ಹಿಂದೂಗಳಿಗೆ ನ್ಯೂಯಾರ್ಕ್‌ನ ‘ಟೈಮ್ಸ್ ಸ್ಕ್ವೇರ್’ನಲ್ಲಿ ಭಗವಾನ ಶ್ರೀರಾಮನ ಚಿತ್ರವನ್ನು ತಾತ್ಕಾಲಿಕವಾಗಿ ಹಾಕಲು ಅಮೇರಿಕಾದ ಎಡಪಂಥೀಯವರಿಂದ ತೀವ್ರ ವಿರೋಧ

ಅಯೋಧ್ಯೆಯಲ್ಲಿನ ರಾಮಮಂದಿರದ ಭೂಮಿಪೂಜೆಯ ನಿಮಿತ್ತ ಹಿಂದೂಗಳು ಆನಂದೋತ್ಸವ ಆಚರಿಸುವರು

ಯಾವುದೇ ದೇಶದಲ್ಲಿಯ ಎಡಪಂಥೀಯರು ಒಳ್ಳೆಯ ಕೆಲಸಕ್ಕೆ ಅದರಲ್ಲಿಯೂ ವಿಶೇಷವಾಗಿ ಹಿಂದೂಗಳ ಸಂದರ್ಭದಲ್ಲಿ ಕೇವಲ ವಿಘ್ನವನ್ನು ತರುವ ಕೆಲಸವನ್ನು ಮಾಡುತ್ತಾರೆ. ಹಿಂದೂಗಳ ಧಾರ್ಮಿಕತೆಯ ಮೇಲೆ ಗದಾ ಪ್ರಹಾರ ಮಾಡುವ ಇಂತಹ ಹಿಂದೂದ್ವೇಷಿಗಳ ವಿರುದ್ಧ ಆಯಾ ಸ್ಥಳಗಳಲ್ಲಿ ಹಿಂದೂಗಳು ಸಂಘಟಿತವಾಗಿ ಧ್ವನಿ ಎತ್ತಬೇಕಿದೆ ಹಾಗೂ ಸಂಬಂಧಪಟ್ಟ ಸರಕಾರವು ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಮಾಡಬೇಕು !

ನ್ಯೂಯಾರ್ಕ್ : ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಭೂಮಿ ಪೂಜೆಯ ಭವ್ಯ ಸಮಾರಂಭದ ನಿಮಿತ್ತ ನ್ಯೂಯಾರ್ಕ್‌ನಲ್ಲಿನ ವಿಶ್ವವಿಖ್ಯಾತ ‘ಟೈಮ್ಸ್ ಸ್ಕ್ವೇರ್’ನಲ್ಲಿ ಹಿಂದೂಗಳಿಂದ ಆನಂದೋತ್ಸವ ಆಚರಿಸಲಿದ್ದಾರೆ. ಇದರದ್ದೇ ಒಂದು ಭಾಗವೆಂದು ಹಿಂದೂಗಳು ಇಲ್ಲಿ ತಾತ್ಕಾಲಿಕವಾಗಿ ಭಗವಾನ ಶ್ರೀರಾಮನ ಭವ್ಯ ‘೩ ಡಿ’ಚಿತ್ರ ಹಾಕಲು ಆಯೋಜಿಸಿದ್ದರು. ಅದಕ್ಕಾಗಿ ಅಮೇರಿಕಾದ ಕಟ್ಟರ ಎಡವಿಚಾರಸರಣಿ ಸಂಘಟನೆಯಾಗಿರುವ ‘ದಕ್ಷಿಣ ಏಶಿಯಾ ಸ್ಯಾಲಿಡಿರಿಟಿ ಇನಿಶಿಯೇಟಿವ್’ವು ತೀವ್ರವಾಗಿ ವಿರೋಧವನ್ನು ವ್ಯಕ್ತಪಡಿಸಿದೆ. ಅದು ಅಮೇರಿಕಾದ ಎಲ್ಲ ಜನರಿಗೆ ಹಿಂದೂಗಳ ವಿರುದ್ಧ ಸಂಘಟಿತರಾಗಲು ಕರೆ ನೀಡಿದೆ. ‘ದಕ್ಷಿಣ ಏಶಿಯಾ ಸ್ಯಾಲಿಡಿರಿಟಿ ಇನಿಶಿಯೇಟಿವ್’ವು ತನ್ನ ಟ್ವೀಟ್‌ನಲ್ಲಿ ಭಾರತದ ಪ್ರಧಾನಿ ಮೋದಿ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಮೇಲೆ ಟೀಕೆಯನ್ನು ಮಾಡಿದೆ. ಜೊತೆಗೆ ‘ಹಿಂದೂ ರಾಷ್ಟ್ರವಾದ ಇನ್ನು ‘ಬೇಡ’ ಎಂದು ಹೇಳುವ ಸಮಯಬಂದಿದೆ’, ಈ ರೀತಿಯ ಪ್ರಚೋದನಕಾರಿ ಹೇಳಿಕೆಯನ್ನು ಈ ಸಂಘಟನೆಯು ನೀಡಿದೆ.
‘ದಕ್ಷಿಣ ಏಶಿಯಾ ಸ್ಯಾಲಿಡಿರಿಟಿ ಇನಿಶಿಯೇಟಿವ್’ವು ಈ ಸಂಘಟನೆಯು ‘ಸ್ಟಾಂಡ್ ವಿಥ ಕಾಶ್ಮೀರ’ ಈ ಪ್ರತ್ಯೇಕತಾವಾದಿ ಸಂಘಟನೆಯೊಂದಿಗೆ ಕೆಲಸ ಮಾಡುತ್ತದೆ. ‘ಸ್ಟಾಂಡ್ ವಿಥ ಕಾಶ್ಮೀರ’ ಈ ಸಂಘಟನೆಯು ಭಾರತದಲ್ಲಿ ಸಿಎಎ ಕಾನೂನಿನ ವಿರುದ್ಧ ಸಕ್ರಿಯವಾಗಿತ್ತು. ಈ ಸಂಘಟನೆಯನ್ನು ಪಾಕಿಸ್ತಾನವನ್ನು ಬೆಂಬಲಿಸುವ ಸಂಘಟನೆ ಎಂದು ಹೇಳಲಾಗುತ್ತದೆ.