7 ಉಗ್ರರ ಬಂಧನ
ಪಾಕಿಸ್ತಾನದಿಂದ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆ ಮಾಡಲಾಗುತ್ತಿತ್ತು
(ದೆಹಲಿ-ಎನ್.ಸಿ.ಆರ್. ಎಂದರೆ ನ್ಯಾಷನಲ್ ಕ್ಯಾಪಿಟಲ್ ರೀಜನ್ – ರಾಷ್ಟ್ರೀಯ ರಾಜಧಾನಿ ಪ್ರದೇಶ)

ನವದೆಹಲಿ – ದೆಹಲಿ ಪೊಲೀಸರ ವಿಶೇಷ ದಳವು ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ.’ (ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ – ಅಂತರಸೇವಾ ಗುಪ್ತಚರ ಸಂಸ್ಥೆ) ಗಾಗಿ ಕೆಲಸ ಮಾಡುತ್ತಿದ್ದ 7 ಉಗ್ರರನ್ನು ಬಂಧಿಸಿದೆ. ಈ ಉಗ್ರರು ಪಾಕಿಸ್ತಾನದಲ್ಲಿ ಕುಳಿತು ಹ್ಯಾಂಡ್ಲರ್ ಗಳಾಗಿ (ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ಜನರು) ಕೆಲಸ ಮಾಡುತ್ತಿದ್ದ ಶಾಹಜಾದ್ ಭಟ್ಟಿ ಮತ್ತು ಅಜ್ಮಲ್ ಗುಜ್ಜರ್ ಅವರ ಆದೇಶದ ಮೇರೆಗೆ ದೆಹಲಿ-ಎನ್.ಸಿ.ಆರ್.ನಲ್ಲಿ ದೊಡ್ಡ ಭಯೋತ್ಪಾದಕ ದಾಳಿಗೆ ಸಿದ್ಧತೆ ನಡೆಸುತ್ತಿದ್ದರು. ಅವರಿಗೆ ಪಾಕಿಸ್ತಾನದಿಂದ ಡ್ರೋನ್ ಮೂಲಕ ಪಾಕಿಸ್ತಾನಿ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುತ್ತಿತ್ತು. ಈ ಗುಂಪಿಗೆ ಪಾಕಿಸ್ತಾನದಿಂದ ಮಾದಕ ಪದಾರ್ಥಗಳ ಪೂರೈಕೆಯೂ ಆಗುತ್ತಿತ್ತು. ಇವರೆಲ್ಲರಿಗೂ ಹಣದ ಆಮಿಷವೊಡ್ಡಿ ಈ ಕೃತ್ಯದಲ್ಲಿ ಭಾಗಿಯಾಗುವಂತೆ ಮಾಡಲಾಗಿತ್ತು.
1. ಬಂಧಿತರಲ್ಲಿ ಟೆಕ್ನೋ ಸಿಟಿಯ ದೀಪಕ್ ಅಗ್ರೋಲಾ, ಗಾಜಿಯಾಬಾದ್‌ನ ಲೋನಿ ನಿವಾಸಿ ಅನಸ್ ತ್ಯಾಗಿ, ಮೋಹಿತ್ ಅಲಿಯಾಸ್ ಯೋಗಿ, ಆರಿಫ್ ಅಲಿಯಾಸ್ ಪ್ರಧಾನ್, ಜತನ್ ಮತ್ತು ಸಾಬೀರ್ ಸೇರಿದ್ದಾರೆ. (ಬಂಧಿತರಲ್ಲಿ ಕೆಲವರ ಹೆಸರು ಹಿಂದೂಗಳಾಗಿವೆ. ಇದರಿಂದ ಹಿಂದೂಗಳ ಬ್ರೈನ್‌ವಾಶ್ ಮಾಡಿ ಅವರನ್ನು ಮತಾಂತರಗೊಳಿಸಿ ಉಗ್ರರನ್ನಾಗಿ ಮಾಡುತ್ತಿರುವ ಗುಂಪು ಸಕ್ರಿಯವಾಗಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕು! – ಸಂಪಾದಕರು)
2. ಇದಲ್ಲದೆ ಪಂಜಾಬ್‌ನ ಫತೇಗಢ ಸಾಹೇಬ್‌ನ ಕರಣ್‌ವೀರ್ ಸಿಂಗ್‌ನನ್ನೂ ಬಂಧಿಸಲಾಗಿದೆ. ಪೊಲೀಸರು ಆರೋಪಿಗಳಿಂದ 5 ಪಿಸ್ತೂಲ್‌ಗಳು, 41 ಜೀವಂತ ಮದ್ದುಗುಂಡುಗಳು, 1 ಸ್ಕಾರ್ಪಿಯೋ ಕಾರು, 7 ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
3. ಆರೋಪಿಗಳು ದೆಹಲಿ-ಎನ್.ಸಿ.ಆರ್.ನ ಅನೇಕ ಸೂಕ್ಷ್ಮ ಪ್ರದೇಶಗಳು, ಜನನಿಬಿಡ ಸ್ಥಳಗಳು ಮತ್ತು ಕೆಲವು ಧಾರ್ಮಿಕ ಮುಖಂಡರ ಮೇಲೆ ಕಣ್ಣಿಟ್ಟಿದ್ದರು (ರೆಕಿ) ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡ ಮಟ್ಟದ ರಕ್ತಪಾತ ನಡೆಸಲು ಈ ಸ್ಥಳಗಳ ಫೋಟೋಗಳು ಮತ್ತು ವಿಡಿಯೋಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ