ಕಾಶ್ಮೀರದಲ್ಲಿ ೪ ಉಗ್ರರ ಹತ್ಯೆ

ಶೋಪಿಯಾಂ (ಜಮ್ಮು-ಕಾಶ್ಮೀರ) – ಇಲ್ಲಿ ಜೂನ್ ೭ ರ ಬೆಳಿಗ್ಗೆ ಇಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ೪ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇನ್ನೂ ಕೆಲವು ಭಯೋತ್ಪಾದಕರು ಇಲ್ಲಿ ಅಡಗಿರುವ ಸಾಧ್ಯತೆ ಇರಬಹುದು ಎಂದು ಸಂಜೆಯ ತನಕ ಶೋಧ ನಡೆಯುತ್ತಿತ್ತು. ಇಲ್ಲಿನ ರೆಬನ್ ಗ್ರಾಮದಲ್ಲಿ ಚಕಮಕಿ ನಡೆದಿದೆ. ಹಿಜ್ಬುಲ್ ಮುಜಾಹಿದ್ದೀನ್ ಈ ಭಯೋತ್ಪಾದಕ ಸಂಘಟನೆಯ ಕೆಲವು ಭಯೋತ್ಪಾದಕರು ಒಂದು ಮನೆಯಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಬಂದ ನಂತರ ಭದ್ರತಾ ಪಡೆಗಳು ಮನೆಯನ್ನು ಸುತ್ತುವರಿದ ನಂತರ ಚಕಮಕಿ ನಡೆಯಿತು.