ಶಾಜಾಪುರದ (ಮಧ್ಯಪ್ರದೇಶ) ಖಾಸಗಿ ಆಸ್ಪತ್ರೆಯೊಂದರಲ್ಲಿ ಹಣ ಪಾವತಿಸದ ವೃದ್ಧನನ್ನು ಕಟ್ಟಿಹಾಕಿದ ಆಸ್ಪತ್ರೆ ಸಿಬ್ಬಂದಿ !

ಸಂಬಂಧಪಟ್ಟರವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭರವಸೆ

ಭಾರತದ ಆಸ್ಪತ್ರೆಗಳ ಸಂವೇದನಾಶೂನ್ಯತೆ ! ಅದಕ್ಕಾಗಿಯೇ ಸಾರ್ವಜನಿಕರು ಆಕ್ರೋಶಗೊಂಡು ಆಸ್ಪತ್ರೆಗಳ ಅಥವಾ ವೈದ್ಯರ ಮೇಲೆ ಹಲ್ಲೆ ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಡಬೇಕು !

ಶಾಜಾಪುರ (ಮಧ್ಯಪ್ರದೇಶ) – ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧ ನಾಗರಿಕರೊಬ್ಬರು ಶುಲ್ಕವನ್ನು ಪಾವತಿಸಲಿಲ್ಲವೆಂದು ಅವರನ್ನು ಕಟ್ಟಿಹಾಕಿರುವ ಘಟನೆ ಬೆಳಕಿಗೆ ಬಂದಿದೆ ‘ಈ ಪ್ರಕರಣಕ್ಕೆ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣರವರು ಭರವಸೆ ನೀಡಿದ್ದಾರೆ.

ಹೊಟ್ಟೆಯ ಸಂಬಂಧಿಸಿದ ಕಾಯಿಲೆಯಿಂದ ವೃದ್ದನನ್ನು ಜೂನ್ ೧ ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಕುಟುಂಬದ ಬಳಿ ಶುಲ್ಕ ಪಾವತಿಸಲು ಹಣ ಇಲ್ಲದ್ದರಿಂದ ಆಸ್ಪತ್ರೆಯ ಆಡಳಿತವರ್ಗದವರು ವೃದ್ಧನಿಗೆ ಹೋಗಲು ಅವಕಾಶ ನೀಡಲಿಲ್ಲ. ಅವರ ಕೈಕಾಲುಗಳನ್ನು ಮಂಚಕ್ಕೆ ಕಟ್ಟಿದ್ದರು. ಈ ಮಾಹಿತಿಯು ಪ್ರಸಾರ ಮಾಧ್ಯಮ ಮತ್ತು ಪೊಲೀಸರಿಗೆ ಸಿಕ್ಕಿದ ನಂತರ ಪೊಲೀಸರು ವೃದ್ಧನನ್ನು ಮನೆಗೆ ಹೋಗಲು ಬಿಟ್ಟರು.