ಸಾಧನೆಯಲ್ಲಿನ ನಿಜವಾದ ಸಾತತ್ಯ !

ಪೂ. ಸಂದೀಪ ಆಳಶಿ

‘ಕೆಲವು ಸಾಧಕರಿಂದ ಸಮಷ್ಟಿ ಸೇವೆಯಲ್ಲಿ ತುಂಬಾ ತಪ್ಪುಗಳಾದಾಗ ಅಥವಾ ಅವರಿಗೆ ಅವರ ಸ್ವಭಾವದೋಷ ಮತ್ತು ಅಹಂ ಇವುಗಳ ಅರಿವು ಮಾಡಿಕೊಟ್ಟಾಗ ಅವರಿಗೆ, ‘ಈಗ ನಾನು ಸಾಧನೆಯಲ್ಲಿ ತುಂಬಾ ಹಿಂದಿದ್ದೇನೆ. ಈಗ ನನಗೆ ಸಾಧನೆಯಲ್ಲಿ ಪ್ರಗತಿಯಾಗುವುದಿಲ್ಲ, ಎಂದೆನಿಸುತ್ತದೆ. ‘ಯಾರಾದರೂ ‘ಎವರೆಸ್ಟ್ ಶಿಖರವನ್ನು ಏರಲಿಕ್ಕಿದ್ದರೆ ‘ಅವನು ಏರಲು ಪ್ರಾರಂಭಿಸಿ ಒಂದೇ ಪ್ರಯತ್ನದಲ್ಲಿ ಏರಿದನು, ಹೀಗೆ ಎಂದಿಗೂ ಆಗುವುದಿಲ್ಲ. ಎವರೆಸ್ಟ್ ಏರುವ ಪ್ರಯತ್ನವನ್ನು ಮಾಡುವಾಗ ಅವನು ಕೆಲವು ಬಾರಿ ಕೆಳಗೆ ಬೀಳಬಹುದು. ನಮಗೂ ಸಾಧನೆಯ ಎವರೆಸ್ಟ್ ಶಿಖರವನ್ನು ಏರಲಿಕ್ಕಿದೆ. ‘ಯಾವುದಾದರೊಂದು ಉಚ್ಚಮಟ್ಟದ ಧ್ಯೇಯವನ್ನು ತಲುಪುವಾಗ ಮಧ್ಯಮಧ್ಯದಲ್ಲಿ ನಮ್ಮ ಪ್ರಯತ್ನಗಳ ಶಕ್ತಿಯು ಕಡಿಮೆ ಬೀಳುತ್ತಿರುವುದರಿಂದ ಅಥವಾ ಪ್ರಾರಬ್ಧದಲ್ಲಿರುವ ಅಡಚಣೆಗಳಿಂದಾಗಿ ನಮಗೆ ಸ್ವಲ್ಪ ಸ್ವಲ್ಪ ಸೋಲ ಬೇಕಾಗುವುದು, ಇದನ್ನು ನಾವು ತಿಳಿಯಬೇಕಾಗುತ್ತದೆ. ಆ ಸೋಲು ಕೂಡ ಮಹತ್ವದ್ದಾಗಿರುತ್ತದೆ; ಏಕೆಂದರೆ ಅದರಿಂದಲೇ ಕಲಿತು ನಮಗೆ ಧ್ಯೇಯವನ್ನು ತಲುಪಲು ಸಾಧ್ಯವಾಗುತ್ತದೆ. ‘ಸಾಧನೆಯನ್ನು ಮಾಡುವಾಗ ಒಂದು ವೇಳೆ ಸೋತರೂ, ಸೋಲನ್ನು ಒಪ್ಪಿಕೊಳ್ಳದೇ ಸಾಧನೆಯ ಪ್ರಯತ್ನಗಳನ್ನು ಉತ್ಸಾಹದಿಂದ ಮಾಡುತ್ತಲೇ ಇರುವುದು, ಇದು ಸಾಧನೆಯಲ್ಲಿನ ನಿಜವಾದ ಸಾತತ್ಯವಾಗಿದೆ. – (ಪೂ.) ಶ್ರೀ. ಸಂದೀಪ ಆಳಶಿ (೧೧.೯.೨೦೨೦)