ಬಕ್ರೀದ್ ದಿನದಂದು ಪಾಕಿಸ್ತಾನದಲ್ಲಿ ಅಜ್ಞಾತರಿಂದ ಹಿಂದೂ ವ್ಯಾಪಾರಿಯ ಹತ್ಯೆ

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಹತ್ಯಾಸರಣಿ ಮುಂದುವರಿಯುತ್ತಿದ್ದೂ ಅವರಿಗಾಗಿ ಅಂತರರಾಷ್ಟ್ರೀಯ ಮಾನವಹಕ್ಕುಗಳ ಆಯೋಗ, ಪ್ರಗತಿ(ಅಧೋಗತಿ)ಪರರು, ಪ್ರಸಾರಮಾಧ್ಯಮಗಳು, ಕೇಂದ್ರ ಸರಕಾರ ಇತ್ಯಾದಿ ಯಾರೂ ಧ್ವನಿ ಎತ್ತುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಪಾಕಿಸ್ತಾನ ಸಹಿತ ಜಗತ್ತಿನಾದ್ಯಂತ ಹಿಂದೂಗಳ ರಕ್ಷಣೆಗಾಗಿ ಹಿಂದೂ ರಾಷ್ಟ್ರವೇ ಬೇಕು !

ಇಸ್ಲಾಮಾಬಾದ – ಬಕ್ರಿದ್‌ದಂದು ಪಾಕಿಸ್ತಾನದ ಖೇರಪುರದಲ್ಲಿ ಅಜ್ಞಾತರಿಂದ ಓರ್ವ ಹಿಂದೂ ವ್ಯಾಪಾರಿಯ ಹತ್ಯೆ ಮಾಡಲಾಯಿತು. ರಾಜಾ ಕಿಶನ್ ಚಂದ ಎಂದು ಆತನ ಹೆಸರಾಗಿತ್ತು. ಕಿಶನ ತಮ್ಮ ಮನೆಗೆ ಮರಳುತ್ತಿರುವಾಗ ಅವರ ಮೇಲೆ ಆಕ್ರಮಣ ಮಾಡಿದರು. ಅದರಲ್ಲಿ ಅವರು ಮೃತಪಟ್ಟರು. ಪಾಕಿಸ್ತಾನದ ಒಂದೇ ಒಂದು ದಿನಪತ್ರಿಕೆಯು ರಾಜಾ ಕಿಶನ ಚಂದರವರ ಹತ್ಯೆಯ ವಾರ್ತೆಯನ್ನು ಪ್ರಸಾರ ಮಾಡಲಿಲ್ಲ. ಆದ್ದರಿಂದ ಹಿಂದುತ್ವನಿಷ್ಠರಿಂದ ಸಾಮಾಜಿಕ ಪ್ರಸಾರ ಮಾಧ್ಯಮಗಳ ಮೂಲಕ ಈ ಘಟನೆಯ ಬಗ್ಗೆ ಮಾಹಿತಿಯನ್ನು ನೀಡಿ ಪಾಕಿಸ್ತಾನದಲ್ಲಿಯ ಪೀಡಿತ ಹಿಂದೂಗಳಿಗಾಗಿ ನ್ಯಾಯವನ್ನು ಕೊಡಿಸುವಂತೆ ಕರೆಯನ್ನು ನೀಡಲಾಗುತ್ತಿದೆ.
ಕೆಲವು ದಿನಗಳ ಹಿಂದಷ್ಟೇ ಪಾಕಿಸ್ತಾನದಲ್ಲಿ ಇನ್ನೋರ್ವ ಹಿಂದೂ ವ್ಯಾಪಾರಿ ಮೈನಕ ಮಲ ಇವರ ಚತುಶ್ಚಕ್ರ ವಾಹನದ ಮೇಲೆ ಕೆಲವು ಶಸ್ತ್ರಸಹಿತ ದಾಳಿಖೊರರು ಗುಂಡುಹಾರಿಸಿದ್ದರು. ಅದರಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.