ನಾವು ಮ. ಗಾಂಧಿಯವರ ವಿಚಾರಗಳನ್ನು ಅನುಸರಿಸಿದ್ದರೆ, ಇಂದು ‘ಆತ್ಮನಿರ್ಭರ ಭಾರತ’ ಅಭಿಯಾನದ ಅವಶ್ಯಕತೆ ಉದ್ಭವಿಸುತ್ತಿರಲಿಲ್ಲ ! – ಪ್ರಧಾನಿ ಮೋದಿ

ನವದೆಹಲಿ – ಅಕ್ಟೋಬರ್ ೨ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ದಿನವಾಗಿದೆ. ಈ ದಿನ ಮ. ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಗಳನ್ನು ಸ್ಮರಿಸುವ ದಿನವಾಗಿದೆ. ಆರ್ಥಿಕತೆಯ ಬಗ್ಗೆ ಗಾಂಧಿಯವರ ಏನು ವಿಚಾರಗಳಿದ್ದವೋ, ಅವುಗಳನ್ನು ಅಂಗೀಕರಿಸುತ್ತಿದ್ದರೇ, ಅವುಗಳನ್ನು ಅರ್ಥಮಾಡಿಕೊಂಡಿದ್ದರೆ ಮತ್ತು ನಾವು ಆ ಮಾರ್ಗವನ್ನು ಅನುಸರಿಸಿದ್ದರೆ, ಇಂದು ‘ಆತ್ಮನಿರ್ಭರ ಭಾರತ’ ಅಭಿಯಾನದ ಅಗತ್ಯವಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ‘ಮನ ಕಿ ಬಾತ್’ ಈ ಆಕಾಶವಾಣಿಯಲ್ಲಿನ ತಿಂಗಳ ಕಾರ್ಯಕ್ರಮದ ಸಮಯದಲ್ಲಿ ಹೇಳಿದರು. ಈ ಸಮಯದಲ್ಲಿ ಅವರು ವಿವಿಧ ಅಂಶಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಮೋದಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಯಾರು ಭೂಮಿಗೆ ಸಂಪರ್ಕ ಹೊಂದಿದ್ದಾರೆಯೋ ಅವರು ಯಾವುದೇ ಬಿಕ್ಕಟ್ಟನ್ನು ಬಹಳ ಪರಿಣಾಮಕಾರಿಯಾಗಿ ಎದುರಿಸಬಹುದು. ನಮ್ಮ ದೇಶದ ರೈತರು ಇದಕ್ಕೆ ಉದಾಹರಣೆಯಾಗಿದೆ. ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ರೈತರು ಭೂಮಿಯಲ್ಲಿ ಧೃಡವಾಗಿ ನಿಲ್ಲುವ ಮೂಲಕ ಈ ಬಿಕ್ಕಟ್ಟನ್ನು ಎದುರಿಸಿದ್ದಾರೆ. ‘ಆತ್ಮನಿರ್ಭರ ಭಾರತ’ ಎಂಬ ಪರಿಕಲ್ಪನೆಯ ಬೆನ್ನೆಲುಬು ನಮ್ಮ ದೇಶದ ರೈತರಾಗಿದ್ದಾರೆ ಎಂದು ಹೇಳಿದರು.