ಲಾರೆನ್ಸ ಬಿಷ್ಣೋಯಿ ಗ್ಯಾಂಗ್ ನಿಂದ ದೆಹಲಿಯ ಕೊಲೆಗಾರರಿಗೆ ಸುಪಾರಿ(ಹಣ) ನೀಡಿರುವುದು ಬಹಿರಂಗ

ನವ ದೆಹಲಿ – ಏಕಪಾತ್ರಾಭಿನಯ ಹಾಸ್ಯ ಕಾರ್ಯಕ್ರಮ ಮಾಡುವ ಹಿಂದೂ ದ್ವೇಷಿ ಕಲಾವಿದ ಮುನವ್ವರ ಫಾರೂಕಿಯನ್ನು ಹತ್ಯೆ ಮಾಡುವ ಪ್ರಯತ್ನವನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಮಾಡುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಫಾರೂಕಿಯನ್ನು ಹತ್ಯೆ ಮಾಡುವ ಸಂಚು ಇಂಗ್ಲೆಂಡ್ ನಲ್ಲಿ ರಚಿಸಲಾಗಿದೆ. ಲಾರೆನ್ಸ ಬಿಷ್ಣೋಯಿ ಗುಜರಾತ್‌ನ ಸಾಬರಮತಿಯ ಕಾರಾಗೃಹದಲ್ಲಿದ್ದರೂ, ಅವನ ಕೆಲವು ಸಹಚರರು ವಿದೇಶದಲ್ಲಿದ್ದು ಗ್ಯಾಂಗ ನಡೆಸುತ್ತಿದ್ದಾರೆ. ಇದರಲ್ಲಿ ಗೋಲ್ಡಿ ಬ್ರಾರ ಮತ್ತು ರೋಹಿತ ಗೋದಾರಾ ಇವರು ಸೇರಿದ್ದಾರೆ. ಅವರೇ ಫಾರೂಕಿಯನ್ನು ಹತ್ಯೆ ಮಾಡಲು ಸಂಚನ್ನು ರಚಿಸಿರುವುದು ಬಹಿರಂಗವಾಗಿದೆ. ರೋಹಿತ ಗೋದಾರಾ ಇವನು ದೆಹಲಿಯ 2 ಕೊಲೆಗಾರರಿಗೆ ಫಾರೂಕಿಯನ್ನು ಕೊಲ್ಲಲು ಸುಪಾರಿ ನೀಡಿದ್ದನು. ಸೆಪ್ಟೆಂಬರ್ 13 ರಂದು, ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ನಾದಿರ ಶಾ ಓರ್ವ ಅಪಘಾನಿ ವ್ಯಕ್ತಿಯ ಹತ್ಯೆಯಾಗಿರುವ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿರುವಾಗ ಹರಿಯಾಣದಿಂದ ಕೊಲೆಗಾರನನ್ನು ಬಂಧಿಸಿದರು. ಗೋದಾರ ಇವರು ಫಾರೂಕಿಯನ್ನು ಹತ್ಯೆ ಮಾಡಲು ಯಾರಿಗೆ ಸುಪಾರಿ ನೀಡಿದ್ದನೋ, ಅವರಲ್ಲಿ ಇವನೂ ಒಬ್ಬನಾಗಿದ್ದನು. ಅವನು ತನಿಖೆಯಲ್ಲಿ ಫಾರೂಕಿಯ ಹತ್ಯೆಯ ಸುಪಾರಿ ಪಡೆದಿರುವುದಾಗಿ ಒಪ್ಪಿಕೊಂಡನು. ನಾದಿರ್ ಷಾನ ಹತ್ಯೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಮಾಡಿತ್ತು.
ಸಂಪಾದಕೀಯ ನಿಲುವುಮುನವ್ವರ್ ಫಾರೂಕಿ ತನ್ನ ಕಾರ್ಯಕ್ರಮಗಳಲ್ಲಿ ಅನೇಕ ಬಾರಿ ಹಿಂದೂ ದೇವತೆಗಳ ವಿಡಂಬನೆ ಮಾಡಿದ್ದಾನೆ ! |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation