ಭದ್ರತಾ ಪಡೆಗಳನ್ನು ಅವಮಾನಿಸಿದ್ದಕ್ಕಾಗಿ ಏಕತಾ ಕಪೂರ್‌ನಿಂದ ಕ್ಷಮೆಯಾಚನೆ

‘ಎಕ್ಸ್.ಎಕ್ಸ್.ಎಕ್ಸ್.-೨’ ಈ ‘ವೆಬ್‌ಸಿರಿಜ್’ ನಿಂದ ಅಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ

ಏಕತಾ ಕಪೂರ್ ಕ್ಷಮೆ ಯಾಚಿಸಿದ್ದರೂ ಅವರು ಭದ್ರತಾ ಪಡೆಗಳಿಗೆ ಮಾಡಿದ ಅವಮಾನ ಅಕ್ಷಮ್ಯವಾಗಿದ್ದರಿಂದ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಅವರ ‘ವೆಬ್ ಸಿರಿಜ’ಯನ್ನು’ ನಿಲ್ಲಿಸಿ ಸಂಬಂಧಪಟ್ಟವರನ್ನು ಬಂಧಿಸಬೇಕು, ಇದರಿಂದ ಇತರ ಯಾರೂ ಈ ರೀತಿಯಲ್ಲಿ ಅವಮಾನಿಸುವ ಧೈರ್ಯ ಮಾಡಲಾರರು !

ಮುಂಬೈ : ಏಕತಾ ಕಪೂರ್ ತಮ್ಮ ‘ಎಕ್ಸ್.ಎಕ್ಸ್.ಎಕ್ಸ್.-೨’ ಈ ‘ವೆಬ್ ಸಿರಿಜ್’ನಲ್ಲಿ ಅಕ್ಷೇಪಾರ್ಹ ದೃಶ್ಯದ ಪ್ರಕರಣದಲ್ಲಿ ಭಾರತೀಯ ಭದ್ರತಾ ಪಡೆಗಳಲ್ಲಿ ಕ್ಷಮೆಯಾಚಿಸುತ್ತಾ ಈ ದೃಶ್ಯಗಳನ್ನು ತೆಗೆದು ಹಾಕಿರುವ ಮಾಹಿತಿಯನ್ನು ನೀಡಿದ್ದಾರೆ. ಈ ದೃಶ್ಯದಲ್ಲಿ ಓರ್ವ ಸೇನಾಧಿಕಾರಿಯ ಹೆಂಡತಿಯನ್ನು ಇತರ ಪುರುಷರೊಂದಿಗೆ ಅಕ್ಷೇಪಾರ್ಹ ಸ್ಥಿತಿಯಲ್ಲಿ ತೋರಿಸಲಾಗಿದೆ. ಇದರಿಂದ ಮಾಜಿ ಸೈನಿಕರ ಸಂಘಟನೆಯವರು ‘ವೆಬ್ ಸಿರಿಜ’ನ್ನು ನಿಷೇಧಿಸುವಂತೆ ರಾಷ್ಟ್ರಪತಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.

ಶೋಭಾ ಡೇ ಇವರ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಏಕತಾ ಕಪೂರ್, ‘ನಾವು ಭಾರತೀಯ ಸೇನೆಯನ್ನು ಒಬ್ಬ ವ್ಯಕ್ತಿಯಾಗಿ ಮತ್ತು ಸಂಘಟನೆಯಾಗಿ ಗೌರವಿಸುತ್ತೇವೆ. ನಮ್ಮ ಭದ್ರತೆಗಾಗಿ ಅವರ ಕೊಡುಗೆ ಅಪಾರವಾಗಿದೆ.’ ಎಂದು ಹೇಳಿದರು.