Nijjar Case : ಖಲಿಸ್ತಾನಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಕೆನಡಾದ ಅಧಿಕಾರಿಗಳು ಭಾಗಿ ! – ಭಾರತ

ಭಾರತದಿಂದ ಕೆನಡಾ ಸರಕಾರಕ್ಕೆ ಸಂಪೂರ್ಣ ಮಾಹಿತಿ ನೀಡಿತ್ತು !

ಒಟಾವಾ (ಕೆನಡಾ) – ಭಾರತ ಸರಕಾರವು ಪರಾರಿಯಾಗಿರುವ ಭಯೋತ್ಪಾದಕರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ‘ಕೆನಡಿಯನ್ ಬಾರ್ಡರ್ ಸರ್ವಿಸ ಏಜೆನ್ಸಿ’ಯ ಅಧಿಕಾರಿಯ ಹೆಸರಿದೆ. ಸಂದೀಪ ಸಿಂಗ ಸಿದ್ಧು ಎಂದು ಆತನ ಹೆಸರಾಗಿದ್ದು, ಅವನು ನಿಷೇಧಿಸಲಾಗಿರುವ ‘ಇಂಟರ್ನ್ಯಾಷನಲ್ ಸಿಖ್ ಯೂಥ್ ಫೆಡರೇಶನ್’ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿದ್ದಾನೆ. ಅಲ್ಲದೇ ಅವನು ‘ಕೆನಡಿಯನ್ ಬಾರ್ಡರ್ ಸರ್ವಿಸ್ ಏಜೆನ್ಸಿ’ಯಲ್ಲಿಯೂ ಕೆಲಸ ಮಾಡುತ್ತಿದ್ದಾನೆ. ಸಿದ್ಧುವಿನ ಮೇಲೆ ಪಂಜಾಬ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಿದ ಆರೋಪವಿದೆ. ಸಂದೀಪ ಸಿಂಗನ ಭಾವಚಿತ್ರದೊಂದಿಗೆ ಅವನ ಸಂಪೂರ್ಣ ಮಾಹಿತಿಯನ್ನು ಭಾರತವು ಕೆನಡಾದ ಟ್ರುಡೊ ಸರಕಾರಕ್ಕೆ ಕಳುಹಿಸಿದೆ.

ಬಲ್ವಿಂದರ್ ಸಿಂಗ್ ಸಿದ್ಧು ಇವರ ಹತ್ಯೆಗಾಗಿ, ಸಂದೀಪ ಸಿಂಗ ಸಿದ್ಧು ಪಾಕಿಸ್ತಾನದಲ್ಲಿರುವ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ ಸಿಂಗ ಉರ್ಫ ರೋಡೆ ಇವನೊಂದಿಗೆ ಸಂಪರ್ಕದಲ್ಲಿದ್ದನು. ಬಲ್ವಿಂದರ್ ಸಿಂಗ್ ಸಿದ್ಧು 1990ರ ದಶಕದಲ್ಲಿ ಪಂಜಾಬ್‌ನ ಖಲಿಸ್ತಾನಿ ಭಯೋತ್ಪಾದನೆ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕಾಗಿ ಬಲ್ವಿಂದರ್ ಸಿಂಗ್ ಸಿದ್ಧು ಇವರಿಗೆ ಶೌರ್ಯ ಚಕ್ರವನ್ನು ನೀಡಲಾಗಿತ್ತು. ಅಕ್ಟೋಬರ್ 2020 ರಲ್ಲಿ ಅವರ ಮನೆಯಲ್ಲಿಯೇ ಅವರನ್ನು ಹತ್ಯೆ ಮಾಡಲಾಗಿತ್ತು. ಬಲ್ವಿಂದರ್ ಸಿಂಗ್ ಸಂಧು ಇವರ ಹತ್ಯೆಯ ಸಂಚಿನಲ್ಲಿ ಸುಖಮೀತ ಪಾಲ ಸಿಂಗ ಉರ್ಫ ಸನ್ನಿ ಟೊರೊಂಟೊ ಮತ್ತು ಲಖ್ಬೀರ ಸಿಂಗ ಉರ್ಫ ರೋಡೆ ಇವರು ಭಾಗಿಯಾಗಿದ್ದರು ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ. ಈ ಹತ್ಯೆಯ ಬಳಿಕ ಸಂದೀಪ ಸಿಂಗ್ ಸಿದ್ಧುಗೆ ‘ಕೆನಡಿಯನ್ ಬಾರ್ಡರ್ ಸರ್ವಿಸ್ ಏಜೆನ್ಸಿ’ಯಲ್ಲಿ ಅಧೀಕ್ಷಕ ಹುದ್ದೆಗೆ ಬಡ್ತಿ ಸಿಕ್ಕಿದೆ.

ಸಂಪಾದಕೀಯ ನಿಲುವು

ಕೆನಡಾದಲ್ಲಿ ಅನೇಕ ಖಲಿಸ್ತಾನಿ ಭಯೋತ್ಪಾದಕರು ಮತ್ತು ಖಲಿಸ್ತಾನ ಪ್ರೇಮಿಗಳು ಇದ್ದಾರೆ. ಅವರ ವಿರುದ್ಧ ಕ್ರಮಕೈಕೊಳ್ಳುವಂತೆ ಭಾರತ ನಿರಂತರವಾಗಿ ಆಗ್ರಹಿಸುತ್ತಿದೆ; ಆದರೆ ಕೆನಡಾದ ಟ್ರುಡೊ ಸರಕಾರ ರಾಜಕೀಯ ಸ್ವಾರ್ಥಕ್ಕಾಗಿ ಕ್ರಮ ಕೈಕೊಳ್ಳುವುದನ್ನು ತಪ್ಪಿಸುತ್ತಿದೆ. ಈ ಕಡೆಗೆ ಜಗತ್ತು ಗಮನಹರಿಸಬೇಕಾಗಿದೆ.