‘ಗೋಏರ್’ ಸಂಸ್ಥೆಯ ಅಧಿಕಾರಿ ಆಸಿಫ್ ಖಾನ್‌ನಿಂದ ಹಿಂದೂ ಧರ್ಮ, ತಾಯಿ ಸೀತೆ ಮತ್ತು ಸಂಸ್ಕೃತ ಭಾಷೆಯ ಮೇಲೆ ಅವಹೇಳನಕಾರಿ ಲೇಖನ !

ಹಿಂದೂಗಳ ನಿಷೇಧದ ನಂತರ ಖಾನ್‌ಗೆ ಸಂಸ್ಥೆಯಿಂದ ವಜಾ

ಕೇವಲ ಸಂಸ್ಥೆಯು ಕೈಗೊಂಡ ಕ್ರಮದಿಂದ ಸಮಾಧಾನ ಪಡದೇ ಖಾನ್ ಮೇಲೆ ಅಪರಾಧ ದಾಖಲಿಸಿ ಆತನನ್ನು ಬಂಧಿಸಬೇಕು ಮತ್ತು ಸರಕಾರ ಆತನ ಮೇಲೆ ಕಠಿಣವಾಗಿ ಶಿಕ್ಷೆಯನ್ನು ವಿಧಿಸಬೇಕು !

`ಗೋ ಏರ್ ಸಂಸ್ಥೆಯ ಅಧಿಕಾರಿ ಆಸಿಫ್ ಖಾನ್`

ನವ ದೆಹಲಿ : ‘ಗೋ ಏರ್’ ಈ ಖಾಸಗಿ ವಿಮಾನ ಸಾರಿಗೆ ಸಂಸ್ಥೆಯ ಅಧಿಕಾರಿ ಆಸಿಫ್ ಖಾನ್ ಈತನು ತಾಯಿ ಸೀತೆ, ಹಿಂದೂ ಧರ್ಮ ಮತ್ತು ಸಂಸ್ಕೃತ ಭಾಷೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ. ಈ ಕೃತ್ಯದ ಬಗ್ಗೆ ಹಿಂದೂಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಟೀಕಿಸಿದ್ದಾರೆ, ಅದೇರೀತಿ ‘ಗೋ ಏರ್’ ವಿಮಾನಯಾನ ಸಂಸ್ಥೆಯ ಮೇಲೆ ಬಹಿಷ್ಕಾರ ಹಾಕುವಂತೆ ಕರೆ ನೀಡಿದ್ದಾರೆ. ಅದಕ್ಕಾಗಿ ‘#BoycottGoAir’ ಹ್ಯಾಷ್ ಟ್ಯಾಗ್’ ಮೂಲಕ ‘ಟ್ರೆಂಡ್’ ಕೂಡ ಆರಂಭಿಸಲಾಗಿದೆ. ಇದರಲ್ಲಿ ಖಾನ್ ಮತ್ತು ‘ಗೋ ಏರ್’ ವಿರುದ್ಧ ಸಾವಿರಾರು ಹಿಂದೂಗಳು ಟ್ವೀಟ್ ಮಾಡಿದ್ದಾರೆ. ಇದರಿಂದಾಗಿ ‘ಗೋ ಏರ್’ ಆಸಿಫ್ ಖಾನ್‌ನನ್ನು ಕೆಲಸದಿಂದ ತೆಗೆದುಹಾಕಿದೆ.’ ‘ನಾವು ಯಾವುದೇ ವ್ಯಕ್ತಿ ಅಥವಾ ಉದ್ಯೋಗಿಗಳ ವೈಯಕ್ತಿಕ ವಿಚಾರಗಳನ್ನು ಒಪ್ಪುವುದಿಲ್ಲ’, ಎಂದು ಸಂಸ್ಥೆಯು ಸ್ಪಷ್ಟಪಡಿಸಿದೆ.