ಕೃಷಿ ಕಾನೂನಿಗೆ ಅಮೇರಿಕಾ ಬೆಂಬಲ; ಆದರೆ ಅಂತರ್ಜಾಲ ನಿಷೇಧಕ್ಕೆ ವಿರೋಧ

ನವ ದೆಹಲಿ: ಭಾರತೀಯ ಮಾರುಕಟ್ಟೆಗಳ ಗುಣಮಟ್ಟವನ್ನು ಹೆಚ್ಚಿಸುವ ಬದಲಾವಣೆಗಳು ಮತ್ತು ಹೆಚ್ಚಿನ ಹೂಡಿಕೆಗೆ ಆದ್ಯತೆ ನೀಡುವ ಖಾಸಗಿ ವಲಯದ ಬದಲಾವಣೆಗಳನ್ನು ಅಮೆರಿಕ ಸ್ವಾಗತಿಸುತ್ತದೆ. ಯಾವುದೇ ಶಾಂತಿಯುತ ಪ್ರತಿಭಟನೆಯು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ. ಶಾಂತಿಯುತ ಪ್ರತಿಭಟನೆಯನ್ನು ಭಾರತೀಯ ಸರ್ವೋಚ್ಚ ನ್ಯಾಯಾಲಯವೂ ಎತ್ತಿಹಿಡಿದಿದೆ. ಎರಡೂ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ಸಂವಾದದ ಮೂಲಕ ಬಗೆಹರಿಯುವುದನ್ನು ನೋಡಲು ನಾವು ಬಯಸುತ್ತೇವೆ ಎಂದು ಅಮೇರಿಕಾ ಹೇಳಿದೆ. ಈ ಹೇಳಿಕೆಯೊಂದಿಗೆ ಭಾರತ ಸರ್ಕಾರವು ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳಿಗೆ ಅಮೇರಿಕಾ ಸರ್ಕಾರ ಮೊದಲ ಬಾರಿ ಬೆಂಬಲ ಸೂಚಿಸಿದೆ. ಅಮೇರಿಕಾವು ಕೃಷಿ ಕಾನೂನನ್ನು ಬೆಂಬಲಿಸಿದ್ದರೂ, ‘ರೈತರಿಗೆ ಇಂಟರ್ನೆಟ್‌ದಂತಹ ಸೌಲಭ್ಯ ಸಿಗಬೇಕು’ ಎಂದೂ ಹೇಳಿದೆ. ದೆಹಲಿಯ ಪ್ರತಿಭಟನಾ ಸ್ಥಳದಲ್ಲಿ ಸರ್ಕಾರ ಇಂಟರ್ನೆಟ್ ನಿಷೇಧಿಸಿದೆ. ಹರಿಯಾಣದ ೭ ಜಿಲ್ಲೆಗಳಲ್ಲಿ ಇಂಟರ್ನೆಟ್ ನಿಷೇಧಿಸಲಾಗಿದೆ.

ರೈತರಿಗೆ ಯಾವುದೇ ಅಡೆತಡೆಯಿಲ್ಲದೆ ಮಾಹಿತಿ ಮತ್ತು ಅಂತರ್ಜಾಲ ಸೇವೆಗಳನ್ನು ಒದಗಿಸಬೇಕು ಎಂದು ಹೇಳಿ, ಇದು ಅವರ ವೈಚಾರಿಕ ಸ್ವಾತಂತ್ರ್ಯದ ಅಡಿಯಲ್ಲಿ ಮೂಲಭೂತ ಹಕ್ಕು, ಜೊತೆಗೆ ಪ್ರಜಾಪ್ರಭುತ್ವದ ಭಾಗವಾಗಿದೆ ಎಂದು ಅಮೆರಿಕಾ ಅಭಿಪ್ರಾಯಪಟ್ಟಿದೆ.