ಬಿಲಾಸಪುರ(ಹಿಮಾಚಲ ಪ್ರದೇಶ)ದಲ್ಲಿ ಗರ್ಭಿಣಿ ಹಸುವಿಗೆ ಪಟಾಕಿ ತಿನ್ನಿಸಿದ ಕಿಡಿಗೇಡಿಗಳು: ಪಟಾಕಿ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡ ಹಸು

ಇಂತಹ ಅಮಾನವೀಯ, ರಾಕ್ಷಸ ಮತ್ತು ವಿಕೃತ ಕೃತ್ಯಗಳನ್ನು ಮಾಡುವವರನ್ನು ಹಿಡಿದು ನಡುವೃತ್ತದಲ್ಲಿ ಗಲ್ಲಿಗೇರಿಸುವ ಶಿಕ್ಷೆಯನ್ನು ವಿಧಿಸುವ ಕಾನೂನನ್ನು ಸರ್ಕಾರ ರೂಪಿಸಬೇಕು !

ಬಿಲಾಸಪುರ (ಹಿಮಾಚಲ ಪ್ರದೇಶ) – ಕೇರಳದ ಮಲ್ಲಪುರಮ್‌ನಲ್ಲಿ ಒಂದು ಗರ್ಭಿಣಿ ಆನೆಗೆ ಹಣ್ಣಿನ ಮೂಲಕ ನೀಡಿದ್ದ ಪಟಾಕಿಯು ಸೇವಿಸಿದ್ದ ಕಾರಣ ಪಟಾಕಿಯು ಸ್ಪೋಟಗೊಂಡು ಸಾವನ್ನಪ್ಪಿದ್ದ ಘಟನೆ ಮಾಸುವ ಮೊದಲೇ ಹಿಮಾಚಲ ಪ್ರದೇಶದ ಬಿಲಾಸಪುರ ಜಿಲ್ಲೆಯ ಜಾಂಡುತ್ತಾ ಪ್ರದೇಶದಲ್ಲಿ ಒಂದು ಗರ್ಭಿಣಿ ಹಸುವಿಗೆ ತಿನ್ನಲು ಪಟಾಕಿಯನ್ನು ನೀಡಿದ ಪರಿಣಾಮ ಅದು ಸ್ಫೋಟಗೊಂಡು ಗರ್ಭಿಣಿ ಹಸು ಗಂಭೀರವಾಗಿ ಗಾಯಗೊಂಡಿದೆ. ಹಸುವಿನ ಮಾಲೀಕರು ಘಟನೆಯ ‘ವಿಡಿಯೋ’ವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದಾಗಿ ಇಲ್ಲಿನ ನಾಗರಿಕರಲ್ಲಿ ಅಸಮಾಧಾನ ನಿರ್ಮಾಣವಾಗಿದೆ.