ಸದ್ಯದ ಸ್ಥಿತಿಯಲ್ಲಿ ‘ಕೊರೋನಾ ವಿಷಾಣು’ವಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹದ ಅಗ್ನಿಸಂಸ್ಕಾರವನ್ನು ಮಾಡಲು ಸಾಧ್ಯವಾಗದಿದ್ದಾಗ ಧರ್ಮಶಾಸ್ತ್ರಕ್ಕನುಸಾರ ಮಾಡಬೇಕಾದ ‘ಪಾಲಾಶವಿಧಿ’ !

‘ದೇಶದಲ್ಲಿ ಎಲ್ಲ ಕಡೆಗೆ ‘ಕೊರೋನಾ’ ವಿಷಾಣುವಿನ ಸೋಂಕು ಹೆಚ್ಚಾಗುತ್ತಾ ಹೋಗುತ್ತಿದೆ ಮತ್ತು ಅದರಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಸೋಂಕಿನಿಂದಾಗಿ ಯಾರಾದರೂ ಮೃತಪಟ್ಟರೆ ಅವನ ಕುಟುಂಬದವರಿಗೆ ಮೃತದೇಹವನ್ನು ಕೊಡುವುದಿಲ್ಲ. ಸರಕಾರಿ ಸಿಬ್ಬಂದಿಗಳು ಅದನ್ನು ದಹನ ಮಾಡುತ್ತಾರೆ. ಆದುದರಿಂದ ಮೃತ ದೇಹದ ಎಲುಬುಗಳೂ (ಅಸ್ತಿ) ಸಿಗುವುದಿಲ್ಲ. ಇಂತಹ ಪ್ರಸಂಗದಲ್ಲಿ ‘ಅಂತ್ಯವಿಧಿಯನ್ನು ಹೇಗೆ ಮಾಡಬೇಕು ?’, ಎಂಬ ಪ್ರಶ್ನೆಯು ಸಮಾಜದಲ್ಲಿ ನಿರ್ಮಾಣವಾಗಿದೆ.

ಕೇರಳದಲ್ಲಿನ ಚಿನ್ನದ ಕಳ್ಳಸಾಗಣೆಯ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯನ ಬಂಧನ

ಇಲ್ಲಿನ ಚಿನ್ನದ ಕಳ್ಳಸಾಗಣಿಕೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಇಲ್ಲಿಯ ವರೆಗೆ ೧೦ ಜನ ಅಪರಾಧಿಗಳನ್ನು ಬಂಧಿಸಿದೆ. ಇದರಲ್ಲಿ ಒಬ್ಬ ಮೊಹಮ್ಮದ್ ಅಲಿ ಎಂಬವನೂ ಇದ್ದಾನೆ. ಅವನು ೨೦೧೦ ರಲ್ಲಿ ಕೇರಳದಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸಿದನೆಂಬ ತಥಾಕಥಿತ ವಿಷಯದಲ್ಲಿ ಪ್ರಾಧ್ಯಾಪಕ ಟಿ.ಜೆ. ಜೋಸೆಫ್ ಇವರ ಕೈಗಳನ್ನು ಕತ್ತರಿಸಿದ ಆರೋಪಿಯಾಗಿದ್ದನು.

ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ಕಾಂಬೋಡಿಯಾದಲ್ಲಿ ಹೆಣ್ಣುಮಕ್ಕಳು ಶಾರ್ಟ್ ಸ್ಕರ್ಟ್ ಮತ್ತು ಪಾರದರ್ಶಕ ಉಡುಪುಗಳನ್ನು ತೊಡುವುದು ನಿಷೇಧಕ್ಕೊಳಗಾಗಲಿದೆ

ಪೂರ್ವ ಏಷ್ಯಾದಲ್ಲಿನ ಕಾಂಬೋಡಿಯಾ ದೇಶವು ಹೆಣ್ಣುಮಕ್ಕಳು ಶಾರ್ಟ್ ಸ್ಕರ್ಟ್ ಅಥವಾ ಪಾರದರ್ಶಕ ಉಡುಪುಗಳನ್ನು ಧರಿಸುವುದನ್ನು ಮತ್ತು ಹುಡುಗರು ಶರ್ಟ್ ಹಾಕಿಕೊಳ್ಳದೇ ಇರುವುದನ್ನು ನಿಷೇಧಿಸಲಿದೆ. ಇದರ ಬಗ್ಗೆ ಕಾಂಬೋಡಿಯಾದ ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಗಿದೆ.

‘೯ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ‘ಹಿಂದೂ ರಾಷ್ಟ್ರ’ ಕುರಿತಾದ ವಿಚಾರಸಂಕೀರ್ಣದಲ್ಲಿ ಗಣ್ಯರ ಭಾಷಣ !

ಭಾರತೀಯ ಸಂಸತ್ತಿನಿಂದ ಕೇವಲ ೧೦ ಕಿ.ಮೀ ದೂರದಲ್ಲಿ ಹಿಂಸಾತ್ಮಕ ಆದೋಲನ ಮಾಡುತ್ತಾ ಭಾರತದಲ್ಲಿ ‘ಇಸ್ಲಾಮಿ ಆಡಳಿತ’ ಜಾರಿಗೊಳಿಸುವಂತಹ ಪ್ರಚೋದನಕಾರಿ ಭಾಷಣಗಳಾದವು. ವಿದೇಶಿ ಹಣಬಲದಿಂದ ಅನೇಕ ಪೊಲೀಸರನ್ನು ಗುರಿಪಡಿಸಿದರೆ ಅನೇಕ ಹಿಂದೂಗಳ ಹತ್ಯೆ ಮಾಡಲಾಯಿತು, ‘ಸಿಎನ್‌ಜಿ’ಯ ಅನೇಕ ಬಸ್‌ಗಳಿಗೆ ಬೆಂಕಿ ಹಚ್ಚಿ ಸ್ಫೋಟಿಸುವ ದೊಡ್ಡ ಆಯೋಜನೆಯನ್ನು ಮಾಡಲಾಗಿತ್ತು.

ಚಿತಗಾಂವ (ಬಾಂಗ್ಲಾದೇಶ) ನಲ್ಲಿಯ ಹಿಂದೂಗಳ ದೇವಾಲಯದಲ್ಲಿ ಗೋಮಾಂಸವನ್ನು ಎಸೆದು ವಿಡಂಬನೆ !

ಚಿತಗಾಂವ ಜಿಲ್ಲೆಯ ಸಟಕನಿಯಾದ ದಕ್ಷಿಣ ಧರ್ಮಾಪುರಿಯ ಮಘದೇಶ್ವರೀ ದೇವಸ್ಥಾನದಲ್ಲಿ ಮತಾಂಧರು ಆಗಸ್ಟ್ ೧ ರಂದು ಗೋಮಾಂಸವನ್ನು ಎಸೆದು ವಿಡಂಬನೆಯನ್ನು ಮಾಡಿದರು ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದರು.

ಭೂಮಿಪೂಜೆಗಾಗಿ ಶ್ರೀ ರಾಮಲಲ್ಲಾ, ಅವನ ಮೂವರು ಸಹೋದರರು ಹಾಗೂ ಬಾಲ ಹನುಮಾನನಿಗೆ ಆಮಂತ್ರಣ!

ಆಗಸ್ಟ್ ೫ ರಂದು ರಾಮ ಜನ್ಮಭೂಮಿಯಲ್ಲಿ ನಡೆಯಲಿರುವ ರಾಮ ಮಂದಿರದ ಭೂಮಿ ಪೂಜೆಗಾಗಿ ಮೊದಲು ಶ್ರೀ ರಾಮಾಲಲ್ಲಾ ಅವನ ಮೂವರು ಸಹೋದರರು ಮತ್ತು ಬಾಲ ಹನುಮಾನನಿಗೆ ಆಮಂತ್ರಣವನ್ನು ನೀಡಲಾಯಿತು. ಇಲ್ಲಿಯ ರಾಮಲಲ್ಲಾ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನು ಅರ್ಪಣೆ ಮಾಡಿ ದೇವರಿಗೆ ಉಪಸ್ಥಿತರಿರಲು ಹಾಗೂ ಇಡೀ ಸಮಾರಂಭವು ನಿರ್ವಿಘ್ನವಾಗಿ ನೆರವೇರಬೇಕೆಂದು ಪ್ರಾರ್ಥನೆಯನ್ನು ಮಾಡಲಾಯಿತು.

ರಕ್ಷಾಬಂಧನ ಶ್ರಾವಣ ಹುಣ್ಣಿಮೆ (೩.೮.೨೦೨೦)

ಸಹೋದರಿಯು ಸಹೋದರನಿಗೆ ರಾಖಿಯನ್ನು ಕಟ್ಟುವುದಕ್ಕಿಂತ ಯಾರಾದರೊಬ್ಬ ತರುಣನು/ ಪುರುಷನು ಯಾರಾದರೊಬ್ಬ ತರುಣಿಯಿಂದ/ ಸ್ತ್ರೀಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ; ಇದರಿಂದ ತರುಣಿಯ ಕಡೆಗೆ/ಸ್ತ್ರೀಯರ ಕಡೆಗೆ ನೋಡುವ ವಿಶೇಷವಾಗಿ ಯುವಕರ ಮತ್ತು ಪುರುಷರ ದೃಷ್ಟಿಕೋನವು ಬದಲಾಗುತ್ತದೆ.

ಬಕ್ರೀದ್ ದಿನದಂದು ಪಾಕಿಸ್ತಾನದಲ್ಲಿ ಅಜ್ಞಾತರಿಂದ ಹಿಂದೂ ವ್ಯಾಪಾರಿಯ ಹತ್ಯೆ

ಬಕ್ರಿದ್‌ದಂದು ಪಾಕಿಸ್ತಾನದ ಖೇರಪುರದಲ್ಲಿ ಅಜ್ಞಾತರಿಂದ ಓರ್ವ ಹಿಂದೂ ವ್ಯಾಪಾರಿಯ ಹತ್ಯೆ ಮಾಡಲಾಯಿತು. ರಾಜಾ ಕಿಶನ್ ಚಂದ ಎಂದು ಆತನ ಹೆಸರಾಗಿತ್ತು. ಕಿಶನ ತಮ್ಮ ಮನೆಗೆ ಮರಳುತ್ತಿರುವಾಗ ಅವರ ಮೇಲೆ ಆಕ್ರಮಣ ಮಾಡಿದರು. ಅದರಲ್ಲಿ ಅವರು ಮೃತಪಟ್ಟರು. ಪಾಕಿಸ್ತಾನದ ಒಂದೇ ಒಂದು ದಿನಪತ್ರಿಕೆಯು ರಾಜಾ ಕಿಶನ ಚಂದರವರ ಹತ್ಯೆಯ ವಾರ್ತೆಯನ್ನು ಪ್ರಸಾರ ಮಾಡಲಿಲ್ಲ.

ಹಿಂದೂಗಳಿಗೆ ನ್ಯೂಯಾರ್ಕ್‌ನ ‘ಟೈಮ್ಸ್ ಸ್ಕ್ವೇರ್’ನಲ್ಲಿ ಭಗವಾನ ಶ್ರೀರಾಮನ ಚಿತ್ರವನ್ನು ತಾತ್ಕಾಲಿಕವಾಗಿ ಹಾಕಲು ಅಮೇರಿಕಾದ ಎಡಪಂಥೀಯವರಿಂದ ತೀವ್ರ ವಿರೋಧ

ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಭೂಮಿ ಪೂಜೆಯ ಭವ್ಯ ಸಮಾರಂಭದ ನಿಮಿತ್ತ ನ್ಯೂಯಾರ್ಕ್‌ನಲ್ಲಿನ ವಿಶ್ವವಿಖ್ಯಾತ ‘ಟೈಮ್ಸ್ ಸ್ಕ್ವೇರ್’ನಲ್ಲಿ ಹಿಂದೂಗಳಿಂದ ಆನಂದೋತ್ಸವ ಆಚರಿಸಲಿದ್ದಾರೆ. ಇದರದ್ದೇ ಒಂದು ಭಾಗವೆಂದು ಹಿಂದೂಗಳು ಇಲ್ಲಿ ತಾತ್ಕಾಲಿಕವಾಗಿ ಭಗವಾನ ಶ್ರೀರಾಮನ ಭವ್ಯ ‘೩ ಡಿ’ಚಿತ್ರ ಹಾಕಲು ಆಯೋಜಿಸಿದ್ದರು.

ಇನ್ನುಮುಂದೆ ಸೈನ್ಯದ ಮೇಲೆ ವೆಬ್‌ಸಿರಿಸ್ ಹಾಗೂ ಚಲನಚಿತ್ರ ನಿರ್ಮಿಸಲು ರಕ್ಷಣಾ ಸಚಿವಾಲಯದಿಂದ ಅನುಮತಿಯನ್ನು ಪಡೆಯಬೇಕು

ಇನ್ನುಮುಂದೆ ಸೈನಿಕರ ಮೇಲೆ ವೆಬ್‌ಸಿರಿಸ್ ಹಾಗೂ ಚಲನಚಿತ್ರ ನಿರ್ಮಿಸಲು ಚಲನಚಿತ್ರ ನಿರ್ಮಾಣ ಸಂಸ್ಥೆಗಳಿಗೆ ರಕ್ಷಣಾ ಸಚಿವಾಲಯದಿಂದ ಅನುಮತಿಯನ್ನು ತೆಗೆದುಕೊಳ್ಳಬೇಕು ಎಂದು ರಕ್ಷಣಾ ಸಚಿವಾಲಯವು ಕೇಂದ್ರ ಚಲನಚಿತ್ರ ಪರಿವೀಕ್ಷಣಾ ಮಂಡಳಿ (ಸೆನ್ಸರ್ ಬೋರ್ಡ್) ಹಾಗೂ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ ಸೂಚನೆಯನ್ನು ನೀಡಿದೆ.