ಓಡಿಶಾದ ಪಾರಾದೀಪ ಬಂದರಿನಿಂದ ಚೀನಾಗೆ ಕಬ್ಬಿಣದ ಅದಿರನ್ನು ಸಾಗಿಸುವ ೨೦ ನೌಕೆಗಳ ಸಾಗಾಟವನ್ನು ತಡೆಗಟ್ಟಿರಿ !

ಓಡಿಶಾದ ‘ಭಾರತ ರಕ್ಷಾ ಮಂಚ್’ನ ಸಭೆಯಲ್ಲಿ ಒಮ್ಮತದ ಬೇಡಿಕೆ

ವಾಸ್ತವದಲ್ಲಿ ಇಂತಹ ಬೇಡಿಕೆ ಮಾಡದೇ, ಸರಕಾರ ಸ್ವತಃ ಈ ಕೃತಿಯನ್ನು ಮಾಡುವುದು ರಾಷ್ಟ್ರಪ್ರೇಮಿಗಳಿಗೆ ಅಪೇಕ್ಷಿತವಿದೆ !

ಭುವನೇಶ್ವರ (ಓಡಿಶಾ)- ಚೀನಾವು ಭಾರತೀಯ ಸೈನಿಕರ ಮೇಲೆ ಮಾಡಿದ ಆಕ್ರಮಣವನ್ನು ಖಂಡಿಸಲು ‘ಭಾರತ ರಕ್ಷಾ ಮಂಚ್’ ಈ ಹಿಂದುತ್ವನಿಷ್ಠ ಸಂಘಟನೆಯು ಇಲ್ಲಿಯ ಸ್ಟೇಶನ್ ಚೌಕಿಯಲ್ಲಿ ಸಭೆಯ ಆಯೋಜನೆಯನ್ನು ಮಾಡಿತ್ತು. ಈ ಸಭೆಯಲ್ಲಿ ‘ಪಾರಾದೀಪ ಬಂದರಿನಲ್ಲಿ ನಿಂತಿರುವ ಹಾಗೂ ಚೀನಾಗೆ ಕಬ್ಬಿಣದ ಅದಿರನ್ನು ಸಾಗಿಸುವ ೨೦ ನೌಕೆಗಳ ಸಾಗಾಟವನ್ನು ರದ್ದುಪಡಿಸೇಕು’, ‘ಚೀನಾದೊಂದಿಗಿನ ಎಲ್ಲ ವ್ಯಾಪಾರಗಳನ್ನು ನಿಲ್ಲಿಸಬೇಕು’, ಎಂದು ಆಗ್ರಹಿಸಲಾಯಿತು, ಈ ವೇಳೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆಯನ್ನೂ ನೀಡಿದ್ದರು. ಈ ಸಭೆಯಲ್ಲಿ ‘ಭಾರತ ರಕ್ಷಾ ಮಂಚ್’ನ ರಾಜ್ಯಾಧ್ಯಕ್ಷ ಡಾ. ಅಶೋಕ ಆಚಾರ್ಯ, ನ್ಯಾಯವಾದಿ ಸಂಘಮಿತ್ರ ರಾಜಗುರು ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಅನೀಲ ಧೀರ್ ಇವರು ಮಾರ್ಗದರ್ಶನ ಮಾಡಿದರು.