ಅಯೋಧ್ಯೆ (ಉತ್ತರಪ್ರದೇಶ) – ಆಗಸ್ಟ್ ೫ ರಂದು ರಾಮ ಜನ್ಮಭೂಮಿಯಲ್ಲಿ ನಡೆಯಲಿರುವ ರಾಮ ಮಂದಿರದ ಭೂಮಿ ಪೂಜೆಗಾಗಿ ಮೊದಲು ಶ್ರೀ ರಾಮಾಲಲ್ಲಾ ಅವನ ಮೂವರು ಸಹೋದರರು ಮತ್ತು ಬಾಲ ಹನುಮಾನನಿಗೆ ಆಮಂತ್ರಣವನ್ನು ನೀಡಲಾಯಿತು. ಇಲ್ಲಿಯ ರಾಮಲಲ್ಲಾ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನು ಅರ್ಪಣೆ ಮಾಡಿ ದೇವರಿಗೆ ಉಪಸ್ಥಿತರಿರಲು ಹಾಗೂ ಇಡೀ ಸಮಾರಂಭವು ನಿರ್ವಿಘ್ನವಾಗಿ ನೆರವೇರಬೇಕೆಂದು ಪ್ರಾರ್ಥನೆಯನ್ನು ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಗೆ ಆಗಮಿಸಿದ ನಂತರ ಅವರು ಮೊದಲು ಹನುಮಾನ್‌ಗಢಿಯ ದರ್ಶನವನ್ನು ಪಡೆಯುವರು. ಆಗಸ್ಟ್ ೫ ರಂದು ಪ್ರಧಾನಮಂತ್ರಿಗಳು ಕಾರ್ಯಕ್ರಮದಲ್ಲಿ ಎರಡೂವರೆ ಗಂಟೆಗಳ ಕಾಲ ಇರುವರು. ಈ ಸಮಾರಂಭದಲ್ಲಿ ೧೭೦ ರಿಂದ ೧೮೦ ಜನರು ಉಪಸ್ಥಿತರಿರುವರು. ಮುಖ್ಯ ಅತಿಥಿಗಳೆಂದು ಸರಸಂಘಚಾಲಕರಾದ ಡಾ. ಮೋಹನ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ ಪಟೇಲ್ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಉಪಸ್ಥಿತರಿರುವರು. ಭೂಮಿ ಪೂಜೆಯ ದಿನಕ್ಕಾಗಿ ಶ್ರೀ ರಾಮಲಲ್ಲಾನಿಗಾಗಿ ಎರಡು ಜೊತೆ ವೇಷಭೂಷಣಗಳನ್ನು ಸಿದ್ಧಪಡಿಸಲಾಗಿದೆ. ಶ್ರೀ ರಾಮಲಲ್ಲಾನಿಗೆ ಹಸಿರು ಮತ್ತು ಕೇಸರಿ ಬಣ್ಣದ ನವರತ್ನಗಳನ್ನು ಅಳವಡಿಸಿದ ವಸ್ತ್ರ್ತಗಳನ್ನು ತೊಡಿಸಲಾಗುವುದು. ರಾಮಮಂದಿರದ ಭೂಮಿ ಪೂಜೆಯ ವಿಧಿಗಾಗಿ ಕೈಲಾಸ ಮಾನಸರೋವರದೊಂದಿಗೆ ಗಂಗಾನದಿಯ, ಹಾಗೆಯೇ ಇತರ ನದಿಗಳ, ಅದೇರೀತಿ ಶ್ರೀಲಂಕಾದ ಸಮುದ್ರದ ನೀರನ್ನು ತರಲಾಗಿದೆ.