ಇನ್ನುಮುಂದೆ ಸೈನ್ಯದ ಮೇಲೆ ವೆಬ್‌ಸಿರಿಸ್ ಹಾಗೂ ಚಲನಚಿತ್ರ ನಿರ್ಮಿಸಲು ರಕ್ಷಣಾ ಸಚಿವಾಲಯದಿಂದ ಅನುಮತಿಯನ್ನು ಪಡೆಯಬೇಕು

  • ಸೈನ್ಯದ ಗೌರವಕ್ಕೆ ಕಳಂಕ ತರುತ್ತಿದ್ದರಿಂದ ಈ ನಿರ್ಧಾರ

  • ಸರಕಾರವು ಸೈನಿಕರ ಗೌರವವನ್ನು ಕಳಂಕಿಸುವ ಕೃತ್ಯಕ್ಕೆ ದೇಶದ್ರೋಹವೆಂದು ನಿರ್ಧರಿಸಿ ಸಂಬಂಧಪಟ್ಟವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು !

ನವ ದೆಹಲಿ – ಇನ್ನುಮುಂದೆ ಸೈನಿಕರ ಮೇಲೆ ವೆಬ್‌ಸಿರಿಸ್ ಹಾಗೂ ಚಲನಚಿತ್ರ ನಿರ್ಮಿಸಲು ಚಲನಚಿತ್ರ ನಿರ್ಮಾಣ ಸಂಸ್ಥೆಗಳಿಗೆ ರಕ್ಷಣಾ ಸಚಿವಾಲಯದಿಂದ ಅನುಮತಿಯನ್ನು ತೆಗೆದುಕೊಳ್ಳಬೇಕು ಎಂದು ರಕ್ಷಣಾ ಸಚಿವಾಲಯವು ಕೇಂದ್ರ ಚಲನಚಿತ್ರ ಪರಿವೀಕ್ಷಣಾ ಮಂಡಳಿ (ಸೆನ್ಸರ್ ಬೋರ್ಡ್) ಹಾಗೂ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ ಸೂಚನೆಯನ್ನು ನೀಡಿದೆ. ವೆಬ್‌ಸಿರಿಸ್ ಹಾಗೂ ಚಲನಚಿತ್ರಗಳಲ್ಲಿ ಸೈನಿಕರ ಹಾಗೂ ಸೈನ್ಯ ಗಣವೇಷದಲ್ಲಿ ಅವಮಾನಕಾರಕವಾಗಿ ಚಿತ್ರೀಕರಣ ಮಾಡಿದರ ಬಗ್ಗೆ ದೂರುಗಳು ಬಂದನಂತರ ರಕ್ಷಣಾ ಸಚಿವಾಲಯವು ಈ ನಿರ್ಣಯವನ್ನು ಕೈಗೊಂಡಿದೆ.

ರಕ್ಷಣಾ ಸಚಿವಾಲಯಕ್ಕೆ ಸಿಕ್ಕಿದ ದೂರಿನಲ್ಲಿ, ‘ಎ.ಎಲ್.ಟಿ. ಬಾಲಾಜಿ’ಯಲ್ಲಿ ಪ್ರಸಾರಗೊಂಡಿದ್ದ ‘ಕೋಡ ಎಮ್.ಎಮ್’ ಹಾಗೂ ‘ಎಕ್ಸ್.ಎಕ್ಸ್.ಎಕ್ಸ್. ಆನ್‌ಸೆಂಸೆರ್ಡ’ನಂತಹ ವೆಬ್‌ಸಿರಿಸ್‌ನಲ್ಲಿ ಸೈನ್ಯದ ಬಗ್ಗೆ ತೋರಿಸಲಾದ ಪ್ರಸಂಗ ಹಾಗೂ ದೃಶ್ಯಗಳು ಅವಾಸ್ತವಿಕವಾಗಿದ್ದವು. ಜೊತೆಗೆ ಇಂತಹ ವೆಬ್‌ಸಿರಿಸ್‌ನ ಮಾಧ್ಯಮದಿಂದ ಸೈನಿಕರ ಗೌರವವನ್ನು ಮಲಿನಗೊಳಿಸಲಾಗುತ್ತಿದೆ’ ಎಂದು ಹೇಳಿದೆ. ಇದರ ವಿರುದ್ಧ ಕೆಲವು ಸಂಘಟನೆಗಳು ‘ಎ.ಎಲ್.ಟಿ. ಬಾಲಾಜಿ’ಯ ವಿರುದ್ಧ ದೂರನ್ನು ದಾಖಲಿಸಿದ್ದೂ ಅದರ ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿವೆ.