ಚೀನಾ ನೆರೆಯ ದೇಶಗಳನ್ನು ಬೆದರಿಸುವುದು ಮತ್ತು ಭಯಹುಟ್ಟಿಸುವುದರಿಂದ ನಾವು ಚಿಂತಿತರಾಗಿದ್ದೇವೆ! – ಅಮೇರಿಕಾ

ಅಮೇರಿಕಾವು ಕೇವಲ ಇಂತಹ ಹೇಳಿಕೆಗಳನ್ನು ನೀಡಿ ಸುಮ್ಮನಾಗದೇ ಚೀನಾದ ವಿರುದ್ಧ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ!

ವಾಷಿಂಗ್ಟನ್ (ಅಮೇರಿಕಾ) – ನಾವು ಗಡಿಯ ಪರಿಸ್ಥಿತಿಯತ್ತ ನಿಗಾ ಇಟ್ಟಿದ್ದೇವೆ. ಭಾರತ ಮತ್ತು ಚೀನಾ ಸರ್ಕಾರಗಳ ನಡುವೆ ಚರ್ಚೆಗಳು ನಡೆಯುತ್ತಿವೆ ಎಂದು ನಮಗೆ ತಿಳಿದಿದೆ. ಗಡಿ ವಿವಾದಗಳ ಶಾಂತಿಯುತ ಇತ್ಯರ್ಥಕ್ಕೆ ಶಾಂತಿಯುತ ಮಾತುಕತೆ ಅತ್ಯಗತ್ಯ, ಅದನ್ನು ನಾವು ಬೆಂಬಲಿಸುತ್ತೇವೆ; ಆದರೆ ಚೀನಾದಿಂದ ನೆರೆಯ ದೇಶಗಳನ್ನು ಬೆದರಿಸುವುದು ಹಾಗೂ ಭಯ ಹುಟ್ಟಿಸುವುದರ ಬಗ್ಗೆ ನಾವು ಚಿಂತಿತರಾಗಿದ್ದೇವೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರೆ ಎಮಿಲಿ ಜೆ. ಹಾರ್ನ್ ಹೇಳಿದ್ದಾರೆ.

ಭಾರತದ ಗಡಿಗಳಲ್ಲಿ ನುಸುಳಿ ಚೀನಾ ಭಾರತದ ಭೂಪ್ರದೇಶದ ಮೇಲೆ ಹಿಡಿತ ಸಾಧಿಸಲು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಪತ್ರಕರ್ತರು ಹಾರ್ನ್‌ರನ್ನು ಪ್ರಶ್ನಿಸಿದರು. ಆ ಸಮಯದಲ್ಲಿ ಅವರು ಮೇಲಿನ ಹೇಳಿಕೆ ನೀಡಿದರು. ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ನಾವು ನಮ್ಮ ಸ್ನೇಹಿತರು, ಪಾಲುದಾರರು ಮತ್ತು ಮಿತ್ರ ರಾಷ್ಟ್ರಗಳೊಂದಿಗೆ ನಿಲ್ಲುತ್ತೇವೆ.