ಪುಲ್ವಾಮಾದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ, ಒಬ್ಬ ಸೈನಿಕ ಹುತಾತ್ಮ

ಪುಲ್ವಾಮಾ (ಜಮ್ಮು-ಕಾಶ್ಮೀರ) – ಇಲ್ಲಿ ನಡೆದ ಚಕಮಕಿಯಲ್ಲಿ ರಕ್ಷಣಾ ಪಡೆಯು ಇಬ್ಬರು ಭಯೋತ್ಪಾದಕರನ್ನು ಕೊಂದು ಹಾಕಿದ್ದಾರೆ, ಇದರಲ್ಲಿ ಕೇಂದ್ರೀಯ ಮೀಸಲು ಪಡೆಯ ಸೈನಿಕ ಸುನೀಲ್ ಕಾಳೆಯವರು ಹುತಾತ್ಮರಗಿದ್ದಾರೆ. ಅವರು ಸೊಲ್ಲಾಪುರದ ಪಾನಗಾವನಲ್ಲಿ ನಿವಾಸಿಯಾಗಿದ್ದರು. ಪುಲ್ವಾಮದ ಬಂದಜು ಪರಿಸರದಲ್ಲಿ ೫ ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಸೈನಿಕರಿಂದ ಇಲ್ಲಿ ಶೋಧಕಾರ್ಯಾಚರಣೆ ನಡೆಸಿದರು. ಆ ಸಮಯದಲ್ಲಿ ಈ ಚಕಮಕಿ ನಡೆದಿದೆ.