ರೋಗಿಗಳ ಸಂಖ್ಯೆಯಲ್ಲಿ ಇಟಲಿಯನ್ನು ಹಿಂದಿಕ್ಕಿದ ಭಾರತ : ಈಗ ಭಾರತ ಜಗತ್ತಿನ ೬ ನೇ ಸ್ಥಾನದಲ್ಲಿದೆ

ನವ ದೆಹಲಿ: ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೯೮೮೭ ಜನರಿಗೆ ಕರೋನಾ ಸೋಂಕು ತಗುಲಿದ್ದು ದೇಶದಲ್ಲಿ ಒಟ್ಟು ಕರೋನಾ ಸಂತ್ರಸ್ತರ ಸಂಖ್ಯೆ ೨ ಲಕ್ಷ ೩೬ ಸಾವಿರದ ೧೧೭ ಕ್ಕೆ ತಲುಪಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಭಾರತವು ಕೊರೋನಾ ಪೀಡಿತ ರೋಗಿಗಳ ಸಂಖ್ಯೆಯಲ್ಲಿ ಇಟಲಿಯನ್ನು ಹಿಂದಿಕ್ಕುವ ಮೂಲಕ ವಿಶ್ವದ ಅತೀ ಹೆಚ್ಚು ರೋಗಿಗಳು ಇರುವ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ತಲುಪಿದೆ. ಇಟಲಿಯಲ್ಲಿ ೨ ಲಕ್ಷ ೩೪ ಸಾವಿರದ ೫೩೧ ರೋಗಿಗಳು ಕರೋನಾ ಪೀಡಿತರಾಗಿದ್ದಾರೆ.

ದೇಶದಲ್ಲಿ ಕರೋನಾದಿಂದಾಗಿ ಒಂದೇ ದಿನದಲ್ಲಿ ೨೯೫ ಜನರ ಸಾವು

ದೇಶದಲ್ಲಿ ಸಂಚಾರ ನಿಷೇಧವು ಸಡಿಲಗೊಳಿಸಿದಾಗ ಕರೋನಾ ಸೋಂಕಿತ ರೋಗಿಗಳ ಸಂಖ್ಯೆ ಸತತವಾಗಿ ಏರುತ್ತಿದೆ. ದೇಶದಲ್ಲಿ ಕೊರೋನಾದಿಂದಾಗಿ ಜೂನ್ ೫ ರಂದು ೨೯೫ ರೋಗಿಗಳು ಸಾವನ್ನಪ್ಪಿದರು. ಇದೇ ಮೊದಲಬಾರಿಗೆ ಒಂದೇ ದಿನದಲ್ಲಿ ಇಷ್ಟು ಜನರು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ ರೋಗಿಗಳ ಸಂಖ್ಯೆ ೮೦ ಸಾವಿರದ ೨೨೯ ಹಾಗೂ ೨ ಸಾವಿರದ ೮೪೯ ಜನರ ಸಾವು

ಜೂನ್ ೫ ರಂದು ಮಹಾರಾಷ್ಟ್ರದಲ್ಲಿ ೨೪೩೬ ಹೊಸ ಕರೋನಾ ರೋಗಿಗಳನ್ನು ಪತ್ತೆಯಾದವು. ಇದರ ಪರಿಣಾಮವಾಗಿ, ರಾಜ್ಯದಲ್ಲಿ ಒಟ್ಟು ಕರೋನಾ ಸಂತ್ರಸ್ತರ ಸಂಖ್ಯೆ ೮೦೨೨೯ ತಲುಪಿದೆ. ರಾಜ್ಯದಲ್ಲಿ ಒಂದೇ ದಿನದಲ್ಲಿ ೧೩೯ ರೋಗಿಗಳು ಸಾವನ್ನಪ್ಪಿದ್ದು ಇದುವರೆಗೆ ೨ ಸಾವಿರದ ೮೪೯ ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ೩೫ ಸಾವಿರದ ೧೫೬ ರೋಗಿಗಳನ್ನು ಮನೆಗೆ ಕಳುಹಿಸಲಾಗಿದೆ.

ಭಾರತದಲ್ಲಿ ಕರೋನಾ ಪೀಡಿತ ಸಂಖ್ಯೆಯ ವೇಗ ಅಷ್ಟು ಹೆಚ್ಚಿಲ್ಲ ; ಆದರೆ ಅಪಾಯ ಇದೆ ! – ವಿಶ್ವ ಆರೋಗ್ಯ ಸಂಸ್ಥೆ

ಭಾರತದಲ್ಲಿ ಕೊರೋನಾ ರೋಗಿಗಳ ಹೆಚ್ಚಾಗುವ ವೇಗ ಅಷ್ಟು ಇಲ್ಲ; ಆದರೆ ಅಪಾಯ ಇದೆ, ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಡಾ. ಮೈಕೆಲ್ ರಯಾನ್ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಮಾತನ್ನು ಮುಂದುವರೆಸುತ್ತ, ‘ಭಾರತದಲ್ಲಿ ಕೊರೋನಾ ರೋಗಿಗಳ ಪ್ರಮಾಣವು ೩ ವಾರಗಳಿಗೆ ದ್ವಿಗುಣಗೊಂಡಿದೆ. ಆದ್ದರಿಂದ ಕರೋನಾ ವೇಗವಾಗಿ ಹರಡುತ್ತಿದೆ, ಎಂದು ಅಲ್ಲ; ಆದರೆ, ಕಾಳಜಿ ವಹಿಸುವುದು ಅಗತ್ಯವಿದೆ.’ ಇಲ್ಲದಿದ್ದರೆ ಜನನಿಬಿಡ ಇರುವ ದೇಶಗಳಲ್ಲಿ ಕೊರೋನಾದ ಸೊಂಕು ಹರಡಿದರೆ ಪರಿಸ್ಥಿತಿ ಹದಗೆಡಬಹುದು, ಎಂದೂ ಸಹ ಎಚ್ಚರಿಕೆಯನ್ನು ನೀಡಿದ್ದಾರೆ.