ಬಿಜೆಪಿ ಸಂಸದೆ ಮೇನಕಾ ಗಾಂಧಿ ವಿರುದ್ಧ ಅಪರಾಧ ದಾಖಲು

ಮಲ್ಲಾಪುರಮ್ ಜಿಲ್ಲೆಯನ್ನು ‘ಹಿಂಸಾತ್ಮಕ’ ಎಂದು ಹೇಳಿದ ಪ್ರಕರಣ

ಜಿಲ್ಲೆಯನ್ನು ಹಿಂಸಾತ್ಮಕ ಎಂದು ಹೇಳುವವರ ವಿರುದ್ಧ ಪೊಲೀಸರು ಅಪರಾಧಗಳನ್ನು ದಾಖಲಿಸುತ್ತಾರೆ; ಆದರೆ ಅದೇ ಜಿಲ್ಲೆಯಲ್ಲಿ ಆನೆ ಸಂಬಂಧಿಸಿದ ಹಿಂಸಾಚಾರ ಘಟನೆಯನ್ನು ಮಾಡಿದ ದುಷ್ಕರ್ಮಿಗಳ ಹೆಸರುಗಳನ್ನೂ ಬಹಿರಂಗಗೊಳ್ಳುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ನವ ದೆಹಲಿ : ಗರ್ಭಿಣಿ ಆನೆಯ ಸಾವಿನ ನಂತರ ಕೇರಳದ ಮಲ್ಲಾಪುರಮ್ ಜಿಲ್ಲೆಯ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಸಂಸದೆ ಮತ್ತು ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿಯೊಂದಿಗೆ ಇತರರು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಲ್ಲಾಪುರಮ್ ಜಿಲ್ಲೆಯ ನ್ಯಾಯವಾದಿ ಸುಭಾಷ ಚಂದ್ರನ್ ಇವರು ಗಾಂಧಿಯ ವಿರುದ್ಧ ಪೊಲೀಸ ಅಧೀಕ್ಷಕರಲ್ಲಿ ದೂರು ದಾಖಲಿಸಿದ್ದಾರೆ. ‘ದ್ವೇಷದ ಭಾವನೆಯಿಂದ ಮಲ್ಲಾಪುರಮ್ ಜಿಲ್ಲೆಯ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ. ಮೇನಕಾ ಗಾಂಧಿಯವರು ಜಿಲ್ಲೆಯ ಮತ್ತು ಜಿಲ್ಲೆಯಲ್ಲಿನ ನಿವಾಸಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ’, ಎಂದು ದೂರಿನಲ್ಲಿ ತಿಳಿಸಲಾಗಿದೆ. ‘ಮಲಪ್ಪುರಮ್ ಇದು ಭಾರತದ ಎಲ್ಲಕ್ಕಿಂತ ಹೆಚ್ಚು ಹಿಂಸಾತ್ಮಕ ಜಿಲ್ಲೆಯಾಗಿದೆ’, ಎಂದು ಮೇನಕಾ ಗಾಂಧಿಯವರು ಹೇಳಿದ್ದರು.