ಇಡೀ ದೇಶದಲ್ಲಿ ಮತಾಂತರ ವಿರೋಧಿ ಕಾನೂನು ರೂಪಿಸುವ ವಿಚಾರ ಇಲ್ಲ ! – ಕೇಂದ್ರ ಸರಕಾರ

ಕೇಂದ್ರ ಸರಕಾರ ಇಂತಹ ಕಾನೂನು ಜಾರಿಗೊಳಿಸದಿದ್ದರೆ, ವಿವಿಧ ರೀತಿಯಲ್ಲಿ ಆಗುವ ಹಿಂದೂಗಳ ಮತಾಂತರವನ್ನು ಯಾರು ತಡೆಯುತ್ತಾರೆ, ಎಂಬ ಪ್ರಶ್ನೆಯನ್ನು ಯಾರು ಉತ್ತರಿಸುತ್ತಾರೆ ?

ಶ್ರೀ. ಜಿ. ಕಿಶನ್ ರೆಡ್ಡಿ

ನವದೆಹಲಿ – ಮತಾಂತರದ ವಿಷಯವು ರಾಜ್ಯಗಳ ವ್ಯಾಪ್ತಿಗೆ ಬರುತ್ತಿರುವುದರಿಂದ, ಆದ್ದರಿಂದ ಮತಾಂತರ ಅಥವಾ ಅಂತರ್ಜಾತಿ ವಿವಾಹಗಳನ್ನು ನಿಷೇಧಿಸುವ ಯಾವುದೇ ಕಾನೂನನ್ನು ಜಾರಿಗೆ ತರುವ ಉದ್ದೇಶವಿಲ್ಲ ಎಂದು ಕೇಂದ್ರವು ಸಂಸತ್ತಿನಲ್ಲಿ ತಿಳಿಸಿದೆ. ಕೇರಳದ ೫ ಕಾಂಗ್ರೆಸ್ ಸಂಸದರು ಕೇಳಿದ ಪ್ರಶ್ನೆಗೆ ಸರಕಾರ ಈ ಉತ್ತರವನ್ನು ನೀಡಿತು.

೧. ಕಾನೂನು-ಸುವ್ಯವಸ್ಥೆ ಮತ್ತು ಪೊಲೀಸ್ ಇವು ರಾಜ್ಯದ ವಿಷಯಗಳಾಗಿವೆ ಇದಕ್ಕಾಗಿಯೇ ಮತಾಂತರಕ್ಕೆ ಸಂಬಂಧಿಸಿದ ಅಪರಾಧಗಳ ತಡೆಗಟ್ಟುವಿಕೆ, ಪತ್ತೆ, ನೋಂದಣಿ, ತನಿಖೆ ಮತ್ತು ಕಾನೂನು ಕ್ರಮಗಳು ಮುಖ್ಯವಾಗಿ ರಾಜ್ಯ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳವಳಕಾರಿ ವಿಷಯವಾಗಿದೆ. ಕಾನೂನು ಕ್ರಮಕೈಗೊಳ್ಳುವ ಸಂಸ್ಥೆಗಳಿಗೆ ನಿಯಮಗಳ ಉಲ್ಲಂಘನೆ ಕಂಡುಬಂದಾಗ, ಅವರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದರು.

೨. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸರಕಾರಗಳು ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿವೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಹರಿಯಾಣ, ಅಸ್ಸಾಂ ಮತ್ತು ಕರ್ನಾಟಕದಲ್ಲಿಯೂ ಇದೇ ರೀತಿಯ ಕಾನೂನು ಜಾರಿಗೆ ತರಲಾಗುವುದು ಎಂದು ಊಹಿಸಲಾಗುತ್ತಿದೆ.