭವಿಸುವುದು
ಕರೋನಾವನ್ನು ಗೆದ್ದು ಮನೆಗೆ ಮರಳಿದ ನಂತರ ಪೂ. ಆನಂದಿ ಪಾಟೀಲ್ ಇವರು, ‘ನಾನು ಆಸ್ಪತ್ರೆಗೆ ಹೋಗಿದ್ದೆ, ಆ ಸಮಯದಲ್ಲಿ ಸೂಕ್ಷ್ಮದಿಂದ ಪರಾತ್ಪರ ಗುರು ದೇವರು ನನ್ನೊಂದಿಗೆ ಇದ್ದರು. ಅವರ ಸೂಕ್ಷ್ಮ ಅಸ್ತಿತ್ವವನ್ನು ನಾನು ಸತತ ಅನುಭವಿಸುತ್ತಿದ್ದೆನು, ಎಂದು ಹೇಳಿದರು.
ವೈಶಿಷ್ಟ್ಯಪೂರ್ಣ ಅನುಭವ
‘ಅಜ್ಜಿಯವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮೊದಲ ೨-೩ ದಿನಗಳ ವರೆಗೆ ಆರೋಗ್ಯ ಸರಿ ಇರಲಿಲ್ಲ. ಅನಂತರ, ಅವರು ನಿರಂತರವಾಗಿ ಆನಂದದಲ್ಲಿದ್ದರು. ಅವರು ಆಸ್ಪತ್ರೆಯ ದಾದಿಯರು ಮತ್ತು ಸಿಬ್ಬಂದಿಯೊಂದಿಗೆ ಉತ್ಸಾಹದಿಂದ ಮತ್ತು ಪ್ರೀತಿಯಿಂದ ಮಾತನಾಡಿದರು. ಆದ್ದರಿಂದ, ಹೆಚ್ಚಿನ ದಾದಿಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಅಜ್ಜಿಯೊಂದಿಗೆ ಛಾಯಾಚಿತ್ರ ಗಳನ್ನು ತೆಗೆಯುತ್ತಿದ್ದರು ಎಂದು ಅಜ್ಜಿಯ ಮೊಮ್ಮಗಳಾದ ಸೌ. ದೀಪಾ ಮಾತ್ರೆಯವರು ಹೇಳಿದರು.