ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸರತ್ ಜಹಾನ್ ಶ್ರೀ ದುರ್ಗಾ ದೇವಿಯಂತೆ ಉಡುಗೆ ತೊಟ್ಟಿದ್ದರಿಂದ ಮತಾಂಧರಿಂದ ಜೀವ ಬೆದರಿಕೆ

  • ಹಿಂದೂಗಳಿಗೆ ಸರ್ವಧರ್ಮಸಮಾಭಾವದ ಬುದ್ಧಿ ಹೇಳುವ ಜಾತ್ಯತೀತವಾದಿಗಳು ಹಾಗೂ ಪ್ರಗತಿ(ಅಧೋಗತಿ) ಪರರು ಯಾವ ಬಿಲದಲ್ಲಿ ಅಡಗಿದ್ದಾರೆ ? ಮಹಿಳಾ ಸಂಘಟನೆಗಳು ಮತ್ತು ಮಾನವ ಹಕ್ಕುಗಳ ಆಯೋಗಗಳು ಈಗ ಎಲ್ಲಿವೆ ?
  • ‘ಲವ್ ಜಿಹಾದ್’ ಮತ್ತು ಮತಾಂತರವನ್ನು ವಿರೋಧಿಸುವಾಗ ಮಾತನಾಡುವವರು ಈಗ ಏಕೆ ಮೌನವಾಗಿದ್ದಾರೆ ?
  • ಯಾರೂ ಈ ರೀತಿಯ ದೇವತೆಗಳನ್ನು ಮಾನವೀಕರಣಗೊಳಿಸುವುದು ಅಪೇಕ್ಷಿತವಿಲ್ಲ !

ಕೋಲಕಾತಾ (ಬಂಗಾಲ) – ಬಂಗಾಲದ ತೃಣಮೂಲ ಕಾಂಗ್ರೆಸ್‌ನ ಸಂಸದೆ ಹಾಗೂ ನಟಿ ನುಸರತ್ ಜಹಾನ್ ಅವರು ಮಹಾಲಯದ ದಿನದಂದು ತಮ್ಮ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ಶ್ರೀ ದುರ್ಗಾದೇವಿಯಂತೆ ವೇಷವನ್ನು ತೊಟ್ಟಿದ್ದರು, ಅದೇರೀತಿ ಅವರು ಸೆಪ್ಟೆಂಬರ್ ೨೦ ರಂದು ಶ್ರೀ ದುರ್ಗಾಪೂಜೆ ಮಾಡುವ ಒಂದು ವೀಡಿಯೊವನ್ನು ಸಹ ಪ್ರಸಾರ ಮಾಡಿದ್ದರು. ಈ ಬಗ್ಗೆ ಮತಾಂಧರು ನುಸರತ್‌ಗೆ ಜೀವಬೆದರಿಕೆ ಹಾಕಿದ್ದಾರೆ. ನುಸರತ್ ಜಹಾನ್ ಇವರು ಹಿಂದೂ ಯುವಕನೊಂದಿಗೆ ಮದುವೆಯಾಗಿದ್ದಾರೆ.

೧. ಇನ್‌ಸ್ಟಾಗ್ರಾಮ್‌ನಲ್ಲಿ ‘ಎಂ.ಕೆ.ಖಾನ್ ೪೮೬’ ಹೆಸರಿನ ವ್ಯಕ್ತಿ ಬೆದರಿಕೆಯೊಡ್ಡುತ್ತಾ, ನಿಮ್ಮ ಸಾವು ಸಮೀಪಿಸಿದೆ. ಅಲ್ಲಾಹನಿಗೆ ಹೆದರಿ. ನೀವು ನಿಮ್ಮ ದೇಹವನ್ನೂ ಮುಚ್ಚಿಕೊಳ್ಳಲು ಸಾಧ್ಯವಿಲ್ಲವೇ ? ಎಂದು ಹೇಳಿದ್ದಾರೆ.

೨. ಇನ್‌ಸ್ಟಾಗ್ರಾಮ್‌ನಲ್ಲಿ, ಸಾಗರ್ ಹುಸೇನ್ ಎಂಬ ವ್ಯಕ್ತಿಯು, ನೀವು ಮುಸಲ್ಮಾನರಾಗಿದ್ದು ಹಿಂದೂಗಳನ್ನು ಏಕೆ ಬೆಂಬಲಿಸುತ್ತೀರಿ ? ಎಂದು ಪ್ರಶ್ನಿಸಿದ್ದಾನೆ.

೩. ನುಸರತ್ ಜಹಾನ್ ಅವರ ಕೈಯಲ್ಲಿರುವ ತ್ರಿಶೂಲವನ್ನು ಉಲ್ಲೇಖಿಸಿದ ಮೊಹಮ್ಮದ್ ಅನ್ವರ್, ನೀವು ಮುಸಲ್ಮಾನರಾಗಿದ್ದರೆ, ಅದು ನಿಮ್ಮ ಕೈಯಲ್ಲಿ ಹೇಗೆ ಇರುತ್ತದೆ ? ಅಲ್ಲಾಹನಿಗೆ ಶರಣಾಗಿ. ಹಿಂದೂಗಳ ಬಗ್ಗೆ ತಿರಸ್ಕಾರ ವ್ಯಕ್ತಪಡಿಸಿ ಎಂದು ಬರೆದಿದ್ದಾನೆ.