ದೇಶಾದ್ಯಂತ ‘ಲೋನ್ ವುಲ್ಫ್’ ದಾಳಿಗಳಿಗಾಗಿ ಭಯೋತ್ಪಾದಕರನ್ನು ಸಿದ್ಧಪಡಿಸುತ್ತಿದ್ದ ಫರಾಜ್!

  • ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಮೊಹಮ್ಮದ್ ಫರಾಜ್‌ನಿಂದ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯ

  • ದೇವಬಂದ್ (ಉತ್ತರಪ್ರದೇಶ) ಮದರಸಾದಲ್ಲಿ ಶಿಕ್ಷಣ ಪಡೆದಿದ್ದನು

(‘ಲೋನ್ ವುಲ್ಫ್’ ಅಂದರೆ ‘ಒಬ್ಬನೇ ದಾಳಿ ನಡೆಸುವವನು’)

ಭೋಪಾಲ್ (ಮಧ್ಯಪ್ರದೇಶ) – ಇಲ್ಲಿಂದ ಬಂಧಿಸಲಾದ 35 ವರ್ಷದ ಮೊಹಮ್ಮದ್ ಫರಾಜ್‌ನ ತನಿಖೆಯಿಂದ ಮಧ್ಯಪ್ರದೇಶ ಭಯೋತ್ಪಾದನಾ ವಿರೋಧಿ ದಳಕ್ಕೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಫರಾಜ್ ಕರೋನಾ ಸಾಂಕ್ರಾಮಿಕದ ಸಮಯದಿಂದ ಇಂಟರ್ನೆಟ್‌ನಲ್ಲಿ ಕಟ್ಟರವಾದಿ ಸಾಹಿತ್ಯವನ್ನು ಹುಡುಕುತ್ತಿದ್ದನು ಮತ್ತು ನಂತರ ಅವನು ಭಯೋತ್ಪಾದಕನಾದನು. ಅವನ ಉದ್ದೇಶ ‘ಲೋನ್ ವುಲ್ಫ್’ ದಾಳಿಕೋರರನ್ನು ಸಿದ್ಧಪಡಿಸುವುದಾಗಿತ್ತು. ಅವನು ಅಫ್ಘಾನಿಸ್ತಾನಕ್ಕೆ ಪರಾರಿಯಾಗುವ ಪ್ರಯತ್ನದಲ್ಲಿದ್ದನು. ಪೊಲೀಸರು ಫರಾಜ್‌ನನ್ನು ಜೂನ್ 12 ರಂದು ಇಲ್ಲಿನ ಕಾಂಗ್ರೆಸ್‌ನಗರ (ಖಾಜಿ ಕ್ಯಾಂಪ್) ಭಾಗದಿಂದ ಬಂಧಿಸಿದರು. 4 ದಿನಗಳ ವಿಚಾರಣೆಯ ನಂತರ ವಿಶೇಷ ನ್ಯಾಯಾಲಯವು ಅವನಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತು.

ತನಿಖೆಯಲ್ಲಿ, ಪಶ್ಚಿಮ ಉತ್ತರಪ್ರದೇಶದ ದೇವಬಂದ್‌ನಲ್ಲಿರುವ ಮದರಸಾದಲ್ಲಿ ಶಿಕ್ಷಣ ಪಡೆದ ಫರಾಜ್‌ಗೆ ಭಯೋತ್ಪಾದಕ ಸಾಹಿತ್ಯವನ್ನು ಓದುವ ಮತ್ತು ಅವುಗಳ ಕುರಿತಾದ ವೀಡಿಯೊಗಳನ್ನು ವೀಕ್ಷಿಸುವಲ್ಲಿ ಆಸಕ್ತಿ ಹುಟ್ಟಿಕೊಂಡಿತು ಎಂದು ತಿಳಿದುಬಂದಿದೆ. ಕಾಲಕ್ರಮೇಣ ಅವನ ಸಂಪರ್ಕವು ವಿದೇಶಿ ‘ಹ್ಯಾಂಡ್ಲರ್’ (ಭಯೋತ್ಪಾದಕರ ನಡುವೆ ಸಮನ್ವಯ ಸಾಧಿಸುವ ವ್ಯಕ್ತಿ) ನೊಂದಿಗೆ ಆಯಿತು, ಈತ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಶಂಕಿಸಲಾಗಿದೆ. ಇಲ್ಲಿಂದಲೇ ಅವನು ಕಟ್ಟರವಾದಿಯಾಗುವ ಪ್ರಕ್ರಿಯೆಯು ವೇಗಗೊಂಡಿತು.

ಫರಾಜ್‌ನ ಮೊಬೈಲ್‌ನಲ್ಲಿ ದೊರೆತ ಅಂಶಗಳು ಹೀಗಿವೆ…

1. ಅರೇಬಿಕ್ ಭಾಷೆಯ ಜಿಹಾದಿ ಸಾಹಿತ್ಯ

2. ನೂರಾರು ವೀಡಿಯೊಗಳು

3. ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಪ್ರಚಾರ ಸಾಮಗ್ರಿ

4. ಹತರಾದ ಭಯೋತ್ಪಾದಕರನ್ನು ವೈಭವೀಕರಿಸುವ ವೀಡಿಯೊಗಳು

5. ವಿವಿಧ ದೇಶಗಳ ಭಯೋತ್ಪಾದಕ ತರಬೇತಿಯ ದೃಶ್ಯಗಳು

6. ಕಟ್ಟರವಾದಿ ವಕ್ತಾರರ ಭಾಷಣಗಳು

ಸಂಪಾದಕೀಯ ನಿಲುವು

ಇಂತಹ ಭಯೋತ್ಪಾದಕರನ್ನು ಸಿದ್ಧಪಡಿಸುವ ಎಲ್ಲಾ ಮದರಸಾಗಳ ಮೇಲೆ ಭಾರತದಲ್ಲಿ ಯಾವಾಗ ನಿಷೇಧ ಹೇರಲಾಗುವುದು? ಭಾರತವು ಇಸ್ಲಾಮಿಸ್ತಾನ್ ಆಗುವ ಮುನ್ನವೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಈಗ ರಾಷ್ಟ್ರಪ್ರೇಮಿಗಳು ಸರಕಾರದ ಮೇಲೆ ಒತ್ತಡ ಹೇರಬೇಕು!