ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ಭಾರತ ೫ ನೇ ಸ್ಥಾನದಲ್ಲಿ

೨೪ ಗಂಟೆಗಳಲ್ಲಿ ೨೮೭ ಜನರ ಸಾವು

ನವ ದೆಹಲಿ – ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ಈಗ ಭಾರತವು ಅಮೇರಿಕಾ, ಬ್ರಾಝಿಲ, ರಶಿಯಾ ಹಾಗೂ ಬ್ರಿಟನ್ ನಂತರ ೫ ನೇ ಸ್ಥಾನಕ್ಕೆ ತಲುಪಿದೆ. ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ಕೊರೋನಾದ ೯ ಸಾವಿರದ ೯೭೧ ರೋಗಿಗಳು ಪತ್ತೆಯಾಗಿದ್ದಾರೆ ಹಾಗೂ ೨೮೭ ಜನರು ಮೃತಟ್ಟಿದ್ದಾರೆ. ದೇಶದಲ್ಲಿ ಒಟ್ಟು ಕರೋನಾ ರೋಗಿಗಳ ಸಂಖ್ಯೆ ೨ ಲಕ್ಷದ ೪೬ ಸಾವಿರದ ೬೨೮ ರಷ್ಟಿದೆ. ಈ ಪೈಕಿ ೧ ಲಕ್ಷ ೧೯ ಸಾವಿರದ ೨೯೩ ಜನರು ಗುಣಮುಖರಾಗಿದ್ದು, ೧ ಲಕ್ಷ ೨೦ ಸಾವಿರದ ೪೦೬ ಜನರ ಚಿಕಿತ್ಸೆ ನಡೆಯುತ್ತಿದೆ.
‘ಅಖಿಲ ಭಾರತೀಯ ಆಯುರ್ವಿಜ್ಞಾನ ಸಂಸ್ಥೆ’ಯ (‘ಏಮ್ಸ್’ನ) ನಿರ್ದೇಶಕ ರಣದೀಪ ಗುಲೇರಿಯಾ ಇವರು, ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಕೊರೋನಾದ ರೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ಸ್ಥಳೀಯ ಸಮುದಾಯ ಸಂಕ್ರಮಣ ಕಂಡುಬಂದಿದೆ; ಆದರೆ ಇಡೀ ದೇಶದಲ್ಲಿ ಈ ರೀತಿಯ ಸ್ಥಿತಿ ಇಲ್ಲ.’ ಎಂದು ಹೇಳಿದ್ದಾರೆ.