|
ಜೈಪುರ (ರಾಜಸ್ಥಾನ) – ಇಲ್ಲಿಯ ಕರಣಿ ವಿಹಾರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿನ ರಜನಿ ವಿಹಾರ ಶಿವನ ದೇವಸ್ಥಾನದಲ್ಲಿ ಅಕ್ಟೋಬರ್ ೧೭ ರಂದು ರಾತ್ರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಗದಂಬ ನಗರ ಶಾಖೆಯಿಂದ ಕೊಜಾಗಿರಿ ಪೌರ್ಣಿಮೆ ಉತ್ಸವದ ಆಯೋಜನೆ ಮಾಡಲಾಗಿತ್ತು. ಅಲ್ಲಿ ಜನರಿಗೆ ಪಾಯಸ ಹಂಚುತ್ತಿದ್ದರು. ಆ ಸಮಯದಲ್ಲಿ ಮೊದಲು ಹನುಮಾನ ಚಾಲಿಸಾದ ಪಠಣೆ ಮತ್ತು ನಂತರ ರಾಮಧೂನಿಯ ಪಠಣೆ ಮಾಡಿದರು. ಅದರ ನಂತರ ದೇವಸ್ಥಾನದ ಪಕ್ಕದಲ್ಲಿ ವಾಸಿಸುವ ನಸೀಬ್ ಚೌಧರಿ ಮಗ ಸಹಿತ ದೇವಸ್ಥಾನಕ್ಕೆ ಬಂದು ಕಾರ್ಯಕ್ರಮ ನಿಲ್ಲಿಸುವಂತೆ ಬೆದರಿಕೆ ನೀಡಿದರು. ಸಿಟ್ಟಿನ ಭರದಲ್ಲಿ ನಸೀಬ್ ಚೌಧರಿ ಮತ್ತು ಅವನ ಮಕ್ಕಳು ಪಾಯಸ ಇಟ್ಟಿರುವ ಮಡಿಕೆಗೆ ಒದ್ದರೂ ಮತ್ತು ಸ್ವಯಂಸೇವಕರ ಮೇಲೆ ಚೂರಿಯಿಂದ ದಾಳಿ ಮಾಡಿದರು. ಇದರಲ್ಲಿ ೧೦ ಜನರು ಗಾಯಗೊಂಡಿದ್ದಾರೆ. ಅವರಿಗೆ ತಕ್ಷಣ ಎಸ್.ಎಂ.ಎಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಈ ಸ್ವಯಂ ಸೇವಕರ ಹೊಟ್ಟೆಗೆ ಮತ್ತು ಎದೆಯ ಮೇಲೆ ಅನೇಕ ಬಾರಿ ಇರಿಯಲಾಗಿದೆ, ಆದ್ದರಿಂದ ಅವರ ಆರೋಗ್ಯ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
🚨Jaipur | RSS Swayamsevaks celebrating Sharad Purnima in a temple attacked; 10 Swayamsevaks seriously injured
The vessel containing prasad was also kicked by the attackers
– Naseeb Chaudhary, and his son arrested
VC : @DDNewslive pic.twitter.com/8aQAoc42JD
— Sanatan Prabhat (@SanatanPrabhat) October 18, 2024
ಪ್ರಕರಣದ ಗಾಂಭೀರ್ಯ ನೋಡಿ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಾ ಆರೋಪಿ ನಸಿಬ್ ಚೌಧರಿ ಮತ್ತು ಅವನ ಓರ್ವ ಮಗನನ್ನು ಬಂಧಿಸಿದ್ದಾರೆ. ಈ ಸಂಪೂರ್ಣ ಘಟನೆಯ ನಂತರ ಘಟನಾ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಾಜ್ಯದ ಸಚಿವ ರಾಜವರ್ಧನ ಸಿಂಹ ರಾಠೋಡ್, ಸಂಸದ ಗೋಪಾಲ ವರ್ಮ, ಭಾಜಪದ ನಾಯಕ ಅರುಣ್ ಚತುರ್ವೇದಿ ಮತ್ತು ಸಂಘದ ಅನೇಕ ಅಧಿಕಾರಿಗಳು ಗಾಯಾಳುಗಳನ್ನು ಭೇಟಿ ಮಾಡಲು ಆಸ್ಪತ್ರೆಗೆ ತಲುಪಿದರು. ಸಂಸದ ಗೋಪಾಲ ವರ್ಮ ಇವರು, ದೇವಸ್ಥಾನದ ಪಕ್ಕದಲ್ಲಿ ವಾಸಿಸುವ ನಸೀಬ್ ಚೌದರಿ ಇವನು ಶಿವ ದೇವಸ್ಥಾನದ ಜಾಗವನ್ನು ವಶಕ್ಕೆ ಪಡೆಯಬೇಕಿತ್ತು, ಆದ್ದರಿಂದ ಅವನು ಈ ಕೃತ್ಯ ಮಾಡಿದ್ದಾನೆ ಮತ್ತು ನಿಶಸ್ತ್ರ ಜನರ ಮೇಲೆ ದಾಳಿ ನಡೆಸಿದ್ದಾನೆ. ಇದರಲ್ಲಿ ಶಂಕರ್ ಬಗರಾ, ಮುರಲೀಲಾಲ, ರಾಮ ಪಾರಿಕ, ಲೇಖನ ಸಿಂಹ ಜಾದೌನ್, ಪುಷ್ಪೇಂದ್ರ ಮತ್ತು ದಿನೇಶ್ ಶರ್ಮ ಮುಂತಾದವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದರು. ಗೋಪಾಲ ಶರ್ಮಾ ಇವರು, ಪೊಲೀಸರು ದೇವಸ್ಥಾನದ ಗರ್ಭಗುಡಿಗೆ ಶೂ ಧರಿಸಿ ಪ್ರವೇಶಿಸಿದ್ದರು ಮತ್ತು ಸಂಘದ ಸ್ವಯಂಸೇವಕರ ಮೇಲೆ ಲಾಠಿಚಾರ್ಜ್ ಮಾಡಿರುವುದಾಗಿ ಆರೋಪಿಸಿದ್ದಾರೆ.
ಸಂಪಾದಕೀಯ ನಿಲುವು
|