ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ಕಾಂಬೋಡಿಯಾದಲ್ಲಿ ಹೆಣ್ಣುಮಕ್ಕಳು ಶಾರ್ಟ್ ಸ್ಕರ್ಟ್ ಮತ್ತು ಪಾರದರ್ಶಕ ಉಡುಪುಗಳನ್ನು ತೊಡುವುದು ನಿಷೇಧಕ್ಕೊಳಗಾಗಲಿದೆ

ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ಚಿಕ್ಕ ಕಾಂಬೋಡಿಯಾ ಹೀಗೆ ಮಾಡಬಹುದಾದರೆ, ಭಾರತ ಏಕೆ ಹೀಗೆ ಮಾಡಬಾರದು?

ನವ ದೆಹಲಿ – ಪೂರ್ವ ಏಷ್ಯಾದಲ್ಲಿನ ಕಾಂಬೋಡಿಯಾ ದೇಶವು ಹೆಣ್ಣುಮಕ್ಕಳು ಶಾರ್ಟ್ ಸ್ಕರ್ಟ್ ಅಥವಾ ಪಾರದರ್ಶಕ ಉಡುಪುಗಳನ್ನು ಧರಿಸುವುದನ್ನು ಮತ್ತು ಹುಡುಗರು ಶರ್ಟ್ ಹಾಕಿಕೊಳ್ಳದೇ ಇರುವುದನ್ನು ನಿಷೇಧಿಸಲಿದೆ. ಇದರ ಬಗ್ಗೆ ಕಾಂಬೋಡಿಯಾದ ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಗಿದೆ. ಸರಕಾರವು, ‘ಇದರಿಂದ ಕಾಂಬೋಡಿಯಾದ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ಸಹಾಯವಾಗುವುದು’ ಎಂದು ಹೇಳಿದೆ. ಈ ಪ್ರಸ್ತಾವನೆಯನ್ನು ಹಲವಾರು ಶಾಸಕರು ಬೆಂಬಲಿಸಿದ್ದಾರೆ. ಪ್ರಸ್ತಾವನೆಗೆ ಸಮ್ಮತಿ ದೊರೆತರೆ, ಮುಂದಿನ ವರ್ಷದಿಂದ ಅದನ್ನು ಜಾರಿಗೆ ತರಲಾಗುವುದು ಹಾಗೂ ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು.
ಸಮಾಜದಲ್ಲಿ ಹೆಚ್ಚಾಗುತ್ತಿರುವ ಲೈಂಗಿಕ ಶೋಷಣೆಯಂತಹ ಘಟನೆಗಳಿಗಾಗಿ ಇಂತಹ ಕಾನೂನಿನ ಅವಶ್ಯಕತೆ ಇದೆ ಎಂದು ಪ್ರಸ್ತಾವನೆಯನ್ನು ಬೇಂಬಲಿಸುವವರು, ಹೇಳಿದ್ದಾರೆ.