ಭಾರತದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ೬೪೧ ಜನರನ್ನು ರಕ್ಷಿಸುತ್ತಾನೆ!

ಭಾರತದಲ್ಲಿ ಪ್ರತಿ ೧ ಲಕ್ಷ ಜನಸಂಖ್ಯೆಗೆ ಕೇವಲ ೧೫೬ ಪೊಲೀಸರು ಇದ್ದಾರೆ. ಅಂದರೆ `ಇಂಡಿಯಾ ಜಸ್ಟಿಸ್‌ ರಿಪೋರ್ಟ್ ೨೦೨೦’ ರ ಪ್ರಕಾರ ದೇಶದ ಒಬ್ಬ ಪೊಲೀಸ್ ಅಧಿಕಾರಿಯು ೬೪೧ ಜನರನ್ನು ರಕ್ಷಿಸುತ್ತಿದ್ದಾನೆ. ಈ ವರದಿಯನ್ನು ಟಾಟಾ ಟ್ರಸ್ಟ್ ಸಾರ್ವಜನಿಕವಾಗಿ ಪ್ರಕಟಿಸಿದೆ. ಬಿಹಾರದಂತಹ ರಾಜ್ಯದಲ್ಲಿ ೭೬ ಪೊಲೀಸರು ೧ ಲಕ್ಷ ಜನರನ್ನು ರಕ್ಷಿಸುತ್ತಿದ್ದಾರೆ.

ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಇಬ್ಬರು ಇರಾನಿನ ಸೈನಿಕರನ್ನು ಬಿಡುಗಡೆ ಮಾಡಿದ ಇರಾನ್

ಭಾರತದ ನಂತರ, ಈಗ ಇರಾನ್ ಕೂಡ ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್‌ ನಡೆಸಿ ತನ್ನ ಇಬ್ಬರು ಸೈನಿಕರನ್ನು ಬಿಡುಗಡೆ ಮಾಡಿದೆ. ಇರಾನ್‌ನ `ರೆವಲ್ಯೂಶನರಿ ಗಾರ್ಡ್ಸ’ಗಳು ಜೈಶ್-ಎ-ಅದಲ್ ಜಿಹಾದಿ ಗುಂಪಿನ ಅಡಗುತಾಣಗಳ ಮೇಲೆ ದಾಳಿ ನಡೆಸಿ ತನ್ನ ಸೈನಿಕರನ್ನು ಬಿಡುಗಡೆ ಮಾಡಿದೆ.

ತಂಬಾಕು ಮಾತ್ರವಲ್ಲ, ಮೈದಾ, ಪಾಪ್‌ಕಾರ್ನ್, ಆಲೂಗೆಡ್ಡೆ ಚಿಪ್ಸ್, ಸಂಸ್ಕರಿಸಿದ ಮಾಂಸ ಇತ್ಯಾದಿಗಳಿಂದ ಕ್ಯಾನ್ಸರ್ ಬರುತ್ತದೆ

ವಿಶ್ವದಲ್ಲೇ ಸಾವಿಗೆ ಕ್ಯಾನ್ಸರ್ ಎರಡನೇ ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ೨೦೧೮ ರಲ್ಲಿ ೯೬ ಲಕ್ಷ ಜನರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ಕ್ಯಾನ್ಸರ್ ಆಗಲು ದೈನಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಪ್ರಭಾವವಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಜಲಂಧರ್ (ಪಂಜಾಬ್) ನಲ್ಲಿ ಅಜ್ಞಾತರಿಂದ ಗುಂಡಿನ ದಾಳಿ, ಅಪ್ರಾಪ್ತೆ ಮತ್ತು ಅರ್ಚಕರು ಗಾಯಾಳು

ಇಲ್ಲಿನ ಫಲ್ಲೌರ್ ಗ್ರಾಮದ ದೇವಾಲಯದ ಅರ್ಚಕ ಸಂತ ಜ್ಞಾನ ಮೇಲೆ ಅಜ್ಞಾತರೊಬ್ಬರು ಗುಂಡು ಹಾರಿಸಿದ್ದಾರೆ. ಅದರಲ್ಲಿ ಅರ್ಚಕ ಸಂತ ಜ್ಞಾನ ಇವರಿಗೆ ಮೂರು ಗುಂಡುಗಳು ತಗುಲಿದ್ದು, ಅಪ್ರಾಪ್ತ ಬಾಲಕಿಯೂ ಗಾಯಗೊಂಡಿದ್ದಾಳೆ.

ವಿಶ್ವದ ಯಾವುದೇ ದೇಶದ ಸರ್ಕಾರ ರೈತರ ಆಂದೋಲನವನ್ನು ಬೆಂಬಲಿಸಿಲ್ಲ! – ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಸ್ಪಷ್ಟನೆ

ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಇವರು ರೈತರ ಚಳವಳಿಯ ಬಗ್ಗೆ ಭಾರತದ ಮಿತ್ರರಾಷ್ಟ್ರವಾಗಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹೇಳಿಕೆ ನೀಡಿದ್ದರು.

ಕೃಷಿ ಕಾನೂನಿಗೆ ಅಮೇರಿಕಾ ಬೆಂಬಲ; ಆದರೆ ಅಂತರ್ಜಾಲ ನಿಷೇಧಕ್ಕೆ ವಿರೋಧ

ಎರಡೂ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ಸಂವಾದದ ಮೂಲಕ ಬಗೆಹರಿಯುವುದನ್ನು ನೋಡಲು ನಾವು ಬಯಸುತ್ತೇವೆ ಎಂದು ಅಮೇರಿಕಾ ಹೇಳಿದೆ. ಈ ಹೇಳಿಕೆಯೊಂದಿಗೆ ಭಾರತ ಸರ್ಕಾರವು ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳಿಗೆ ಅಮೇರಿಕಾ ಸರ್ಕಾರ ಮೊದಲ ಬಾರಿ ಬೆಂಬಲ ಸೂಚಿಸಿದೆ.

ಇಡೀ ದೇಶದಲ್ಲಿ ಮತಾಂತರ ವಿರೋಧಿ ಕಾನೂನು ರೂಪಿಸುವ ವಿಚಾರ ಇಲ್ಲ ! – ಕೇಂದ್ರ ಸರಕಾರ

ಕೇಂದ್ರ ಸರಕಾರ ಇಂತಹ ಕಾನೂನು ಜಾರಿಗೊಳಿಸದಿದ್ದರೆ, ವಿವಿಧ ರೀತಿಯಲ್ಲಿ ಆಗುವ ಹಿಂದೂಗಳ ಮತಾಂತರವನ್ನು ಯಾರು ತಡೆಯುತ್ತಾರೆ, ಎಂಬ ಪ್ರಶ್ನೆಯನ್ನು ಯಾರು ಉತ್ತರಿಸುತ್ತಾರೆ ?

ಅಂತರರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕಿ ರಿಹಾನಾಳಿಂದ ಭಾರತೀಯ ರೈತರ ಆಂದೋಲನಕ್ಕೆ ಬೆಂಬಲ

ಇದು ರೈತ ಚಳವಳಿಯ ಬಗ್ಗೆ ಅಂತರರಾಷ್ಟ್ರೀಯ ಚರ್ಚೆ ನಡೆಸಿ ಭಾರತದ ಪ್ರತಿಮೆಯನ್ನು ಕೆಡಿಸುವ ಪಿತೂರಿಯಾಗಿದೆ. ಇದಕ್ಕಾಗಿ ಸರಕಾರವು ತನ್ನ ಪಕ್ಚವನ್ನು ಮಂಡಿಸಿ ಚಳವಳಿಯಲ್ಲಿ ನುಸುಳಿರುವ ಸಮಾಜ ವಿರೋಧಿಗಳ ಬಗ್ಗೆ ಮಾಹಿತಿಯನ್ನು ಹೊರತರುವುದು ಆವಶ್ಯಕವಾಗಿದೆ !

ರೈತರ ಸೂತ್ರಗಳ ಬಗ್ಗೆ ರಾಜ್ಯಸಭೆಯಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಆಪ್‌ನ ೩ ಸಂಸದರು ಒಂದು ದಿನಕ್ಕಾಗಿ ಅಮಾನತ್ತು

ರೈತರ ಆಂದೋಲನದ ಬಗ್ಗೆ ರಾಜ್ಯಸಭೆಯಲ್ಲಿ ಗಲಾಟೆ ಮಾಡಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದರಾದ ಸಂಜಯ ಸಿಂಗ್, ಸುಶೀಲ ಗುಪ್ತಾ ಮತ್ತು ಎನ್.ಡಿ. ಗುಪ್ತಾ ಎಂಬ ೩ ಸಂಸದರನ್ನು ಅಮಾನತ್ತುಗೊಳಿಸಲಾಗಿದೆ.

ಚೀನಾ ನೆರೆಯ ದೇಶಗಳನ್ನು ಬೆದರಿಸುವುದು ಮತ್ತು ಭಯಹುಟ್ಟಿಸುವುದರಿಂದ ನಾವು ಚಿಂತಿತರಾಗಿದ್ದೇವೆ! – ಅಮೇರಿಕಾ

ಗಡಿ ವಿವಾದಗಳ ಶಾಂತಿಯುತ ಇತ್ಯರ್ಥಕ್ಕೆ ಶಾಂತಿಯುತ ಮಾತುಕತೆ ಅತ್ಯಗತ್ಯ, ಅದನ್ನು ನಾವು ಬೆಂಬಲಿಸುತ್ತೇವೆ; ಆದರೆ ಚೀನಾದಿಂದ ನೆರೆಯ ದೇಶಗಳನ್ನು ಬೆದರಿಸುವುದು ಹಾಗೂ ಭಯ ಹುಟ್ಟಿಸುವುದರ ಬಗ್ಗೆ ನಾವು ಚಿಂತಿತರಾಗಿದ್ದೇವೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರೆ ಎಮಿಲಿ ಜೆ. ಹಾರ್ನ್ ಹೇಳಿದ್ದಾರೆ.