ರೈತರ ಸೂತ್ರಗಳ ಬಗ್ಗೆ ರಾಜ್ಯಸಭೆಯಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಆಪ್‌ನ ೩ ಸಂಸದರು ಒಂದು ದಿನಕ್ಕಾಗಿ ಅಮಾನತ್ತು

ಗಲಭೆ ಮಾಡುವ ಅಂತಹ ಸಂಸದರ ಸದಸ್ಯತ್ವವನ್ನು ರದ್ದುಪಡಿಸಿ ಅವರಿಂದ ದಂಡ ವಸೂಲಿ ಮಾಡುವುದು ಆವಶ್ಯಕವಾಗಿದೆ !

ನವ ದೆಹಲಿ – ರೈತರ ಆಂದೋಲನದ ಬಗ್ಗೆ ರಾಜ್ಯಸಭೆಯಲ್ಲಿ ಗಲಾಟೆ ಮಾಡಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದರಾದ ಸಂಜಯ ಸಿಂಗ್, ಸುಶೀಲ ಗುಪ್ತಾ ಮತ್ತು ಎನ್.ಡಿ.ಗುಪ್ತಾ ಎಂಬ ೩ ಸಂಸದರನ್ನು ಅಮಾನತ್ತುಗೊಳಿಸಲಾಗಿದೆ. ಈ ಸಂಸದರು ಸ್ಪೀಕರ್ ಸೀಟಿನ ಮುಂಭಾಗದಲ್ಲಿರುವ ತೆರೆದ ಜಾಗದಲ್ಲಿ ಬಂದು ಘೋಷಣೆಗಳನ್ನು ಕೂಗಿದರು. ನಂತರ ಅವರನ್ನು ಮಾರ್ಷಲ್ ಗಳ ಸಹಾಯದಿಂದ ಸಭೆಯಿಂದ ಹೊರಗೆ ಕರೆದೊಯ್ಯಲಾಯಿತು. ಈ ಮೂವರು ಸಂಸದರನ್ನು ಸದನದ ಕಾರ್ಯಕಲಾಪದಿಂದ ಒಂದು ದಿನದ ಮಟ್ಟಿಗೆ ಅಮಾನತ್ತುಗೊಳಿಸುವಂತೆ ಸ್ಪೀಕರ್ ಆದೇಶಿಸಿದರು. ಈ ನಿಟ್ಟಿನಲ್ಲಿ ರಾಜ್ಯಸಭಾ ಸ್ಪೀಕರ್ ವೆಂಕಯ್ಯ ನಾಯ್ಡು ಅವರು, ‘ರೈತ’ರ ವಿಷಯದ ಬಗ್ಗೆ ಚರ್ಚಿಸಲು ಸಮಯ ಬಂದಿರುವಾಗ, ಈ ಘೋಷಣೆಯನ್ನು ಏಕೆ ಮಾಡಲಾಗುತ್ತಿದೆ ? ಈ ಸರ್ವಾಧಿಕಾರ ನಡೆಯುವುದಿಲ್ಲ’ ಎಂದು ಹೇಳಿದರು.