‘ಶ್ರೀಕೃಷ್ಣ ಜನ್ಮಭೂಮಿಯ ವಿವಾದದ ಮೂಲಕ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನ !’ – ಬಾಬರಿಯ ಪಕ್ಷದ ಸದಸ್ಯ ಇಕ್ಬಾಲ್ ಅನ್ಸಾರಿ

ಶ್ರೀಕೃಷ್ಣ ಜನ್ಮಭೂಮಿಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಪ್ರಕರಣ

ಶ್ರೀಕೃಷ್ಣಜನ್ಮಭೂಮಿ ಹಿಂದೂಗಳಿಗೆ ಸೇರಿದೆ. ಹಿಂದೂಗಳು ಬೇಳೆ ಬೇಯಿಸುತ್ತಾರೋ ಅಥವಾ ಅದಕ್ಕಾಗಿ ಬೇರೆ ಏನಾದರೂ ಮಾಡುತ್ತಾರೋ ಎಂಬುದು ಅವರ ಪ್ರಶ್ನೆ. ಮತಾಂಧರು ಅದರ ಬಗ್ಗೆ ಮಾತನಾಡುವ ಬದಲು, ಈ ಭೂಮಿಯನ್ನು ಹಿಂದೂಗಳಿಗೆ ನಮ್ರತೆಯಿಂದ ಹಿಂದಿರುಗಿಸಬೇಕು !

ಅಯೋಧ್ಯೆ (ಉತ್ತರ ಪ್ರದೇಶ) – ಮಥುರಾದಲ್ಲಿ ಶ್ರೀಕೃಷ್ಣಜನ್ಮಭೂಮಿ ಕುರಿತು ಹಿಂದೂಗಳು ಮತ್ತು ಮುಸ್ಲಿಮರಂತಹ ರಾಜಕಾರಣಿಗಳು ವಿವಾದವನ್ನು ಹುಟ್ಟುಹಾಕುತ್ತಿದ್ದಾರೆ. ಕೆಲವರು ಈ ಮೂಲಕ ತಮ್ಮ ಬೆಳೆ ಬೇಯಿಸಲು ಈ ವಾದವನ್ನು ಪ್ರಾರಂಭಿಸಲು ಬಯಸುತ್ತಾರೆ. ಹಿಂದೂ ಹಾಗೂ ಮುಸಲ್ಮಾನ ಹೀಗೆ ರಾಜಕೀಯ ಮಾಡದೇ ಇದ್ದರೇ, ಇಂದು ಭಾರತ ಜಗತ್ತಿನ ಅಗ್ರ ಸ್ಥಾನದಲ್ಲಿ ತಲುಪುವುದು, ಎಂದು ಶ್ರೀರಾಮಜನ್ಮಭೂಮಿಯ ಪ್ರಕರಣದ ಬಾಬರಿ ಮಸೀದಿಯ ಪಕ್ಷದ ಇಕ್ಬಾಲ್ ಅನ್ಸಾರಿಯವರು ಶ್ರೀಕೃಷ್ಣ ಜನ್ಮಭೂಮಿಯನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಅರ್ಜಿಯ ಬಗ್ಗೆ ಹೇಳಿದ್ದಾರೆ. ಬಾಬರಿ ಪ್ರಕರಣವು ೫೦ ವರ್ಷಗಳಿಂದ ನಡೆದಿತ್ತು ಎಂದು ಗಮನಿಸಬೇಕು’ ಎಂದು ಸಹ ಅವರು ಹೇಳಿದರು.

ಶ್ರೀಕೃಷ್ಣಜನ್ಮಭೂಮಿಗೆ ಆಂದೋಲನ ಮಾಡಲಾಗುವುದು ! – ವಿನಯ್ ಕಟಿಯಾರ್, ಬಜರಂಗದಳದ ಸಂಸ್ಥಾಪಕರು

ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಭಾಜಪ ಸರಕಾರ ಇರುವಾಗ ಆಂದೋಲನದ ಅವಶ್ಯಕತೆ ಏನು ? ಎಂದು ಹಿಂದೂಗಳಿಗೆ ಅನಿಸುತ್ತದೆ !

ವಿನಯ್ ಕಟಿಯಾರ್

ಈ ಅರ್ಜಿಯ ಬಗ್ಗೆ, ಬಜರಂಗದಳದ ಸಂಸ್ಥಾಪಕರಾದ ವಿನಯ್ ಕಟಿಯಾರ್ ಇವರು, ಎಲ್ಲಿ ಭಗವಾನ ಶ್ರೀಕೃಷ್ಣ ಜನಿಸಿದ ಸ್ಥಳ ಇದೆಯೋ ಅಲ್ಲೇ ಮಸೀದಿ ನಿರ್ಮಿಸಿದೆ ಎಂದು ಹೇಳಿದರು. ಅದರ ಮಾರ್ಗವು ಶ್ರೀಕೃಷ್ಣನ ಜನ್ಮಭೂಮಿಯಲ್ಲೇ ಹಾದುಹೋಗುತ್ತದೆ. ಇತರ ಪಂಥದ ಜನರು ಈ ಭೂಮಿಯ ಮೇಲೆ ಅಕ್ರಮವಾಗಿ ಅತಿಕ್ರಮಣ ಮಾಡಿದ್ದಾರೆ. ಆಡಳಿತವು ದೊಡ್ಡ ಆಂದೋಲನವಿಲ್ಲದೆ ಎಚ್ಚರಗೊಳ್ಳುವುದಿಲ್ಲ. ಇದಕ್ಕಾಗಿ ಒಂದು ನಮೂನೆಯನ್ನು ನಿರ್ಮಿಸಬೇಕು. ಇದರಲ್ಲಿ ಭಾಜಪ ಭಾಗವಹಿಸಲಿದ್ದು ಇತರ ಸಂಘಟನೆಗಳು ತಮ್ಮ ಕೆಲಸವನ್ನು ಮಾಡಲಿವೆ. ಅಯೋಧ್ಯೆ, ಕಾಶಿ ಮತ್ತು ಮಥುರಾವನ್ನು ಸ್ವತಂತ್ರಗೊಳಿಸುವುದಾಗಿ ಭಾಜಪ ನೀಡಿದ ಭರವಸೆ ಹಳೆಯದು. ಈ ಪೈಕಿ ಅಯೋಧ್ಯೆಯಲ್ಲಿ ಗೆಲುವು ಸಾಧಿಸಲಾಗಿದೆ. ಈಗ ಮಥುರಾ ಮತ್ತು ಕಾಶಿಗಾಗಿ ಆಂದೋಲನವನ್ನು ಪ್ರಾರಂಭಿಸಬೇಕು. ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.