ದ್ವಾರಕಾ (ಗುಜರಾತ) – ಇಲ್ಲಿ ಮುಸ್ಲಿಮರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಓರ್ವ ಕಾರ್ಯಕರ್ತನ ಮೇಲೆ ದಾಳಿ ನಡೆಸಿದರು. ಈ ಪ್ರಕರಣ ಜಾಮಖಂಬಲಿಯಾದ ಮದಿನಾ ಮಸೀದಿ ವೃತ್ತದಲ್ಲಿ ನಡೆದಿದೆ. ಸಂತ್ರಸ್ತ ಸ್ವಯಂಸೇವಕನು ತನ್ನ ವಾಹನದಲ್ಲಿ ಹೋಗುತ್ತಿರುವಾಗ 25-30 ಮುಸ್ಲಿಮರು ಅವನನ್ನು ಹಿಡಿದು ಮಾರಣಾಂತಿಕ ದಾಳಿ ನಡೆಸಿದರು. ಈ ಪ್ರಕರಣದಲ್ಲಿ ಸಂತ್ರಸ್ತ ಸ್ವಯಂಸೇವಕನು ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಲಾಲಾ ಶೇಖ್ ಮತ್ತು ರುಸ್ತಂ ಸೇರಿದಂತೆ 30 ಜನರ ವಿರುದ್ಧ ಅಪರಾಧ ದಾಖಲಿಸಿದ್ದಾರೆ.
ಈ ಘಟನೆಯ ನಂತರ, ಜಾಮಖಂಬಲಿಯಾ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಇಡೀ ಪ್ರದೇಶದಲ್ಲಿ ಕಟ್ಟುನಿಟ್ಟಿನ ಬಂದೋಬಸ್ತು ಮಾಡಲಾಗಿದೆ.
ಸಂಪಾದಕೀಯ ನಿಲುವುಇದರಿಂದ ಮುಸ್ಲಿಮರಿಗೆ ಕಾನೂನು, ಪೊಲೀಸರು ಮತ್ತು ಆಡಳಿತದ ಬಗ್ಗೆ ಸ್ವಲ್ಪವೂ ಭಯವಿಲ್ಲವೆಂದು ಕಂಡು ಬರುತ್ತದೆ. ಸರಕಾರ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! |