ಕಾಂಗ್ರೆಸ್‌ನ ಕಾಲದಲ್ಲಿ ಜೈಲಿನಲ್ಲಾದ ಚಿತ್ರಹಿಂಸೆಯಿಂದಾಗಿ ನನ್ನ ದೃಷ್ಟಿ ಕ್ಷೀಣಿಸಿದೆ ಮತ್ತು ನನ್ನ ಮೆದುಳು ಊದಿಕೊಂಡಿದೆ ! – ಭಾಜಪ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಆರೋಪ

ಕೇಂದ್ರ ಸರಕಾರ ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು !

ಭೋಪಾಲ್ (ಮಧ್ಯಪ್ರದೇಶ) – ಕಾಂಗ್ರೆಸ್ ಸರಕಾರದ ಕಾಲದಲ್ಲಿ ಸೆರೆಮನೆಯಲ್ಲಿದ್ದಾಗ ನನ್ನನ್ನು ಹಿಂಸಿಸಲಾಯಿತು. ಆದ್ದರಿಂದ ನಾನು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದು ನನ್ನ ದೃಷ್ಟಿ ಕ್ಷೀಣಿಸಿದೆ. ಅದರೊಂದಿಗೆ ನನ್ನ ಮೆದುಳಿನಲ್ಲಿ ಊತವಿದೆ ಎಂದು ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಆರೋಪಿಸಿದ್ದಾರೆ. ಅಂತರರಾಷ್ಟ್ರೀಯ ಯೋಗ ದಿನದ ನಿಮಿತ್ತ ಇಲ್ಲಿನ ಭಾಜಪ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಸಾಧ್ವಿ ಪ್ರಜ್ಞಾ ಸಿಂಗ್ ಅವರು, ‘ಕಾಂಗ್ರೆಸ್ ಸರಕಾರ ಇದ್ದಾಗ ನಾನು ೯ ವರ್ಷ ಸೆರೆಮನೆಯಲ್ಲಿದ್ದೆ. ಈ ಸಮಯದಲ್ಲಿ ನನ್ನನ್ನು ಸೆರೆಮನೆಯಲ್ಲಿ ಹಿಂಸಿಸಲಾಯಿತು. ಪರಿಣಾಮವಾಗಿ, ನಾನು ಹಲವಾರು ಗಂಭೀರ ಗಾಯಗಳನ್ನು ಅನುಭವಿಸಿದೆ, ಅದು ಇನ್ನೂ ನಡೆಯುತ್ತಿದೆ. ಅನೇಕ ದೀರ್ಘಕಾಲದ ಕಾಯಿಲೆಗಳು ಈಗ ಹೆಚ್ಚುತ್ತಿವೆ. ಈ ಎಲ್ಲ ಕಿರುಕುಳಗಳಿಂದಾಗಿ ನನ್ನ ದೃಷ್ಟಿಯಲ್ಲಿ ರೆಟಿನಾ ಆಗಿದೆ. ಪರಿಣಾಮವಾಗಿ, ನನ್ನ ದೃಷ್ಟಿ ಕಡಿಮೆಯಾಗಿದ್ದು ನನ್ನ ಮೆದುಳು ಮತ್ತು ಕಣ್ಣುಗಳು ಊದಿಕೊಂಡಿದ್ದು ಕೀವು ಉಂಟಾಗಿದೆ. ನನ್ನ ಬಲಗಣ್ಣಿನ ದೃಷ್ಟಿಯೂ ಕ್ಷೀಣಿಸಿದೆ ಮತ್ತು ನನಗೆ ಎಡಗಣ್ಣಿನಿಂದ ನೋಡಲು ಆಗುತ್ತಿಲ್ಲ’ ಎಂದು ಹೇಳಿದ್ದಾರೆ.

ಗೊಂದಲ ಸೃಷ್ಟಿಸುವ ಉದ್ದೇಶದಿಂದ ಆರೋಪಗಳನ್ನು ಮಾಡಲಾಯಿತು! – ಕಾಂಗ್ರೆಸ್

ಸಂಸದೆ ಪ್ರಜ್ಞಾ ಸಿಂಗ್ ಅವರು ಮಾಡಿದ ಆರೋಪಗಳನ್ನು ಕಾಂಗ್ರೆಸ್ ಶಾಸಕ ಪಿ.ಸಿ. ಶರ್ಮಾ ತಿರಸ್ಕರಿಸಿದ್ದಾರೆ. ‘ನಾವು ಮಹಿಳೆಯರನ್ನು ಗೌರವಿಸುತ್ತೇವೆ’, ಮಧ್ಯಪ್ರದೇಶದಲ್ಲಿ ೧೫ ವರ್ಷಗಳ ಕಾಲ ಮತ್ತು ಕೇಂದ್ರದಲ್ಲಿ ೬ ವರ್ಷಗಳ ಕಾಲ ಭಾಜಪದ ಸರಕಾರ ಇರುವಾಗ ಕಾಂಗ್ರೆಸ್ ಅವರಿಗೆ ಹೇಗೆ ಕಿರುಕುಳ ನೀಡಲು ಸಾಧ್ಯ? ಗೊಂದಲ ಸೃಷ್ಟಿಸುವ ಉದ್ದೇಶದಿಂದ ಈ ಆರೋಪ ಮಾಡಲಾಯಿತು ಎಂದು ಹೇಳಿದ್ದಾರೆ. (ಕಾಂಗ್ರೆಸ್ ಕಾಲದಲ್ಲಿ ಬಂಧನದಲ್ಲಿರುವಾಗ ಹಿಂಸಿಸಲಾಯಿತು ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಇವರು ಸ್ಪಷ್ಟವಾಗಿ ಹೇಳಿರುವಾಗ ಕಾಂಗ್ರೆಸ್ ಅದನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು.)