Maharashtra Govt Questions SC: ಪರಾರಿಯಾಗಿರುವ ಜಾಕಿರ್ ನಾಯಿಕ್ ಅರ್ಜಿ ಹೇಗೆ ದಾಖಲಿಸಬಹುದು ?

ಮಹಾರಾಷ್ಟ್ರ ಸರ್ಕಾರದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಶ್ನೆ !

ಝಾಕಿರ್ ನಾಯಿಕ್

ನವದೆಹಲಿ – ಜಿಹಾದಿ ಭಯೋತ್ಪಾದಕರ ಆದರ್ಶನಾಗಿರುವ ಮತ್ತು ಭಾರತದಿಂದ ಪರಾರಿಯಾಗಿರುವ ಝಾಕಿರ್ ನಾಯಿಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ ಮಹಾರಾಷ್ಟ್ರ ಸರಕಾರ ಪ್ರಶ್ನೆ ಮಾಡಿದೆ. ‘ಪರಾರಿಯಾಗಿರುವ ಝಾಕಿರ್ ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅನುಮತಿ ಹೇಗೆ ಸಿಕ್ಕಿತು ?’ ಎಂದು ಮಹಾರಾಷ್ಟ್ರ ಸರಕಾರವು ನ್ಯಾಯಾಲಯದಲ್ಲಿ ವಿಚಾರಿಸಿದೆ. ಆನಂತರ ಸರ್ವೋಚ್ಚ ನ್ಯಾಯಾಲಯವು ಮಹಾರಾಷ್ಟ್ರ ಸರಕಾರಕ್ಕೆ ಅಫಿಡವಿಟ್ ಸಲ್ಲಿಸಲು ಅನುಮತಿ ನೀಡಿದೆ.

ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಹಾರಾಷ್ಟ್ರ ಸರಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದು ಯುಕ್ತಿವಾದ ಮಂಡಿಸುತ್ತಾ, ಪರಾರಿ ಎಂದು ಘೊಷಿಸಲ್ಪಟ್ಟ ವ್ಯಕ್ತಿಯು ಕಲಂ 32 (ಮೂಲಭೂತ ಹಕ್ಕುಗಳು ಜಾರಿಯಾಗಲು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗುವ ಹಕ್ಕು)ರ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದೇ ? ಎಂದು ವಾದ ಮಂಡಿಸಿದರು.

ಝಾಕಿರ್ ಸಲ್ಲಿಸಿರುವ ಅರ್ಜಿಯು 2013 ರದ್ದು ಇದೆ ಮತ್ತು ಅವನ ವಿರುದ್ಧ ಸುಮಾರು 43 ಪ್ರಕರಣಗಳನ್ನು ಒಟ್ಟಾಗಿ ಮಾಡುವಂತೆ ಇದರಲ್ಲಿ ಕೇಳಲಾಗಿದೆ.