Pakistan Former PM Statement: ‘ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ನೀಡಿರುವ ಭೇಟಿ ಇದು ಉಭಯ ದೇಶಗಳ ನಡುವಿನ ಸಂಬಂಧಗಳ ಹೊಸ ಆರಂಭವಂತೆ !’ – ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಹೇಳಿಕೆ

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಪಾಕಿಸ್ತಾನಕ್ಕೆ ಭೇಟಿ ನೀಡಿರುವುದು, ಇದು ಕೇವಲ ಒಂದು ಆರಂಭವಾಗಿದೆ. ಈಗ ಉಭಯ ದೇಶಗಳು ತಮ್ಮ ಇತಿಹಾಸವನ್ನು ಹಿಂದೆ ಬಿಟ್ಟು ಮುಂದೆ ಸಾಗಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿಕೆ ನೀಡಿದ್ದಾರೆ. ‘ಶಾಂಘೈ ಸಹಕಾರ ಸಂಘಟನೆ’ಯ ಶೃಂಗಸಭೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 17 ರಂದು ಅವರು ಭಾರತೀಯ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಶರೀಫ ತಮ್ಮ ಮಾತನ್ನು ಮುಂದುವರಿಸಿ,

1. ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಇಲ್ಲಿಗೆ ಬಂದಿದ್ದರೆ ಬಹಳ ಒಳ್ಳೆಯದಾಗುತ್ತಿತ್ತು. ಆದರೂ ಡಾ. ಜೈಶಂಕರ ಬಂದಿದ್ದಾರೆ. ಇದೂ ಒಳ್ಳೆಯದೇ ಆಗಿದೆ. ನಾವು 75 ವರ್ಷಗಳನ್ನು ಕಳೆದೆವು. ಈಗ ಮುಂದಿನ 75 ವರ್ಷಗಳ ವಿಚಾರವನ್ನು ಮಾಡುವುದು ಆವಶ್ಯಕವಾಗಿದೆ.

2. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನ ಇವರು ನರೇಂದ್ರ ಮೋದಿಯವರ ವಿರುದ್ಧ ಬಳಸಿದ ಅಸಭ್ಯ ಭಾಷೆಯಿಂದಾಗಿ ಪಾಕಿಸ್ತಾನ ಮತ್ತು ಭಾರತ ನಡುವಿನ ಸಂಬಂಧ ಹದಗೆಟ್ಟಿದೆ. ಅಂತಹ ಭಾಷೆಯನ್ನು ಮಾತನಾಡುವುದಿರಲಿ, ನಾಯಕರು ಈ ರೀತಿ ವಿಚಾರವನ್ನೂ ಮಾಡಬಾರದು.

3. ನಾನು ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಸುಧಾರಿಸಲು ಪ್ರಯತ್ನಿಸಿದೆ; ಆದರೆ ಅದು ಮತ್ತೆ ಮತ್ತೆ ಹದಗೆಟ್ಟಿತು.

4. ಪ್ರಧಾನಿ ಮೋದಿ ನನ್ನನ್ನು ಭೇಟಿಯಾಗಲು ಲಾಹೋರ್‍ಗೆ ಬಂದಿದ್ದರು. (ಡಿಸೆಂಬರ್ 25, 2015 ರಂದು ಪ್ರಧಾನಿ ಮೋದಿ ಅವರು ಆಗಿನ ಪ್ರಧಾನಿ ನವಾಜ್ ಷರೀಫ್ ಅವರ ಮೊಮ್ಮಗನ ವಿವಾಹದಲ್ಲಿ ಪಾಲ್ಗೊಳ್ಳಲು ಲಾಹೋರ್‍ಗೆ ಹೋಗಿದ್ದರು.)

5. ನನ್ನ ತಂದೆಯವರ ಪಾಸ್‌ಪೋರ್ಟ್‌ನಲ್ಲಿ ಅವರ ಜನ್ಮಸ್ಥಳ ಭಾರತದ ಅಮೃತಸರವಾಗಿತ್ತು. ನಮ್ಮ ಸಂಸ್ಕೃತಿ ಸಮಾನವಾಗಿದೆ. ನಾಯಕರ ನಡುವೆ ಉತ್ತಮ ಬಾಂಧವ್ಯವಿಲ್ಲದಿದ್ದರೂ, ಎರಡೂ ದೇಶಗಳ ಜನರು ಪರಸ್ಪರ ಉತ್ತಮ ಬಾಂಧವ್ಯ ಹೊಂದಿದ್ದಾರೆ.

6. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧವನ್ನು ಮರುಸ್ಥಾಪಿಸಬೇಕು. ಪರಸ್ಪರ ದೇಶಗಳಿಗೆ ಕ್ರಿಕೆಟ ಟೀಮ್ ಕಳುಹಿಸದಿರುವುದರಿಂದ ನಮಗೆ ಯಾವುದೇ ಲಾಭವಿಲ್ಲ.

7. ಭಾರತ ಮತ್ತು ಪಾಕಿಸ್ತಾನದ ರೈತರು ಮತ್ತು ಉತ್ಪಾದಕರು ತಮ್ಮ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಬೇರೆಡೆಗೆ ಏಕೆ ಹೋಗಬೇಕು? ಈಗ ವಸ್ತುಗಳು ಅಮೃತಸರದಿಂದ ಲಾಹೋರಮಾರ್ಗದ ಮೂಲಕ ದುಬೈಗೆ ಹೋಗುತ್ತದೆ. ಇದರ ಲಾಭ ಯಾರಿಗೆ ಆಗುತ್ತಿದೆ ?

ಸಂಪಾದಕೀಯ ನಿಲುವು

ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧ ಸುಧಾರಿಸಬೇಕಾಗಿದ್ದರೆ, ಪಾಕಿಸ್ತಾನವು ತನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಹಾದಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಷ್ಟಗೊಳಿಸಬೇಕು. ಇದರೊಂದಿಗೆ ದಾವೂದ್ ಇಬ್ರಾಹಿಂ, ಜಖಿಉರ್ ರೆಹಮಾನ್ ಲಖ್ವಿ, ಹಫೀಜ್ ಸಯೀದ್ ಅವರಂತಹ ಕುಖ್ಯಾತ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಮತ್ತು ಕಾಶ್ಮೀರದ ಮೇಲಿನ ತನ್ನ ಹಕ್ಕನ್ನು ಹಿಂಪಡೆಯಬೇಕು !