ತಬಲಿಗೀಗಳ ವಿರುದ್ಧ ಆಗಿಂದಾಗಲೇ ಕ್ರಮ ಕೈಗೊಳ್ಳದಿದ್ದರೆ ಉತ್ತರಪ್ರದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು ! – ಯೋಗಿ ಆದಿತ್ಯನಾಥ, ಮುಖ್ಯಮಂತ್ರಿ, ಉತ್ತರ ಪ್ರದೇಶ

ಲಕ್ಷ್ಮಣಪುರಿ (ಉತ್ತರಪ್ರದೇಶ) – ತಬಲಿಗೀ ಜಮಾತಿನ ಸದಸ್ಯರ ವಿರುದ್ಧ ಅದೇ ಸಮಯದಲ್ಲಿ ಕ್ರಮ ಕೈಗೊಳ್ಳದೇ ಇರುತ್ತಿದ್ದರೆ, ಉತ್ತರ ಪ್ರದೇಶ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಹಿಂದಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಸಮಯದಲ್ಲಿ ಅವರು, ‘ನಾವು ಬೆರಳೆಣಿಕೆಯಷ್ಟು ಜನರಿಗಾಗಿ ೨೩ ಕೋಟಿ ಜನರ ಜೀವನದೊಂದಿಗೆ ಆಟವಾಡಲು ಸಾಧ್ಯವಿಲ್ಲ; ಆದ್ದರಿಂದಲೇ ನಾವು ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ’ಎಂದೂ ಅವರು ಸ್ಪಷ್ಟಪಡಿಸಿದರು.

ಯೋಗಿ ಆದಿತ್ಯನಾಥ್ ಅವರು ಮಾತನ್ನು ಮುಂದುವರೆಸುತ್ತ,

೧. ಕರೋನಾ ವಿರುದ್ಧದ ಹೋರಾಟದಲ್ಲಿ ತಬಲಿಗೀ ಜಮಾತಿನ ಸದಸ್ಯರು ಅಡ್ಡಿಯುಂಟು ಮಾಡಿದರು. ಅಂತಹವರ ವಿರುದ್ಧ ನಾವು ಕ್ರಮ ಕೈಗೊಂಡಿದ್ದೇವೆ. ಈ ಬಗೆಗಿನ ಮಾಹಿತಿ ಪಡೆಯಲು ನಾವು ಕೆಲವು ಜನರನ್ನು ದೆಹಲಿಗೆ ಕಳುಹಿಸಿದ್ದೆವು.

೨. ತಬಲಿಗೀ ಜಮಾತಿನ ಸದಸ್ಯರಿ ಕರೋನಾದ ಸೋಂಕಾಗುವುದು, ಅಪರಾಧವಲ್ಲ; ಆದರೆ ‘ಈ ರೋಗವನ್ನು ಮರೆಮಾಚುವುದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ ಮತ್ತು ಇದರಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವಾಗಬಹುದು’, ಎಂಬುದು ಗೊತ್ತಿದ್ದೂ ಇಂತಹ ಪರಿಸ್ಥಿತಿಯಲ್ಲಿ ಹೀಗೆ ವರ್ತಿಸುವುದು ಅಪರಾಧವೆಂದೇ ತಿಳಿಯಬೇಕು. ತಬಲಿಗೀ ಜಮಾತಿನ ಕೆಲವರು ಈ ಅಪರಾಧವನ್ನು ಮಾಡಿದ್ದಾರೆ.

೩. ಒಂದೆಡೆ, ಸರ್ಕಾರವು ತಬಲಿಗೀ ಜಮಾತಿನ ಸದಸ್ಯರನ್ನು ಪ್ರತ್ಯೇಕಿಕರಣ ಕೇಂದ್ರಕ್ಕೆ ಕರೆತಂದು ಪರೀಕ್ಷೆ ನಡೆಸುತ್ತಿದ್ದರು, ಮತ್ತೊಂದೆಡೆ ಅವರು ಕರೋನಾದ ಸೋಂಕಿಗೆ ಒಳಗಾಗಿದ್ದಾರೆಂದು ಸ್ಪಷ್ಟವಾದ ನಂತರವೂ ಅವರು ಪ್ರತ್ಯೇಕಿಕರಣ ಕೇಂದ್ರಗಳಲ್ಲಿ ಹಾಗೂ ಕರೋನಾದ ಆಸ್ಪತ್ರೆಗಳಲ್ಲಿ ಅಸಭ್ಯವಾಗಿ ವರ್ತಿಸಿದರು, ವೈದ್ಯರ ಮೇಲೆ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದರು, ಅದೇರೀತಿ ಪೊಲೀಸ ಮತ್ತು ಆಡಳಿತ ಅಧಿಕಾರಿಗಳ ಮೇಲೆ ಉಗುಳಲು ಹೋದರು. ಆಗ ನಾವು ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಭವಿಷ್ಯದಲ್ಲಿಯೂ ಕಾನೂನನ್ನು ಕೈಗೆತ್ತಿಕೊಂಡು ಕಾನೂನಿನ ವಿರುದ್ಧ ವರ್ತಿಸುವವರು ಅದಕ್ಕೆ ಬೆಲೆ ತೆರಬೇಕಾಗುತ್ತದೆ.

೪. ಪ್ರತಿಯೊದು ಅಂಶಗಳಲ್ಲಿ ಸಾಂಪ್ರದಾಯಿಕ ದೃಷ್ಟಿಕೋನದಿಂದ ನೋಡುವವರು ತಬಲಿಗೀ ಜಮಾತಿನ ಸದಸ್ಯರನ್ನು ನಿರಪರಾಧಿ ಎಂದು ನಿರ್ಧರಿಸಿದರು. ಇಂತಹ ಜನರು ದೇಶದ ಜನರ ಆರೋಗ್ಯದೊಂದಿಗೆ ಚೆಲ್ಲಾಟ ನಡೆಸಿದ್ದಾರೆ. ಇದಕ್ಕಾಗಿ ಜನರು ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ.