ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಬಾಬು ಜಂಡೇಲನಿಂದ ಭಗವಾನ ಶಿವನನ್ನು ನಿಂದಿಸುವ ವಿಡಿಯೋ ವೈರಲ್

ಪೊಲೀಸರಲ್ಲಿ ಅಪರಾಧ ದಾಖಲು

ಶ್ಯೋಪುರ (ಮಧ್ಯಪ್ರದೇಶ) – ಇಲ್ಲಿನ ಕಾಂಗ್ರೆಸ ಶಾಸಕ ಬಾಬು ಮೀನಾ ಜಂಡೇಲ ಇವರು ಭಗವಾನ ಶಂಕರನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಘಟನೆಯ ಬಗ್ಗೆ ವಿಶ್ವ ಹಿಂದೂ ಪರಿಷತ್ತು ಪೊಲೀಸರಲ್ಲಿ ದೂರು ದಾಖಲಿಸಿದ ನಂತರ ಜಂಡೇಲ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು 11 ಸೆಕೆಂಡುಗಳ ವಿಡಿಯೋ ಆಗಿದೆ. ಶಾಸಕ ಬಾಬೂ ಜಂಡೇಲ ಇವರು, ಈ ವಿಡಿಯೋ ಹಳೆಯದಾಗಿದ್ದು, ತಮ್ಮ ಮಾನಹಾನಿ ಮಾಡಲು ತಿರುಚಲಾಗಿದೆ ಎಂದು ಹೇಳಿದರು. `ನಾನು ಎಂದಿಗೂ ಈ ರೀತಿ ಮಾತನಾಡಲು ಸಾಧ್ಯವಿಲ್ಲ’, ಎಂದು ಅವರು ದಾವೆ ಮಾಡಿದ್ದಾರೆ. ಕಾಂಗ್ರೆಸ ಪಕ್ಷ ಕೂಡ ಈ ವಿಡಿಯೋ 5 ವರ್ಷಗಳಷ್ಟು ಹಳೆಯದು ಎಂದು ಹೇಳಿಕೊಂಡಿದೆ. (ವೀಡಿಯೊ ಎಷ್ಟೇ ಹಳೆಯದಾಗಿದ್ದರೂ, ಅದರಲ್ಲಿ ಹೇಳಿರುವುದು ಅಯೋಗ್ಯವಾಗಿದ್ದರೆ, ಸಂಬಂಧಿಸಿದವರ ವಿರುದ್ಧ ಶಿಕ್ಷೆಯಾಗಲೇ ಬೇಕು ! – ಸಂಪಾದಕರು)

ಭಾಜಪದ ಇಂದೋರನ ಕಾರ್ಯಕರ್ತರು ಜಂಡೇಲರ ಪುತ್ತಳಿಯನ್ನು ಸುಟ್ಟರು. ಬಾಬು ಜಂಡೇಲ ಅವರ ಮುಖಕ್ಕೆ ಕಪ್ಪು ಬಳಿದಿದ್ದಾರೆಂದು ಚರ್ಚೆಯಾಗಿದೆ. ಉಜ್ಜಯಿನಿಯ ಶ್ರೀ ಮಹಾಕಾಲ ದೇವಸ್ಥಾನದ ಅರ್ಚಕ ಮಹೇಶ ಶರ್ಮಾ ಅವರೂ ಕೂಡ ಜಂಡೇಲ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಭಾಜಪದ ಮಧ್ಯಪ್ರದೇಶ ರಾಜ್ಯಾಧ್ಯಕ್ಷರು ಮತ್ತು ಖಜುರಾಹೊ ಸಂಸದ ವಿ.ಡಿ. ಶರ್ಮಾ ಮಾತನಾಡಿ, ಇದು ಕಾಂಗ್ರೆಸ್ಸಿನ ಪ್ರೀತಿಯ ಅಂಗಡಿಯಾಗಿದೆಯೇ ಅಥವಾ ಅವಾಚ್ಯ ಶಬ್ದಗಳ ಅಂಗಡಿಯೇ ? ಕಾಂಗ್ರೆಸ್ ಈ ಪ್ರಕರಣದಲ್ಲಿ ಯಾವ ಕ್ರಮ ಕೈಗೊಳ್ಳಲಿದ್ದಾರೆ ? ಎಂದು ರಾಹುಲ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಶ್ನಿಸುತ್ತೇನೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಪೊಲೀಸರು ಕೂಡಲೇ ಜಂಡೇಲರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಜಂಡೇಲ ಇವರು ಇತರ ಧರ್ಮಗಳ ಶ್ರದ್ಧಾ ಸ್ಥಾನಗಳ ಬಗ್ಗೆ ಇಂತಹ ಅಪಮಾನ ಮಾಡಿದ್ದರೆ, ಇಲ್ಲಿಯವರೆಗೆ ಅವರ ವಿರುದ್ಧ `ಸರ್ ತನ್ ಸೆ ಜುದಾ’ (ಶಿರಚ್ಛೇದನದ) ಫತ್ವಾಗಳು ಜಾರಿಗೊಳಿಸಲಾಗುತ್ತಿತ್ತು !