‘ಸಾಧಕರೇ, ಕ್ಷಣಿಕ ಸುಖಕ್ಕಾಗಿ ಸಕಾಮ ಸಾಧನೆಯಲ್ಲಿ ಸಿಲುಕದೇ ಗುರುಕೃಪಾಯೋಗಾನುಸಾರ ಅಷ್ಟಾಂಗ ಸಾಧನೆಯನ್ನು ಮಾಡಿ ಜೀವನವನ್ನು ಸಾರ್ಥಕಗೊಳಿಸಿರಿ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಸಾಧಕರು ಸಕಾಮ ಸಾಧನೆಯ ಕುರಿತು ಮಾರ್ಗದರ್ಶನ ಮಾಡುವವರಿಂದ ಮಾರ್ಗದರ್ಶನ ಪಡೆಯುವುದರಿಂದಾಗುವ ಹಾನಿ

೧ ಅ. ಸಾಧನೆಯ ಮೊದಲ ಹಂತದಲ್ಲಿ ಸಕಾಮ ಸಾಧನೆಯ ಮಾರ್ಗದರ್ಶನ ಸೂಕ್ತವಾಗಿದೆ; ಆದರೆ ಸಾಧನೆಯ ಮುಂದಿನ ಹಂತಕ್ಕೆ ತಲುಪಿದ ವ್ಯಕ್ತಿಗಾಗಿ ಅದು ಪ್ರಾಥಮಿಕ ಹಂತವಾಗಿರುವುದು : ‘ನಾವು ಹಳ್ಳಿ ಹಳ್ಳಿಗಳಲ್ಲಿ ಮತ್ತು ಸಣ್ಣ-ಪುಟ್ಟ ನಗರಗಳಲ್ಲಿಯೂ ‘ಯಾವುದಾದರೊಂದು ವ್ಯಕ್ತಿಯ ಮೈಯಲ್ಲಿ ಬರುವುದು ಅಥವಾ ಸಂಚಾರವಾಗುವುದು ಇಂತಹ ವಿಷಯಗಳನ್ನು ನೋಡುತ್ತವೆ. ಮೈಯಲ್ಲಿ ಸಂಚರಿಸುವ ವ್ಯಕ್ತಿಗಳು ಅನೇಕ ಬಾರಿ ಅವರ ಬಳಿಗೆ ಬರುವ ವ್ಯಕ್ತಿಗಳಿಗೆ ಸಕಾಮದಲ್ಲಿನ ಉಪಾಯಗಳನ್ನು ಹೇಳುತ್ತಾರೆ. ಅವರು ಅವರ ಬಳಿಗೆ ಬರುವ ಭಕ್ತರಿಗೆ ‘ನೀವು ನೌಕರಿಯನ್ನು ಮಾಡಿರಿ, ಮದುವೆ ಮಾಡಿಕೊಳ್ಳಿರಿ ಮತ್ತು ಮನೆಯನ್ನು ನೋಡಿಕೊಳ್ಳುತ್ತ ಸಾಧನೆಯನ್ನು ಮಾಡಿರಿ, ಎಂದು ಹೇಳುವುದು ಕಂಡುಬರುತ್ತದೆ. ಆದುದರಿಂದ ವ್ಯಕ್ತಿಗಳು ಮಾಯೆಯಲ್ಲಿ ಸಿಲುಕುತ್ತಾರೆ. ಸಾಧನೆಯಲ್ಲಿನ ಪ್ರಾಥಮಿಕ ಹಂತದ ಜನರಿಗೆ ಸಂಚಾರವಾಗಿರುವ ವ್ಯಕ್ತಿಗಳು ಹೇಳಿದ ಉಪಾಯಗಳು ಸ್ವಲ್ಪ ಮಟ್ಟಿಗೆ ಸೂಕ್ತವಾಗಿರುತ್ತದೆ. ಯಾವುದೇ ಸಾಧನೆಯನ್ನು ಮಾಡದಿರುವವರಿಗೆ ಹೀಗೆ ಹೇಳುವುದು ಸರಿಯಿದೆ; ಆದರೆ ಯಾರು ಸಾಧನೆಯಲ್ಲಿ ಮುಂದಿನ ಹಂತಕ್ಕೆ ತಲುಪಿರುತ್ತಾರೆ, ಅವರಿಗೆ ಹೀಗೆ ಹೇಳುವುದೆಂದರೆ, ಮಹಾವಿದ್ಯಾಲಯದಲ್ಲಿ ಕಲಿಯುವ ವ್ಯಕ್ತಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡಿದಂತಾಗುತ್ತದೆ.

೧ ಆ. ಸಂಚಾರವಾಗುವ ವ್ಯಕ್ತಿಗಳು ಆಧ್ಯಾತ್ಮಿಕ ದೃಷ್ಟಿಯಿಂದ ಉತ್ತಮವಾಗಿರುವುದು ಅವಶ್ಯಕವಿರುವುದು, ಕೆಲವು ಸಮಯದಲ್ಲಿ ಅವರ ಮಾಧ್ಯಮದಿಂದ ಅನಿಷ್ಟ ಶಕ್ತಿಯು ಅಯೋಗ್ಯ ಮಾರ್ಗದರ್ಶನವನ್ನು ಮಾಡಿ ಸಾಧನೆಯಿಂದ ವಿಮುಖಗೊಳಿಸುವುದು : ‘ಮೈಯಲ್ಲಿ ಸಂಚಾರವಾಗುವ ವ್ಯಕ್ತಿಯು ಒಳ್ಳೆಯವರಾಗಿದ್ದಾರೆಯೇ ? ಅವರ ಅಧ್ಯಾತ್ಮಿಕ ಸಾಧನೆ ಇದೆಯೇ ? ನಮ್ಮ ಅಡಚಣೆಗಳಿಂದ ದುರುಪಯೋಗ ಮಾಡಿಕೊಳ್ಳುತ್ತಿಲ್ಲವಲ್ಲ ?, ಎಂಬುದನ್ನು ನೋಡುವುದೂ ಅಷ್ಟೇ ಆವಶ್ಯಕವಿದೆ. ಮೈಯಲ್ಲಿ ಸಂಚಾರವಾಗುವ ವ್ಯಕ್ತಿಗಳು ಒಳ್ಳೆಯವರಾಗಿರದಿದ್ದರೆ ಮತ್ತು ಅವರ ಸಾಧನೆಯಿಲ್ಲದಿದ್ದರೆ, ಇಂತಹ ಸಂಚಾರದ ಮಾಧ್ಯಮದಿಂದ ಅನೇಕ ಬಾರಿ ಕೆಟ್ಟಶಕ್ತಿಯು ಅಯೋಗ್ಯ ಮಾರ್ಗದರ್ಶನ ಮಾಡಿ ನಮ್ಮನ್ನು ಸಾಧನೆಯನ್ನು ಪರಾವೃತ್ತಗೊಳಿಸಬಹುದು. ಆದುದರಿಂದ ಸಾಧಕರು ಸಾಧನೆಯಲ್ಲಿನ ಉನ್ನತ ವ್ಯಕ್ತಿ ಮತ್ತು ಅಧಿಕಾರಿ ಸಂತರ ಮಾರ್ಗದರ್ಶನವನ್ನು ಪಡೆಯುವುದು ಹೆಚ್ಚು ಹಿತಕರವಾಗಿದೆ.

೧ ಇ. ಸಂಚಾರವಾಗುವ ವ್ಯಕ್ತಿಗೆ ಸ್ವರ್ಗಲೋಕದವರೆಗೆಯೇ ಜ್ಞಾನವಿರುವ ಸಾಧ್ಯತೆ ಇರುವುದರಿಂದ ಅವರು ಹೇಳಿದ ಉಪಾಯಗಳನ್ನು ಮಾಡುವುದರಿಂದ ಕೇವಲ ಕ್ಷಣಿಕ ಸುಖವು ಸಿಗುವುದು : ಅನೇಕ ಬಾರಿ ಯಾವ ವ್ಯಕ್ತಿಗಳಲ್ಲಿ ಸಂಚಾರವಾಗುತ್ತದೆಯೋ, ಅವರಿಗೆ ಕೇವಲ ಸ್ವರ್ಗಲೋಕ ಅಥವಾ ಭುವಲೋಕದವರೆಗಿನ ಜ್ಞಾನವಿರುತ್ತದೆ. ಅವರಿಗೆ ಕೆಲವು ಬಾರಿ ಶಕ್ತಿಯ ಮಟ್ಟದ ಕನಿಷ್ಠ ದೇವತೆಗಳು ಸಹಾಯ ಮಾಡುತ್ತಾರೆ. ಸ್ವರ್ಗಲೋಕವೆಂದರೆ ಸುಖ ಮತ್ತು ಆದುದರಿಂದ ಈ ಕನಿಷ್ಠ ಮಟ್ಟದ ಶಕ್ತಿಗಳ ಮಾರ್ಗದರ್ಶನವೂ ಅಷ್ಟಕ್ಕಷ್ಟೆ ಕ್ಷಣಿಕ ಸುಖವನ್ನು ಕೊಡುವಂತಹದ್ದಾಗಿರುತ್ತದೆ. ಆದರೆ ಸಾಧನೆಯಲ್ಲಿ ಮುಂದೆ ಹೋಗಿ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳಲು ಮುಂದಿನ ಉಚ್ಚ ಮಟ್ಟದ ಮಾರ್ಗದರ್ಶನದ ಆವಶ್ಯಕತೆಯಿರುತ್ತದೆ.

೨. ಗುರುಕೃಪಾಯೋಗಾನುಸಾರ ಅಷ್ಟಾಂಗ ಸಾಧನೆಯಿಂದಾಗುವ ಲಾಭ

೨ ಅ. ಗುರುಕೃಪಾಯೋಗಾನುಸಾರ ಅಷ್ಟಾಂಗ ಸಾಧನೆ ಮಾಡಿದರೆ ಸಗುಣದಿಂದ ನಿರ್ಗುಣದ ಕಡೆಗೆ ಬೇಗ ಹೋಗಿ ಈಶ್ವರಪ್ರಾಪ್ತಿಯಾಗುವುದು : ಪರಾತ್ಪರ ಗುರು ಡಾ. ಆಠವಲೆಯವರು ಗುರುಕೃಪಾಯೋಗಾನುಸಾರ ಹೇಳಿದ ಅಷ್ಟಾಂಗ ಸಾಧನೆಯ ಮಾರ್ಗದಿಂದ ಸಾಧನೆಯನ್ನು ಮಾಡಿದರೆ ಸಾಧಕರು ಮಾಯೆಯಲ್ಲಿ ಸಿಲುಕದೇ ಬೇಗ ಈಶ್ವರಪ್ರಾಪ್ತಿ ಮಾಡಿಕೊಳ್ಳಬಹುದು. ಈ ಸಾಧನೆಯಲ್ಲಿ ಸಾಧಕನಿಗೆ ಸಕಾಮದಲ್ಲಿ ಸಿಲುಕದೇ ನಿಷ್ಕಾಮ ಸಾಧನೆ ಮಾಡುವುದಕ್ಕೆ ಕಲಿಸಲಾಗುತ್ತದೆ. ಗುರುಕೃಪಾಯೋಗಾನುಸಾರ ಹೇಳಿದ ಸಾಧನೆಯು ಸಾಧಕನನ್ನು ಸಗುಣದಿಂದ ನಿರ್ಗುಣದ ಕಡೆಗೆ ಬೇಗನೇ ಒಯ್ಯುತ್ತದೆ.

೨ ಆ. ಸ್ವಭಾವದೋಷ ನಿರ್ಮೂಲನೆ ಮುಂತಾದ ಸಾಧನೆ ಮಾಡುವುದರಿಂದ ಚಿರಂತನ ಆನಂದದ ಪ್ರಾಪ್ತಿಯಾಗುವುದು : ಸಾಧಕರು ಪ್ರಾಥಮಿಕ ಹಂತದ ಮತ್ತು ಶಕ್ತಿಯ ಮಟ್ಟದ ಸಾಧನೆಯನ್ನು ಹೇಳಿ ಸಕಾಮದಲ್ಲಿ ಸಿಲುಕಿಸುವವರ ಬಳಿ ಹೋಗಿ ನಮ್ಮ ಅಮೂಲ್ಯ ಜೀವನವನ್ನು ವ್ಯರ್ಥಗೊಳಿಸುವ ಬದಲು ಸ್ವಭಾವದೋಷ ನಿರ್ಮೂಲನೆ ಮುಂತಾದ ಸಾಧನೆಯನ್ನು ಮಾಡಿ ಆನಂದದ ಜೀವನವನ್ನು ಬದುಕುವುದಕ್ಕಾಗಿ ಪ್ರಯತ್ನಿಸಿದರೆ ಜೀವನದ ಸಾರ್ಥಕವಾಗುವುದು. – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಬೆಂಗಳೂರು (೧೮.೧೧.೨೦೧೮)