ನಾಗಠಾಣಾ ಬುದ್ರುಕ (ನಾಂದೇಡ್ ಜಿಲ್ಲೆ) ಇಲ್ಲಿಯ ಶ್ರೀ ಷ.ಬ್ರ. ೧೦೮ ಬಾಲvಪ್ಪಸ್ವಿ ಶಿವಾಚಾರ್ಯ ನಿರ್ವಾಣರುದ್ರ ಪಶುಪತಿನಾಥ್ ಮಹಾರಾಜ್ ಸಹಿತ ಮತ್ತೋರ್ವರ ಹತ್ಯೆ

  • ಪದೇ ಪದೇ ಸಾಧು-ಸಂತರ ಹತ್ಯೆಯಾಗುವುದು ಇದು ಸಂತರ ಭೂಮಿ ಎಂದು ಹೇಳುವ ಮಹಾರಾಷ್ಟ್ರವನ್ನು ಕಳಂಕಿತಗೊಳಿಸುತ್ತಿರುವಂತೆ ಇದೆ ! ಇಂತಹ ಹಿಂಸಾತ್ಮಕ ಘಟನೆಗಳನ್ನು ತಡೆಯಲು ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಿದೆ !

  • ಆರೋಪಿಯ ಬಂಧನ

ನಾಂದೇಡ್, ಮೇ ೨೪ (ವಾರ್ತೆ) – ಜಿಲ್ಲೆಯ ಉಮರಿ ತಾಲೂಕಿನ ನಾಗಠಾಣಾ ಬುದ್ರುಕದಲ್ಲಿ ಮೇ ೨೩ ರ ರಾತ್ರಿ ಒಂದುವರೆಯ ಸಮಯದಲ್ಲಿ ಕೆಲವು ಕಳ್ಳರು ಶ್ರೀ ಷ. ಬ್ರ. ೧೦೮ ಬಾಲತಪಸ್ವೀ ಶಿವಾಚಾರ್ಯ ನಿರ್ವಾಣರುದ್ರ ಪಶುಪತಿನಾಥ್ ಮಹಾರಾಜರ ಮಠವನ್ನು ಪ್ರವೇಶಿಸಿ ಅವರಿಂದ ನಗದನ್ನು ಲೂಟಿ ಮಾಡಿದರು. ನಂತರ ಅವರ ಕುತ್ತಿಗೆಯನ್ನು ಹಿಸುಕಿ ಹತ್ಯೆ ಮಾಡಲಾಯಿತು, ಅದೇರೀತಿ ಅಲ್ಲಿಯ ಸ್ನಾನಗೃಹದಲ್ಲಿ ಭಗವಾನ ಶಿಂದೆ ಈ ವ್ಯಕ್ತಿಯ ಶವ ಸಿಕ್ಕಿದೆ. ಈ ಪ್ರಕರಣದಲ್ಲಿ ದೂರು ದಾಖಲಿಸಲಾಗಿದ್ದು, ಪರಾರಿ ಆಗಿದ್ದ ಸಾಯಿನಾಥ ಲಿಂಗಾಡೆ ಎಂಬವನನ್ನು ಪೊಲೀಸರು ತೆಲಂಗಾಣದಿಂದ ಬಂಧಿಸಿದ್ದಾರೆ. ಪಾಲ್ಘರ ಜಿಲ್ಲೆಯ ಇಬ್ಬರು ಸಾಧುಗಳು ಮತ್ತು ಅವರ ಚಾಲಕನನ್ನು ಜನಸಮೂಹಯು ಹತ್ಯೆಗೈದ ಘಟನೆಯು ಇನ್ನೂ ಮಾಸಿಲ್ಲ. ಅಂದಿನಿಂದ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಲ್ಲಿ ಸಾಧುಗಳ ಮೇಲೆ ಮಾರಣಾಂತಿಕ ಹಲ್ಲೆಯ ಘಟನೆ ನಡೆಯುತ್ತಲೇ ಇದ್ದರಿಂದ ಈ ಎಲ್ಲ ಸ್ತರಗಳಲ್ಲಿ ಖಂಡನೆ ವ್ಯಕ್ತವಾಗುತ್ತಿದೆ..

ಶ್ರೀ. ೧೦೮ ಬಾಲತಪಸ್ವಿ ಶಿವಾಚಾರ್ಯ ನಿರ್ವಾಣರುದ್ರ ಪಶುಪತಿನಾಥ್ ಮಹಾರಾಜ್ ಅವರ ಹತ್ಯೆಯ ನಂತರ, ಹಂತಕರು ಅವರದೇ ವಾಹನದಿಂದ ಪರಾರಿಯಾಗಲು ಪ್ರಯತ್ನಿಸುತ್ತಿರುವಾಗ ನೆರೆಹೊರೆಯವರು ಎಚ್ಚರಗೊಂಡರು. ಆದ್ದರಿಂದ ಹಂತಕರು ಓಡಿ ಹೋದರು ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದರು. ಈ ಘಟನೆಯಿಂದಾಗಿ ಭಕ್ತರಿಂದ ಹಾಗೂ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು ‘ಎಲ್ಲಿಯವರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸುವುದಿಲ್ಲವೋ ಅಲ್ಲಿಯ ವರೆಗೆ ಮೃತದೇಹವನ್ನು ವಶಕ್ಕೆ ಕೊಡುವುದಿಲ್ಲ”, ಎಂಬ ಅಲ್ಲಿಯ ಗ್ರಾಮಸ್ಥರು ಮಧ್ಯಾಹ್ನದ ವರೆಗೆ ಪಣತೊಟ್ಟಿದ್ದರು.
ಆರೋಪಿಯು ಅಪರಾಧಿ ಹಿನ್ನೆಲೆಯವನಾಗಿದ್ದು ಮಠದಲ್ಲಿ ನಡೆಸುತ್ತಿದ್ದ ಅನ್ನಛತ್ರದಲ್ಲಿ ಆತ ಊಟ ಮಾಡುತ್ತಿದ್ದನೆಂದು ತಿಳಿದುಬಂದಿದೆ.

ಸಂತರ ಹತ್ಯೆಯ ವಿರುದ್ಧ ಬೀದಿಗಿಳಿಯುವುದನ್ನು ಬಿಟ್ಟು ಬೇರೆ ಪರ್ಯಾಯವಿಲ್ಲ ! – ಸ್ಥಳೀಯ ನಾಗರಿಕರು

ಶ್ರೀ. ೧೦೮ ಬಾಲತಪಸ್ವಿ ಶಿವಾಚಾರ್ಯ ನಿರ್ವಾಣರುದ್ರ ಪಶುಪತಿನಾಥ್ ಮಹಾರಾಜ್‌ರ ಧರ್ಮಜಾಗೃತಿಯ ಕಾರ್ಯವು ಅತ್ಯಂತ ಅಮೂಲ್ಯ ಕೊಡುಗೆ ಇತ್ತು. ಈ ಕೊಡುಗೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಪೊಲೀಸ ಆಡಳಿತವು ಇದರ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಇಲ್ಲದಿದ್ದರೆ ಹಿಂದೂಗಳಿಗೆ ಸಂತರ ಹತ್ಯೆಯ ವಿರುದ್ಧ ಬೀದಿಗಿಳಿಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ, ಎಂದು ಸ್ಥಳೀಯ ನಾಗರೀಕರು ಎಚ್ಚರಿಕೆಯನ್ನು ನೀಡಿದ್ದಾರೆ.