Hindu Organizations Warn Muslim Boys: ಕರವಾ ಚೌತ್ ದಿನದಂದು ಹಿಂದೂ ಮಹಿಳೆಯರ ಕೈಗೆ ಮೆಹಂದಿ ಹಾಕದಂತೆ ಮುಸಲ್ಮಾನ ಯುವಕರಿಗೆ ಹಿಂದುತ್ವನಿಷ್ಠ ಸಂಘಟನೆಯಿಂದ ಎಚ್ಚರಿಕೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಈ ವರ್ಷ ಅಕ್ಟೋಬರ್ ೨೦ ರಂದು ಕರವಾ ಚೌತ ಹಬ್ಬ ಆಚರಿಸಲಾಗುವುದು. ಆ ಹಬ್ಬದ ಪ್ರಯುಕ್ತ ‘ಮೆಹೆಂದಿ ಜಿಹಾದ್’ ಗೆ (ಹಿಂದೂ ಮಹಿಳೆಯರ ಕೈಯ ಮೇಲೆ ಮೆಹೆಂದಿ ಹಾಕುವ ಹೆಸರಿನಲ್ಲಿ ಅವರಿಗೆ ಆಮಿಷ ಒಡ್ಡಿ ಪ್ರೀತಿಯ ಬಲೆಗೆ ಎಳೆಯಲು) ಕಡಿವಾಣ ಹಾಕುವುದಕ್ಕಾಗಿ ಹಿಂದೂ ಸಂಘಟನೆಯ ಸಿದ್ಧತೆ ಆರಂಭಿಸಿದೆ. ಕರವಾ ಚೌತದಂದು ಹಿಂದೂ ಮಹಿಳೆಯರು ಕೈಗೆ ಮೆಹೆಂದಿ ಹಾಕಿಕೊಳ್ಳುತ್ತಾರೆ. ಈ ದಿನ ಮುಸಲ್ಮಾನ ಯುವಕರು ಹಿಂದೂ ಮಹಿಳೆಯರ ಕೈಯ ಮೇಲೆ ಮೆಹಂದಿ ಹಾಕಬಾರದು, ಎಂದು ಹಿಂದೂ ಸಂಘಟನೆಗಳಿಂದ ಎಚ್ಚರಿಕೆ ನೀಡಲಾಗಿದೆ. ‘ಮಾರುಕಟ್ಟೆಯಲ್ಲಿ ಎಲ್ಲಿಯಾದರು ಮುಸಲ್ಮಾನ ಯುವಕರು ಹಿಂದೂ ಮಹಿಳೆಗೆ ಮೆಹೆಂದಿ ಹಾಕುತ್ತಿರುದು ಕಾಣಿಸಿದರೆ, ಅವನಿಗೆ ಲಾಠಿಯಿಂದ ಹೊಡೆಯಲಾಗುವುದು. ಆ ಸಮಯದಲ್ಲಿ ಲಾಠಿಗಳ ಉಪಯೋಗ ಮಾಡಲು ಸಾಧ್ಯವಾಗಬೇಕೆಂದು, ಲಾಠಿಗಳ ಪೂಜೆ ಮಾಡಿ ಅವುಗಳನ್ನು ಸಿದ್ಧವಾಗಿ ಇಟ್ಟಿದ್ದಾರೆ’, ಎಂದು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದೆ.

ಕರವಾ ಚೌತ ಎಂದರೆ ಏನು ?

ಕರವಾ ಚೌತ ಮುಖ್ಯವಾಗಿ ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ. ಈ ದಿನ ಹಿಂದೂ ಮಹಿಳೆಯರು ಅವರ ಗಂಡನ ದೀರ್ಘಾಯುಷ್ಯಕ್ಕಾಗಿ ದಿನವಿಡಿ ಉಪವಾಸ ಇದ್ದು ಅಂದರೆ ನೀರು ಸಹ ಕುಡಿಯದೆ ಉಪವಾಸ ಮಾಡುತ್ತಾರೆ. ಸಾಯಂಕಾಲ ಚಂದ್ರನ ನೋಡಿ ಉಪವಾಸ ಬಿಡುತ್ತಾರೆ. ಈ ದಿನದಂದು ವಿವಾಹಿತ ಮಹಿಳೆಯರು ನವವಿವಾಹಿತೆ ಹಾಗೆ ಶೃಂಗಾರ ಮಾಡಿ ಕೈಗೆ ಮೆಹೆಂದಿ ಕೂಡ ಹಾಕುತ್ತಾರೆ.

ಹಿಂದುತ್ವನಿಷ್ಠ ಸಂಘಟನೆಗಳ ಸಭೆ

ಕರವಾ ಚೌತದ ಹಿನ್ನೆಲೆಯಲ್ಲಿ ಮೆಹೆಂದಿ ಜಿಹಾದಗೆ ಕಡಿವಾಣ ಹಾಕುವುದಕ್ಕಾಗಿ ಮುಜಫರ್ ನಗರ ಇಲ್ಲಿ ‘ಸಂಯುಕ್ತ ಹಿಂದೂ ಮೊರ್ಚ’ದ ವತಿಯಿಂದ ನಗರದಲ್ಲಿ ಹಿಂದೂ ಸಂಘಟನೆಗಳ ಸಭೆಯ ಆಯೋಜನೆ ಮಾಡಲಾಗಿತ್ತು. ವಿಶ್ವ ಹಿಂದೂ ಪರಿಷತ್ತಿನ ಅಧಿಕಾರಿಗಳು ಕೂಡ ಸಭೆ ನಡೆಸಿ ಹಿಂದೂ ಭಗಿನಿಯರಿಗೆ ಮುಸಲ್ಮಾನರಿಂದ ಮೆಹೆಂದಿ ಹಾಕಿಸಿಕೊಳ್ಳದಿರಲು ಕರೆ ನೀಡಿದೆ.

ವ್ಯಾಪಾರಿಗಳಿಗೂ ಕೂಡ ವಿನಂತಿ ಮಾಡುವರು

ಹಿಂದೂ ಸಂಘಟನೆಗಳು ಸಭೆಯಲ್ಲಿ, ಯಾವ ವ್ಯಾಪಾರಿಗಳಿಂದ ಮಹಿಳೆಯರ ಕೈಗೆ ಮೆಹೆಂದಿ ಹಾಕುವ ವ್ಯವಸಾಯ ನಡೆಯುತ್ತಿದೆ, ಅಂತಹ ವ್ಯಾಪಾರಿಗಳ ಭೇಟಿ ಮಾಡಲಾಗುವುದು. ಅವರಿಗೆ ‘ಮುಸಲ್ಮಾನ ಯುವಕರಿಂದ ಹಿಂದೂ ಮಹಿಳೆಯರ ಕೈಗೆ ಮೆಹೆಂದಿ ಹಾಕಿಸಬಾರದು’, ಎಂದು ವಿನಂತಿ ಮಾಡಲಾಗುವುದು. ಯಾವ ವ್ಯಾಪಾರಿ ಈ ಮನವಿಯನ್ನು ಒಪ್ಪುವುದಿಲ್ಲ, ಅವರಿಗೆ ಪಾಠ ಕಲಿಸುವುದಕ್ಕಾಗಿ ಹಿಂದುತ್ವನಿಷ್ಠರು ಲಾಠಿ ಸಿದ್ಧಗೊಳಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳ ಪರಿಣಾಮಕಾರಿ ಸಂಘಟನೆ, ಇದೇ ಭಾರತದಲ್ಲಿನ ಎಲ್ಲಾ ರೀತಿಯ ಜಿಹಾದ್ ತಡೆಯುವ ಉಪಾಯವಾಗಿದೆ !