Congress Minister Statement: ‘ಹಿಂದೂ ಧರ್ಮದಲ್ಲಿ ಸುಧಾರಣೆಯಿಲ್ಲ, ಹಾಗಾಗಿ ನಾನು ಬೌದ್ಧ ಧರ್ಮ ಸ್ವೀಕರಿಸುತ್ತೇನೆ !’ – ಕಾಂಗ್ರೆಸ್ ಸರಕಾರದ ಸಚಿವ ಮಹದೇವಪ್ಪ

ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವ ಮಹದೇವಪ್ಪ ಅವರಿಂದ ಘೋಷಣೆ

ಬೆಂಗಳೂರು – ರಾಜ್ಯದ ಸಮಾಜ ಕಲ್ಯಾಣ ಸಚಿವ ಡಾ. H.C. ಮಹದೇವಪ್ಪ ಬೌದ್ಧ ಧರ್ಮ ಸ್ವೀಕರಿಸುವುದಾಗಿ ಘೋಷಿಸಿದ್ದಾರೆ. ಅಕ್ಟೋಬರ್ 14 ರಂದು ಧಮ್ಮಚಕ್ರ ಪರಿವರ್ತನಾ ದಿನದ ನಿಮಿತ್ತ ಮಹದೇವಪ್ಪ ‘ಎಕ್ಸ್’ನಲ್ಲಿ ಶುಭ ಹಾರೈಸಿದರು. ಅವರು, ನನಗೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಸಾರುವ ಧರ್ಮ ಇಷ್ಟವಾಗುತ್ತದೆ. ಸಮಾನತೆ ಮತ್ತು ಸ್ವಾತಂತ್ರ್ಯ ಬಹಳ ಮುಖ್ಯ; ಆದರೆ ನನ್ನ ಅನುಭವದ ಪ್ರಕಾರ ಜಾತಿ ಮೇಲುಗೈ ಎಂಬ ಕಾಯಿಲೆಯಿಂದ ನರಳುತ್ತಿರುವ ಹಿಂದೂ ಧರ್ಮದಲ್ಲಿ ಸುಧಾರಣೆಯ ಲಕ್ಷಣಗಳು ಕಾಣುತ್ತಿಲ್ಲ (ಯಾವುದಾದರೂ ಕಾಯಿಲೆ ಇದ್ದರೆ ಅದು ಧರ್ಮದಲ್ಲಿ ಅಲ್ಲ, ಬದಲಾಗಿ ಆ ಧರ್ಮದ ಆಚರಣೆ ಮಾಡುವವರಲ್ಲಿ ಇರುತ್ತದೆ, ಇಷ್ಟೂ ತಿಳಿಯದವರು ಸಚಿವರಾಗುತ್ತಾರೆ. – ಸಂಪಾದಕರು); ಹಾಗಾಗಿ ಸಮಾನತೆ ಮತ್ತು ಶಾಂತಿಯನ್ನು ಸಂಕೇತಿಸುವ ಬೌದ್ಧ ಧರ್ಮವನ್ನು ಸ್ವೀಕರಿಸಲಿದ್ದೇನೆ ಎಂದು ಹೇಳಿದರು.

ಮಹದೇವಪ್ಪ ಮಾತನಾಡಿ, ಭಾರತದ ಮೂಲ ಧರ್ಮವಾಗಿರುವ ಬೌದ್ಧ ಧರ್ಮವನ್ನು ಎಲ್ಲರೂ ಪ್ರಚಾರ ಮಾಡಬೇಕೆಂದು ನಾನು ಬಯಸುತ್ತೇನೆ. (ಭಾರತದ ಮೂಲ ಧರ್ಮ ಸನಾತನ ಧರ್ಮ, ಅಂದರೆ ಹಿಂದೂ ಧರ್ಮ ಎಂದು ಜಗತ್ತಿಗೆ ತಿಳಿದಿದೆ; ಆದರೆ ಮಹದೇವಪ್ಪ ಅವರು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ! – ಸಂಪಾದಕರು)

ಸಂಪಾದಕೀಯ ನಿಲುವು

ಬೌದ್ಧಧರ್ಮ ಸ್ಥಾಪಿಸಿದಾಗ, ಅದು ಶಾಂತಿಯ ಸಂಕೇತವಾಗಿತ್ತು; ಆದರೆ ಈಗ ಅದರ ಅನುಯಾಯಿಗಳಾಗಿರುವ ದೇಶಗಳು, ಅಂದರೆ. ಚೀನಾ, ಉತ್ತರ ಕೊರಿಯಾ, ಮ್ಯಾನ್ಮಾರ್ ಭಾರೀ ಹಿಂಸಾಚಾರ ಮತ್ತು ಆಕ್ರಮಣಕ್ಕೆ ಸಾಕ್ಷಿಯಾಗುತ್ತಿವೆ. ಈ ಬಗ್ಗೆ ಮಹದೇವಪ್ಪ ಏಕೆ ಮಾತನಾಡುವುದಿಲ್ಲ ? ಹಿಂದೂಗಳು ಎಂದಿಗೂ ಆಕ್ರಮಣಕಾರಿಯಾಗುವುದಿಲ್ಲ, ಅಥವಾ ಯಾವುದೇ ಇತರ ಧರ್ಮದ ಮೇಲೆ ದಾಳಿ ಮಾಡುವುದಿಲ್ಲ !