ತಬಲಿಗೀಗಳ ವಿರುದ್ಧ ಆಗಿಂದಾಗಲೇ ಕ್ರಮ ಕೈಗೊಳ್ಳದಿದ್ದರೆ ಉತ್ತರಪ್ರದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು ! – ಯೋಗಿ ಆದಿತ್ಯನಾಥ, ಮುಖ್ಯಮಂತ್ರಿ, ಉತ್ತರ ಪ್ರದೇಶ

ತಬಲಿಗೀ ಜಮಾತಿನ ಸದಸ್ಯರ ವಿರುದ್ಧ ಅದೇ ಸಮಯದಲ್ಲಿ ಕ್ರಮ ಕೈಗೊಳ್ಳದೇ ಇರುತ್ತಿದ್ದರೆ, ಉತ್ತರ ಪ್ರದೇಶ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಹಿಂದಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಭದ್ರತಾ ಪಡೆಗಳನ್ನು ಅವಮಾನಿಸಿದ್ದಕ್ಕಾಗಿ ಏಕತಾ ಕಪೂರ್‌ನಿಂದ ಕ್ಷಮೆಯಾಚನೆ

ಏಕತಾ ಕಪೂರ್ ತಮ್ಮ ‘ಎಕ್ಸ್.ಎಕ್ಸ್.ಎಕ್ಸ್.-೨’ ಈ ‘ವೆಬ್ ಸಿರಿಜ್’ನಲ್ಲಿ ಅಕ್ಷೇಪಾರ್ಹ ದೃಶ್ಯದ ಪ್ರಕರಣದಲ್ಲಿ ಭಾರತೀಯ ಭದ್ರತಾ ಪಡೆಗಳಲ್ಲಿ ಕ್ಷಮೆಯಾಚಿಸುತ್ತಾ ಈ ದೃಶ್ಯಗಳನ್ನು ತೆಗೆದು ಹಾಕಿರುವ ಮಾಹಿತಿಯನ್ನು ನೀಡಿದ್ದಾರೆ. ಈ ದೃಶ್ಯದಲ್ಲಿ ಓರ್ವ ಸೇನಾಧಿಕಾರಿಯ ಹೆಂಡತಿಯನ್ನು ಇತರ ಪುರುಷರೊಂದಿಗೆ ಅಕ್ಷೇಪಾರ್ಹ ಸ್ಥಿತಿಯಲ್ಲಿ ತೋರಿಸಲಾಗಿದೆ.

ಶಾಜಾಪುರದ (ಮಧ್ಯಪ್ರದೇಶ) ಖಾಸಗಿ ಆಸ್ಪತ್ರೆಯೊಂದರಲ್ಲಿ ಹಣ ಪಾವತಿಸದ ವೃದ್ಧನನ್ನು ಕಟ್ಟಿಹಾಕಿದ ಆಸ್ಪತ್ರೆ ಸಿಬ್ಬಂದಿ !

ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧ ನಾಗರಿಕರೊಬ್ಬರು ಶುಲ್ಕವನ್ನು ಪಾವತಿಸಲಿಲ್ಲವೆಂದು ಅವರನ್ನು ಕಟ್ಟಿಹಾಕಿರುವ ಘಟನೆ ಬೆಳಕಿಗೆ ಬಂದಿದೆ ‘ಈ ಪ್ರಕರಣಕ್ಕೆ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣರವರು ಭರವಸೆ ನೀಡಿದ್ದಾರೆ.

ಕಾಶ್ಮೀರದಲ್ಲಿ ೪ ಉಗ್ರರ ಹತ್ಯೆ

ಇಲ್ಲಿ ಜೂನ್ ೭ ರ ಬೆಳಿಗ್ಗೆ ಇಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ೪ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇನ್ನೂ ಕೆಲವು ಭಯೋತ್ಪಾದಕರು ಇಲ್ಲಿ ಅಡಗಿರುವ ಸಾಧ್ಯತೆ ಇರಬಹುದು ಎಂದು ಸಂಜೆಯ ತನಕ ಶೋಧ ನಡೆಯುತ್ತಿತ್ತು. ಇಲ್ಲಿನ ರೆಬನ್ ಗ್ರಾಮದಲ್ಲಿ ಚಕಮಕಿ ನಡೆದಿದೆ.

ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ಭಾರತ ೫ ನೇ ಸ್ಥಾನದಲ್ಲಿ

ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ಈಗ ಭಾರತವು ಅಮೇರಿಕಾ, ಬ್ರಾಝಿಲ, ರಶಿಯಾ ಹಾಗೂ ಬ್ರಿಟನ್ ನಂತರ ೫ ನೇ ಸ್ಥಾನಕ್ಕೆ ತಲುಪಿದೆ. ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ಕೊರೋನಾದ ೯ ಸಾವಿರದ ೯೭೧ ರೋಗಿಗಳು ಪತ್ತೆಯಾಗಿದ್ದಾರೆ ಹಾಗೂ ೨೮೭ ಜನರು ಮೃತಟ್ಟಿದ್ದಾರೆ. ದೇಶದಲ್ಲಿ ಒಟ್ಟು ಕರೋನಾ ರೋಗಿಗಳ ಸಂಖ್ಯೆ ೨ ಲಕ್ಷದ ೪೬ ಸಾವಿರದ ೬೨೮ ರಷ್ಟಿದೆ.

ರೋಗಿಗಳ ಸಂಖ್ಯೆಯಲ್ಲಿ ಇಟಲಿಯನ್ನು ಹಿಂದಿಕ್ಕಿದ ಭಾರತ : ಈಗ ಭಾರತ ಜಗತ್ತಿನ ೬ ನೇ ಸ್ಥಾನದಲ್ಲಿದೆ

ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೯೮೮೭ ಜನರಿಗೆ ಕರೋನಾ ಸೋಂಕು ತಗುಲಿದ್ದು ದೇಶದಲ್ಲಿ ಒಟ್ಟು ಕರೋನಾ ಸಂತ್ರಸ್ತರ ಸಂಖ್ಯೆ ೨ ಲಕ್ಷ ೩೬ ಸಾವಿರದ ೧೧೭ ಕ್ಕೆ ತಲುಪಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಭಾರತವು ಕೊರೋನಾ ಪೀಡಿತ ರೋಗಿಗಳ ಸಂಖ್ಯೆಯಲ್ಲಿ ಇಟಲಿಯನ್ನು ಹಿಂದಿಕ್ಕುವ ಮೂಲಕ ವಿಶ್ವದ ಅತೀ ಹೆಚ್ಚು ರೋಗಿಗಳು ಇರುವ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ತಲುಪಿದೆ.

ಬಿಲಾಸಪುರ(ಹಿಮಾಚಲ ಪ್ರದೇಶ)ದಲ್ಲಿ ಗರ್ಭಿಣಿ ಹಸುವಿಗೆ ಪಟಾಕಿ ತಿನ್ನಿಸಿದ ಕಿಡಿಗೇಡಿಗಳು: ಪಟಾಕಿ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡ ಹಸು

ಕೇರಳದ ಮಲ್ಲಪುರಮ್‌ನಲ್ಲಿ ಒಂದು ಗರ್ಭಿಣಿ ಆನೆಗೆ ಹಣ್ಣಿನ ಮೂಲಕ ನೀಡಿದ್ದ ಪಟಾಕಿಯು ಸೇವಿಸಿದ್ದ ಕಾರಣ ಪಟಾಕಿಯು ಸ್ಪೋಟಗೊಂಡು ಸಾವನ್ನಪ್ಪಿದ್ದ ಘಟನೆ ಮಾಸುವ ಮೊದಲೇ ಹಿಮಾಚಲ ಪ್ರದೇಶದ ಬಿಲಾಸಪುರ ಜಿಲ್ಲೆಯ ಜಾಂಡುತ್ತಾ ಪ್ರದೇಶದಲ್ಲಿ ಒಂದು ಗರ್ಭಿಣಿ ಹಸುವಿಗೆ ತಿನ್ನಲು ಪಟಾಕಿಯನ್ನು ನೀಡಿದ ಪರಿಣಾಮ ಅದು ಸ್ಫೋಟಗೊಂಡು ಗರ್ಭಿಣಿ ಹಸು ಗಂಭೀರವಾಗಿ ಗಾಯಗೊಂಡಿದೆ.

ಬಿಜೆಪಿ ಸಂಸದೆ ಮೇನಕಾ ಗಾಂಧಿ ವಿರುದ್ಧ ಅಪರಾಧ ದಾಖಲು

ಗರ್ಭಿಣಿ ಆನೆಯ ಸಾವಿನ ನಂತರ ಕೇರಳದ ಮಲ್ಲಾಪುರಮ್ ಜಿಲ್ಲೆಯ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಸಂಸದೆ ಮತ್ತು ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿಯೊಂದಿಗೆ ಇತರರು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಲ್ಲಾಪುರಮ್ ಜಿಲ್ಲೆಯ ನ್ಯಾಯವಾದಿ ಸುಭಾಷ ಚಂದ್ರನ್ ಇವರು ಗಾಂಧಿಯ ವಿರುದ್ಧ ಪೊಲೀಸ ಅಧೀಕ್ಷಕರಲ್ಲಿ ದೂರು ದಾಖಲಿಸಿದ್ದಾರೆ.

‘ಪಬ್‌ಜಿ’ ಆಟದಲ್ಲಿ ಮೂರ್ತಿಪೂಜೆಯನ್ನು ಸೇರಿಸಿದ್ದರಿಂದ ಕುವೈತ್ ಮತ್ತು ಸೌದಿ ಅರೇಬಿಯಾದ ಮುಸ್ಲಿಂ ಧರ್ಮಗುರುಗಳ ವಿರೋಧ

‘ಪಬ್ ಜಿ’ ಈ ‘ವಿಡಿಯೋ’ ಗೇಮ್‌ನ ಹೊಸ ಆವೃತ್ತಿಯಲ್ಲಿ ಮೂರ್ತಿಪೂಜೆಯನ್ನು ಸೇರಿಸಿದ್ದರಿಂದ ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ಧಾರ್ಮಿಕ ವಿವಾದಕ್ಕೆ ಕಾರಣವಾಗಿದೆ. ಇಸ್ಲಾಮಿನಲ್ಲಿ ಮೂರ್ತಿಪೂಜೆಗೆ ಮಾನ್ಯತೆ ಇಲ್ಲದ್ದರಿಂದ ಸ್ಥಳೀಯ ಧರ್ಮಗುರುಗಳು ಇದನ್ನು ವಿರೋಧಿಸಿದ್ದಾರೆ.

‘ಗೋಏರ್’ ಸಂಸ್ಥೆಯ ಅಧಿಕಾರಿ ಆಸಿಫ್ ಖಾನ್‌ನಿಂದ ಹಿಂದೂ ಧರ್ಮ, ತಾಯಿ ಸೀತೆ ಮತ್ತು ಸಂಸ್ಕೃತ ಭಾಷೆಯ ಮೇಲೆ ಅವಹೇಳನಕಾರಿ ಲೇಖನ !

‘ಗೋ ಏರ್’ ಈ ಖಾಸಗಿ ವಿಮಾನ ಸಾರಿಗೆ ಸಂಸ್ಥೆಯ ಅಧಿಕಾರಿ ಆಸಿಫ್ ಖಾನ್ ಈತನು ಸೀತಾ ಮಾತೆ, ಹಿಂದೂ ಧರ್ಮ ಮತ್ತು ಸಂಸ್ಕೃತ ಭಾಷೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ. ಈ ಕೃತ್ಯದ ಬಗ್ಗೆ ಹಿಂದೂಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಟೀಕಿಸಿದ್ದಾರೆ, ಅದೇರೀತಿ ‘ಗೋ ಏರ್’ ವಿಮಾನಯಾನ ಸಂಸ್ಥೆಯ ಮೇಲೆ ಬಹಿಷ್ಕಾರ ಹಾಕುವಂತೆ ಕರೆ ನೀಡಿದ್ದಾರೆ.