-
ಬಜರಂಗದಳ ನೀಡಿದ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ
-
ಬಜರಂಗದಳಕ್ಕೆ ಸಿಗುವ ಮಾಹಿತಿ, ಎಲ್ಲಾ ಆಡಳಿತವ್ಯವಸ್ಥೆ ಕೈಯಲ್ಲಿರುವ ಪೊಲೀಸರಿಗೆ ಏಕೆ ಸಿಗುವುದಿಲ್ಲ ? ಅಥವಾ ಪೊಲೀಸರು ಗೋಮಾಂಸದ ಸಾಗಾಟದ ಕಡೆ ಉದ್ದೇಶಪೂರ್ವಕವಾಗಿ ದುರ್ಲಕ್ಷ ಮಾಡುತ್ತಾರೆಯೇ ?
ಶ್ರೀಕಾಕುಲಮ (ಆಂದ್ರಪ್ರದೇಶ) – ಆಂಧ್ರಪ್ರದೇಶ-ಓಡಿಶಾ ಗಡಿಭಾಗದ ಶ್ರೀಕಾಕುಲಮ್‌ನಲ್ಲಿಯ ಪುರುಷೋತ್ತಮಪುರಮ್ ತಪಾಸಣಾ ಕೇಂದ್ರದಲ್ಲಿ ಜೂನ್ ೨೧ ರಂದು ಆಂಧ್ರಪ್ರದೇಶದ ಪೊಲೀಸರು ಸರಿಸುಮಾರು ೨೬ ಸಾವಿರ ಕೆಜಿ ಗೋಮಾಂಸ ವಶಪಡಿಸಿಕೊಂಡಿದ್ದಾರೆ. ಈ ಗೋಮಾಂಸವನ್ನು ಲಾರಿಯ ಮೂಲಕ ಬಂಗಾಲದಿಂದ ತಮಿಳುನಾಡು ರಾಜ್ಯಕ್ಕೆ ಸಾಗಿಸಲಾಗುತ್ತಿತ್ತು. ವಶಪಡಿಸಿಕೊಂಡ ಮಾಂಸದ ಮೌಲ್ಯವು ೨೦ ಲಕ್ಷ ರೂಪಾಯಿಯದ್ದಾಗಿದೆ.
Andhra Pradesh: 26,000 kg beef seized from a container at Purushottapuram check post in Srikakulam. Satyanarayana, Ichapuram Sub-Inspector says, "1300 packets of beef, each weighing 20 kg seized. Police also detained 2 drivers. Legal formalities underway". (21.06.20) pic.twitter.com/59Kaj7XDhd
— ANI (@ANI) June 21, 2020
ಅದು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ತುಂಬಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರಾನ್ಸಿಸ್ ಹಾಗೂ ಗಣಪತಿ ಶೇಖರ ಈ ಇಬ್ಬರು ವಾಹನ ಚಾಲಕರನ್ನು ಬಂಧಿಸಲಾಗಿದೆ. ಓಡಿಶಾದ ಬೆರಹಮಪುರದ ಬಜರಂಗ ದಳದಿಂದ ಈ ಸಾಗಾಟದ ಮುನ್ಸೂಚನೆ ನಿಕ್ಕಿತ್ತು.