ಅಂತರರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕಿ ರಿಹಾನಾಳಿಂದ ಭಾರತೀಯ ರೈತರ ಆಂದೋಲನಕ್ಕೆ ಬೆಂಬಲ

ಭಾರತ ಸರಕಾರದಿಂದ ಟೀಕೆ

ನಟಿ ಕಂಗನಾ ರನೌತ್ ಅವರಿಂದ ವಿರೋಧ

ಇದು ರೈತ ಚಳವಳಿಯ ಬಗ್ಗೆ ಅಂತರರಾಷ್ಟ್ರೀಯ ಚರ್ಚೆ ನಡೆಸಿ ಭಾರತದ ಪ್ರತಿಮೆಯನ್ನು ಕೆಡಿಸುವ ಪಿತೂರಿಯಾಗಿದೆ. ಇದಕ್ಕಾಗಿ ಸರಕಾರವು ತನ್ನ ಪಕ್ಚವನ್ನು ಮಂಡಿಸಿ ಚಳವಳಿಯಲ್ಲಿ ನುಸುಳಿರುವ ಸಮಾಜ ವಿರೋಧಿಗಳ ಬಗ್ಗೆ ಮಾಹಿತಿಯನ್ನು ಹೊರತರುವುದು ಆವಶ್ಯಕವಾಗಿದೆ !

ನವದೆಹಲಿ – ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನವನ್ನು ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಪಾಪ್ ಗಾಯಕಿ ರಿಹಾನಾ ಟ್ವೀಟ್ ಮೂಲಕ ಬೆಂಬಲಿಸಿದ್ದಾರೆ. ‘ನಾವು ರೈತ ಚಳವಳಿಯ ಬಗ್ಗೆ ಏಕೆ ಮಾತನಾಡುತ್ತಿಲ್ಲ ?’, ಎಂದು ರಿಹಾನಾ ವಿಚಾರಿಸಿದ್ದಾಳೆ. ಅಮೇರಿಕಾದ ಸಿ.ಎನ್.ಎನ್. ಸುದ್ಧಿವಾಹಿನಿಯ ಜಾಲತಾಣದಲ್ಲಿ ‘ರೈತರ ಆಂದೋಲನದ ಸ್ಥಳದಲ್ಲಿ ಇಂಟರ್ನೆಟ್ ನಿಷೇಧ’ ಎಂದು ವರದಿ ಮಾಡಲಾಗಿದೆ. ಈ ಸುದ್ದಿಯನ್ನು ಉಲ್ಲೇಖಿಸಿ ರಿಹಾನಾ ಟ್ವೀಟ್ ಮಾಡಿದ್ದಾರೆ.

ರಿಹಾನಾ ಅವರ ಟ್ವೀಟ್‌ಗೆ ಭಾರತೀಯ ನಟಿ ಕಂಗನಾ ರನೌತ್ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದ್ದಾರೆ. ಅದರಲ್ಲಿ ಅವರು, ‘ಯಾರೂ ಇದರ ಬಗ್ಗೆ ಮಾತನಾಡುವುದಿಲ್ಲ; ಏಕೆಂದರೆ ಹೋರಾಡುವವರು ರೈತರಲ್ಲ, ಅವರು ಭಯೋತ್ಪಾದಕರು. ಅವರು ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ನೀವು ದಡ್ಡರು, ನಾವು ನಿಮ್ಮಂತೆ ದೇಶವನ್ನು ಮಾರಾಟ ಮಾಡಲು ಹೋಗುವುದಿಲ್ಲ.’

ಸತ್ಯಗಳನ್ನು ಅರ್ಥಮಾಡಿಕೊಳ್ಳದೇ ಪ್ರತಿಕ್ರಿಯಿಸುವುದು ಅಯೋಗ್ಯ ! – ಭಾರತ ಸರಕಾರ

ಭಾರತದ ವಿದೇಶಾಂಗ ಸಚಿವಾಲಯವೂ ರಿಹಾನಾಳ ಹೇಳಿಕೆಯನ್ನು ವಿರೋಧಿಸಿದೆ. ಸಚಿವಾಲಯವು ‘ಪ್ರಸಿದ್ಧ ವ್ಯಕ್ತಿಗಳು ಸ್ಫೋಟಕ ಸುದ್ದಿಯನ್ನು ಸೃಷ್ಟಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಹ್ಯಾಶ್‌ಟ್ಯಾಗ್ ಬಳಸಿ ಹೇಳಿಕೆಯನ್ನು ನೀಡುವ ಮೂಲಕ ಜನರನ್ನು ಆಕರ್ಷಿಸುವುದು ಯೋಗ್ಯವಾಗಿರದೇ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಆದ್ದರಿಂದ, ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುವ ಮೊದಲು ವಿಷಯವನ್ನು ತಿಳಿದುಕೊಳ್ಳುವುದು ಸೂಕ್ತವಾಗಿದೆ. ಭಾರತದ ಸಂಸತ್ತಿನಲ್ಲಿ ಇಡೀ ವಿಷಯವನ್ನು ಚರ್ಚಿಸಿ ಕೊನೆಯಲ್ಲಿ ಕೃಷಿಗೆ ಸಂಬಂಧಿಸಿದ ಕಾನೂನುಗಳನ್ನು ಅಂಗೀಕರಿಸಲಾಗಿದೆ.