|
ಶ್ರೀನಗರ (ಜಮ್ಮು ಕಾಶ್ಮೀರ) – ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಅಬ್ದುಲ್ಲಾ ಕುಟುಂಬದವರಿಗೆ ಕೇಳಿಯೇ ಕಾಶ್ಮೀರದಿಂದ ಕಲಂ ೩೭೦ ತೆರವುಗೊಳಿಸಿದ್ದರು, ಎಂದು ಅವಾಮಿ ಇತ್ತೆಹಾದ್ ಪಕ್ಷದ ಮುಖ್ಯಸ್ಥ ಸಂಸದ ಇಂಜಿನಿಯರ್ ರಾಶಿದ್ ಇವರು ಗಂಭೀರ ಆರೋಪ ಮಾಡಿದ್ದಾರೆ. ಭಾಜಪವು ‘ನ್ಯಾಷನಲ್ ಕಾನ್ಫರೆನ್ಸ್’ ಪಕ್ಷಕ್ಕೆ ಸಹಾಯ ಮಾಡಿರುವುದರಿಂದ ಕಾಶ್ಮೀರ ಕಣಿವೆಯಲ್ಲಿ ಈ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ. ಎಲ್ಲವೂ ಯೋಜನಾಬದ್ದವಾಗಿ ಆಗಿದೆ, ಎಂದು ಕೂಡ ಅವರು ಆರೋಪಿಸಿದ್ದಾರೆ.
ರಾಶಿದ ಮಾತು ಮುಂದುವರೆಸಿ, ಯಾವಾಗ ಪ್ರಧಾನಿ ಮೋದಿ ಇವರು ಕಲಂ ೩೭೦ ತೆರವುಗೊಳಿಸಿದ್ದರು, ಅದರ ಮೂರು ದಿನದ ಹಿಂದೆ ಅವರು ಫಾರೂಕ್ ಅಬ್ದುಲ್ಲ ಇವರನ್ನು ಭೇಟಿ ಮಾಡಿದ್ದರು. ಆಗ ಅಬ್ದುಲ್ಲ, ಏನು ಆಗುವುದಿಲ್ಲ ಎಂದು ಹೇಳಿದ್ದರು; ಆದರೆ ಪ್ರತ್ಯಕ್ಷದಲ್ಲಿ ಈ ಕಲಂ ತೆರವುಗೊಳಿಸಲಾಯಿತು. ಅದರ ನಂತರ ಫಾರೂಕ್ ಮತ್ತು ಓಮರ್ ಈ ತಂದೆ ಮಗನನ್ನು ‘ಸರಕಾರಿ ವಿಶ್ರಾಂತಿಗೃಹ’ದಲ್ಲಿ ಇರಿಸಲಾಗಿತ್ತು. ಇವರಿಬ್ಬರೂ ಕೇಂದ್ರ ಸರಕಾರದ ನಿರ್ಣಯಕ್ಕೆ ಬೆಂಬಲಿಸಿರುವ ಹಾಗೆ ಅನಿಸುತ್ತದೆ ಎಂದು ಹೇಳಿದರು.
ಯಾರು ಈ ಇಂಜಿನಿಯರ್ ರಾಶಿದ್ ?
ಇಂಜಿನಿಯರ್ ರಾಶಿದ್ ಗೆ ೨೦೧೬ ರಲ್ಲಿ ‘ಅಕ್ರಮ ಕೃತ್ಯ ನಿಷೇಧಿತ ಕಾನೂನಿ’ನ ಅಡಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಮಾಡುವ ಆರೋಪದಲ್ಲಿ ಬಂಧಿಸಲಾಗಿತ್ತು. ರಾಶಿದ್ ಕಾಲಾಗೃಹದಿಂದಲೇ ಮೇ ೨೦೨೪ ರಲ್ಲಿ ನಡೆದಿರುವ ಲೋಕಸಭೆಯ ಚುನಾವಣೆಯನ್ನು ಗೆದ್ದ. ಬಾರಾಮುಲ್ಲಾ ಚುನಾವಣಾ ಕ್ಷೇತ್ರದಿಂದ ಅವರು ಜಮ್ಮು ಕಾಶ್ಮೀರದ ಹೊಸದಾಗಿ ನೇಮಕಗೊಂಡಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಇವರನ್ನು ಸೋಲಿಸಿದ್ದರು. ಸಪ್ಟೆಂಬರ್ ೧೦, ೨೦೨೪ ರಂದು ದೆಹಲಿ ನ್ಯಾಯಾಲಯವು ಇವರಿಗೆ ಮಧ್ಯಂತರ ಜಾಮೀನು ನೀಡಿತ್ತು.