ಬೆಂಗಳೂರು – ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಹೊಂದಿರುವ ಮತ್ತು ಭಯೋತ್ಪಾದಕ ಕೃತ್ಯಗಳ ಸಂಚು ರೂಪಿಸಿರುವ ಆರೋಪದಲ್ಲಿ ದೋಷಿಯೆಂದು ನಿರ್ಧರಿಸಿ ಜೀವಾವಧಿ ಶಿಕ್ಷೆಯಾಗಿದ್ದ ಪಾಕಿಸ್ತಾನಿ ಪ್ರಜೆ ಸೇರಿದಂತೆ ಮೂವರನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಬೆಂಗಳೂರಿನ ಟಿಪ್ಪುನಗರದ ಸೈಯದ್ ಅಬ್ದುಲ್ ರೆಹಮಾನ್, ಚಿಂತಾಮಣಿಯ ಅಪ್ಸರಪಾಶಾ ಉರ್ಫ ಖುಶೀಉದ್ದೀನ ಮತ್ತು ಪಾಕಿಸ್ತಾನದ ಕರಾಚಿಯ ಮಹಮ್ಮದ್ ಫಹಾದ್ ಉರ್ಫ ಮಹಮ್ಮದ ಕೋಯಾ ಇವರು ತೀರ್ಪನ್ನು ಪ್ರಶ್ನಿಸಿದ್ದರು. `ಈ ಮೂವರ ವಿರುದ್ಧ ಪ್ರಸ್ತುತ ಪಡಿಸಲಾಗಿರುವ ಸಾಕ್ಷ್ಯಗಳು ಅವರ ಮೇಲೆ ದೇಶದ ವಿರುದ್ಧ ಯುದ್ಧಕ್ಕೆ ಕರೆನೀಡುವ ಸಂಘಟನೆಯ ಭಾಗವಾಗಿದ್ದರು ಎನ್ನುವುದನ್ನು ಸಾಬೀತುಪಡಿಸಲು ಸಾಕಾಗುವುದಿಲ್ಲ’, ಎಂದು ನ್ಯಾಯಾಲಯವು ತೀರ್ಪಿನಲ್ಲಿ ತಿಳಿಸಿದೆ.
ಸಂಪಾದಕೀಯ ನಿಲುವುಈ ಮೂವರೂ ಬಿಡುಗಡೆಗೊಂಡ ಬಳಿಕ ಅವರ ಮೇಲೆ ಯಾರು ನಿಗಾವಹಿಸುವರು ? ಅವರು ನಿಜವಾಗಿಯೂ ಭಯೋತ್ಪಾದಕ ಕೃತ್ಯಗಳನ್ನು ಮಾಡಿದರೆ? ಎನ್ನುವ ಪ್ರಶ್ನೆ ಜನತೆಯ ಮನಸ್ಸಿನಲ್ಲಿ ಮೂಡಿದರೆ ಆಶ್ಚರ್ಯವೇನಿಲ್ಲ ! |