ಮಾಸ್ಕ್ ಹಾಕಿಕೊಳ್ಳದವರಿಗೆ ೫ ರಿಂದ ೧೫ ದಿನಗಳವರೆಗೆ ಕೋವಿಡ್ ಕೇಂದ್ರದಲ್ಲಿ ಕೆಲಸ ಮಾಡುವ ಶಿಕ್ಷೆ ನೀಡಿ ! – ಗುಜರಾತ ಉಚ್ಚ ನ್ಯಾಯಾಲಯ
ಕೊರೋನಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಜನರಿಗೆ ಯಾವುದಾದರೊಂದು ಕೋವಿಡ್ ಕೇಂದ್ರದಲ್ಲಿ ಕನಿಷ್ಠ ೫ ರಿಂದ ಗರಿಷ್ಠ ೧೫ ದಿನಗಳವರೆಗೆ ಸೇವೆ ಸಲ್ಲಿಸುವ ಶಿಕ್ಷೆ ವಿಧಿಸಬೇಕು. ಅವರಿಂದ ದಿನಕ್ಕೆ ೪-೫ ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳುವಂತೆ ಗುಜರಾತ ಉಚ್ಚನ್ಯಾಯಾಲಯ ಗುಜರಾತ್ ಸರಕಾರಕ್ಕೆ ಆದೇಶ ನೀಡಿದೆ.