ಕೇರಳದಲ್ಲಿನ ಚಿನ್ನದ ಕಳ್ಳಸಾಗಣೆಯ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯನ ಬಂಧನ

ಗಲಭೆ, ಕೊಲೆ, ಕಳ್ಳಸಾಗಣೆಕೆ, ಗೂಂಡಾಗಿರಿ ಮುಂತಾದ ಅಪರಾಧಗಳ ಹಿನ್ನೆಲೆಯಿರುವ ಸಂಘಟನೆಯನ್ನು ಸರ್ಕಾರ ಏಕೆ ನಿಷೇಧಿಸುವುದಿಲ್ಲ?

ತಿರುವನಂತಪುರಂ (ಕೇರಳ) – ಇಲ್ಲಿನ ಚಿನ್ನದ ಕಳ್ಳಸಾಗಣಿಕೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಇಲ್ಲಿಯ ವರೆಗೆ ೧೦ ಜನ ಅಪರಾಧಿಗಳನ್ನು ಬಂಧಿಸಿದೆ. ಇದರಲ್ಲಿ ಒಬ್ಬ ಮೊಹಮ್ಮದ್ ಅಲಿ ಎಂಬವನೂ ಇದ್ದಾನೆ. ಅವನು ೨೦೧೦ ರಲ್ಲಿ ಕೇರಳದಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸಿದನೆಂಬ ತಥಾಕಥಿತ ವಿಷಯದಲ್ಲಿ ಪ್ರಾಧ್ಯಾಪಕ ಟಿ.ಜೆ. ಜೋಸೆಫ್ ಇವರ ಕೈಗಳನ್ನು ಕತ್ತರಿಸಿದ ಆರೋಪಿಯಾಗಿದ್ದನು. ೨೦೧೫ ರಲ್ಲಿ ಅವನನ್ನು ನಿರಪರಾಧಿ ಎಂದು ಬಿಡಲಾಯಿತು. ಅವನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯನಾಗಿದ್ದಾನೆ.