ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸರತ್ ಜಹಾನ್ ಶ್ರೀ ದುರ್ಗಾ ದೇವಿಯಂತೆ ಉಡುಗೆ ತೊಟ್ಟಿದ್ದರಿಂದ ಮತಾಂಧರಿಂದ ಜೀವ ಬೆದರಿಕೆ

ಬಂಗಾಲದ ತೃಣಮೂಲ ಕಾಂಗ್ರೆಸ್‌ನ ಸಂಸದೆ ಹಾಗೂ ನಟಿ ನುಸರತ್ ಜಹಾನ್ ಅವರು ಮಹಾಲಯದ ದಿನದಂದು ತಮ್ಮ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ಶ್ರೀ ದುರ್ಗಾದೇವಿಯಂತೆ ವೇಷವನ್ನು ತೊಟ್ಟಿದ್ದರು.

‘ಶ್ರೀಕೃಷ್ಣ ಜನ್ಮಭೂಮಿಯ ವಿವಾದದ ಮೂಲಕ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನ !’ – ಬಾಬರಿಯ ಪಕ್ಷದ ಸದಸ್ಯ ಇಕ್ಬಾಲ್ ಅನ್ಸಾರಿ

ಮಥುರಾದಲ್ಲಿ ಶ್ರೀಕೃಷ್ಣಜನ್ಮಭೂಮಿ ಕುರಿತು ಹಿಂದೂಗಳು ಮತ್ತು ಮುಸ್ಲಿಮರಂತಹ ರಾಜಕಾರಣಿಗಳು ವಿವಾದವನ್ನು ಹುಟ್ಟುಹಾಕುತ್ತಿದ್ದಾರೆ. ಕೆಲವರು ಈ ಮೂಲಕ ತಮ್ಮ ಬೆಳೆ ಬೇಯಿಸಲು ಈ ವಾದವನ್ನು ಪ್ರಾರಂಭಿಸಲು ಬಯಸುತ್ತಾರೆ.

ನಾವು ಮ. ಗಾಂಧಿಯವರ ವಿಚಾರಗಳನ್ನು ಅನುಸರಿಸಿದ್ದರೆ, ಇಂದು ‘ಆತ್ಮನಿರ್ಭರ ಭಾರತ’ ಅಭಿಯಾನದ ಅವಶ್ಯಕತೆ ಉದ್ಭವಿಸುತ್ತಿರಲಿಲ್ಲ ! – ಪ್ರಧಾನಿ ಮೋದಿ

ಅಕ್ಟೋಬರ್ ೨ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ದಿನವಾಗಿದೆ. ಈ ದಿನ ಮ. ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಗಳನ್ನು ಸ್ಮರಿಸುವ ದಿನವಾಗಿದೆ. ಆರ್ಥಿಕತೆಯ ಬಗ್ಗೆ ಗಾಂಧಿಯವರ ಏನು ವಿಚಾರಗಳಿದ್ದವೋ, ಅವುಗಳನ್ನು ಅಂಗೀಕರಿಸುತ್ತಿದ್ದರೇ, ಅವುಗಳನ್ನು ಅರ್ಥಮಾಡಿಕೊಂಡಿದ್ದರೆ ಮತ್ತು ನಾವು ಆ ಮಾರ್ಗವನ್ನು ಅನುಸರಿಸಿದ್ದರೆ, ಇಂದು ‘ಆತ್ಮನಿರ್ಭರ ಭಾರತ’ ಅಭಿಯಾನದ ಅಗತ್ಯವಿರಲಿಲ್ಲ

ಕೊರೋನಾ ಚೀನಾದಿಂದ ಬಂದಿರುವುದನ್ನು ನಾವು ಎಂದಿಗೂ ಮರೆಯುವುದಿಲ್ಲ, ಆದ್ದರಿಂದ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಚೀನಾದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತೇವೆ ! – ಡೊನಾಲ್ಡ್ ಟ್ರಂಪ್

ಟ್ರಂಪ್ ಇನ್ನೂ ಅಧಿಕಾರದಲ್ಲಿದ್ದಾರೆ, ಆದ್ದರಿಂದ ಈಗ ಚೀನಾದೊಂದಿಗೆ ಸಂಬಂಧವನ್ನು ಏಕೆ ಕಡಿದುಕೊಳ್ಳಬಾರದು ? ಅಥವಾ ಅವರು ಭಾರತೀಯ ರಾಜಕಾರಣಿಗಳಂತೆ ಸುಳ್ಳು ಭರವಸೆ ನೀಡಿ ಜನರನ್ನು ಮರುಳು ಮಾಡುತ್ತಿದ್ದಾರೆಯೇ ? ವಾಷಿಂಗ್ಟನ್ (ಅಮೇರಿಕಾ) – ಚೀನಾದಿಂದ ಕೊರೋನಾ ಬಂದಿರುವುದು ನಾವು ಎಂದಿಗೂ ಮರೆಯುವುದಿಲ್ಲ. ‘ದೇಶದ ಜನರು ನಮ್ಮನ್ನು ಪುನಃ ಅಧಿಕಾರಕ್ಕೆ ತರಲು ಮತ ಚಲಾಯಿಸಿದರೆ, ಅಮೆರಿಕವು ಚೀನಾದೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳುತ್ತದೆ’ ಎಂಬ ಆಶ್ವಾಸನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಧ್ಯಕ್ಷೀಯ ಪ್ರಚಾರದಲ್ಲಿ ಹೇಳಿದ್ದಾರೆ. ನವೆಂಬರ್ ೩ … Read more

ಭಾರತ ಇದ್ದಕ್ಕಿದ್ದಂತೆ ಚೀನಾ ಮೇಲೆ ದಾಳಿ ಮಾಡಬಹುದಾದರಿಂದ ಜಾಗರೂಕರಾಗಿರಿ ! – ಚೀನಾದ ನಿವೃತ್ತ ಸೈನ್ಯಾಧಿಕಾರಿ

ಭಾರತವು ಗಡಿಯಲ್ಲಿ ತನ್ನ ಸೈನ್ಯದ ಸಂಖ್ಯೆಯನ್ನು ೫೦ ಸಾವಿರದಿಂದ ೧ ಲಕ್ಷಕ್ಕೆ ಹೆಚ್ಚಿಸಿದೆ. ಸೈನ್ಯವು ಚೀನಾದ ಗಡಿಯಿಂದ ೫೦ ಕಿ.ಮೀ ದೂರದಲ್ಲಿ ನೇಮಿಸಿದೆ. ಕೆಲವೇ ಗಂಟೆಗಳಲ್ಲಿ ಅವರು ಇದ್ದಕ್ಕಿದ್ದಂತೆ ಆಕ್ರಮಣ ಮಾಡಿ ಚೀನಾವನ್ನು ಪ್ರವೇಶಿಸಬಹುದು.

ದೆಹಲಿ ಗಲಭೆ ಮತ್ತು ಸಿಎಎ ವಿರೋಧಿ ಆಂದೋಲನದಲ್ಲಿ ಐ.ಎಸ್.ಐ ಕೈವಾಡ ! – ದೆಹಲಿ ಪೊಲೀಸ

ದೆಹಲಿ ಗಲಭೆಗಳು, ಹಾಗೆಯೇ ಸಿಎಎ ಮತ್ತು ಎನ್.ಆರ್.ಸಿ.ಯ ವಿರುದ್ಧದ ಆಂದೋಲನಗಳ ಹಿಂದೆ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐ.ಎಸ್.ಐನ ಕೈವಾಡ ಇರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಐ.ಎಸ್.ಐ.ನ ಆದೇಶದ ಮೇರೆಗೆ ಖಲಿಸ್ತಾನ್ ಪರ ಬೆಂಬಲಿಗರು ಕೂಡ ಆಂದೋಲನಕ್ಕೆ ಸೇರಿಕೊಂಡಿದ್ದರು ಎಂದು ತಿಳಿದುಬಂದಿದೆ.

ಮಾಲ್ಡೀವ್ಸ್ ಒಪ್ಪಿಗೆ ಇಲ್ಲದ ಕಾರಣ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ೧೯ ನೇ ಸಾರ್ಕ್ ಶೃಂಗಸಭೆ ರದ್ದು

೧೯ ನೇ ಸಾರ್ಕ್ ಶೃಂಗಸಭೆಯನ್ನು ಪಾಕಿಸ್ತಾನದಲ್ಲಿ ನಡೆಸಲು ಪ್ರಸ್ತಾಪಿಸಲಾಗಿತ್ತು; ಆದರೆ ಈ ಪ್ರಸ್ತಾಪವನ್ನು ತಡೆಯುವಲ್ಲಿ ಮಾಲ್ಡೀವ್ಸ್ ಭಾರತದ ಪರವಾಗಿ ನಿಂತಿತು. ಇದಕ್ಕೂ ಮುನ್ನ ೨೦೧೬ ರಲ್ಲಿ ಸಾರ್ಕ್ ಶೃಂಗಸಭೆಯನ್ನು ಮುಂದೂಡಲಾಗಿತ್ತು. ಆ ವರ್ಷ ಪಾಕಿಸ್ತಾನದಲ್ಲಿ ಸಮ್ಮೇಳನದ ಆಯೋಜಕವಾಗಿತ್ತು; ಆದರೆ ಪಾಕಿಸ್ತಾನ ಪ್ರಾಯೋಜಿತ ಉಗ್ರರು ಭಾರತೀಯ ಸೈನ್ಯದ ಮೇಲೆ ‘ಉರಿ ದಾಳಿ’ ನಡೆಸಿದರು.

ನಿಷೇಧಿಸಲಾಗಿದ್ದ ಚೀನಾದ ಆಪ್‌ಗಳು ಭಾರತದಲ್ಲಿ ಹೊಸ ರೂಪದಲ್ಲಿ ಪುನಃ ಸಕ್ರಿಯಗೊಂಡಿವೆ

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ನಂತರ ಭಾರತವು ಚೀನಾದ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ರದ್ದುಗೊಳಿಸಲು ಪ್ರಾರಂಭಿಸಿತು, ಜೊತೆಗೆ ಚೀನಾದ ಆಪ್‌ಗಳನ್ನು ನಿಷೇಧಿಸಿತು; ಆದರೆ ಈಗ ಅದೇ ಆಪ್ ಗಳು ಹೊಸ ಹೆಸರು ಮತ್ತು ಕೆಲವು ಬದಲಾವಣೆಗಳೊಂದಿಗೆ ಭಾರತಕ್ಕೆ ಮರಳಿದ್ದೂ ಅವು ಕೋಟಿಗಟ್ಟಲೆ ಸಂಚಾರವಾಣಿಗಳಲ್ಲಿ ಡೌನ್‌ಲೋಡ್ ಆಗಿವೆ, ಎಂಬ ಮಾಹಿತಿಯು ಬೆಳಕಿಗೆ ಬಂದಿದೆ.

ಶ್ರೀಕೃಷ್ಣ ಜನ್ಮಭೂಮಿಯ ಮೇಲಿನ ಶಾಹಿ ಈದ್ಗಾ ಮಸೀದಿಯ ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಕೋರಿ ಮಥುರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ೧೩.೩೭ ಎಕರೆ ಜಮೀನಿನ ಮಾಲೀಕತ್ವ ಮತ್ತು ಈ ಭೂಮಿಯಲ್ಲಿ ಶಾಹಿ ಇದ್ಗಾ ಮಸೀದಿಯ ಅತಿಕ್ರಮಣವನ್ನು ತೆರವುಗೊಳಿಸುವಂತೆ ಕೋರಿ ಅರ್ಜಿಯನ್ನು ಭಗವಾನ್ ಕೃಷ್ಣ ವಿರಾಜ್ ಮಾನ್, ಕಟರಾ ಕೇಶವ್ ದೇವ್ ಕೆವಾಟ್ ಮತ್ತು ರಂಜನಾ ಅಗ್ನಿಹೋತ್ರಿಯೊಂದಿಗೆ ಒಟ್ಟು ೬ ಜನರು ಸಲ್ಲಿಸಿದ್ದಾರೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ನಂತರ ಆಡಳಿತವು ಚಿಕ್ಕಬಳ್ಳಾಪುರದ ಬೆಟ್ಟದ ಮೇಲಿನ ಸರ್ಕಾರಿ ಭೂಮಿಯಲ್ಲಿ ಹಾಕಲಾಗಿದ್ದ ಅಕ್ರಮ ಶಿಲುಬೆ ಮತ್ತು ಯೇಸುವಿನ ಮೂರ್ತಿಯನ್ನು ತೆಗೆದುಹಾಕಿತು !

ಇಲ್ಲಿನ ಸೊಸೇಪಾಳ್ಯ ಬೆಟ್ಟದಲ್ಲಿಯ ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಶಿಲುಬೆ ಮತ್ತು ಯೇಸುವಿನ ಬೃಹತ್ ಮೂರ್ತಿಯನ್ನು ಜಿಲ್ಲಾಡಳಿತ ತೆಗೆದುಹಾಕಿದೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಕುರಿತು ಕರ್ನಾಟಕ ಉಚ್ಚನ್ಯಾಯಾಲಯವು ತೀರ್ಪು ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.